ದಾವಣಗೆರೆ | ಘನತೆಯ ಸಾವಿನ ಹಕ್ಕು; ಕರ್ನಾಟಕದ ಮೊದಲ ಫಲಾನುಭವಿಯಾಗಲು ನಿವೃತ್ತ ಶಿಕ್ಷಕಿ ಕರಿಬಸಮ್ಮ ತವಕ

Date:

Advertisements

ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಘನತೆಯಿಂದ ಮರಣ ಹೊಂದುವ ಹಕ್ಕು(ದಯಾಮರಣ) ಅನುಷ್ಠಾನ ಮಾಡುವಂತೆ ಕೋರಿ ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ʼಘನತೆಯ ಸಾವಿನ ಹಕ್ಕುʼ ಕರ್ನಾಟಕದಲ್ಲಿ ಜಾರಿಗೆ ಬಂದಿರುವುದು ಸಂತಸದ ಸಂಗತಿ. ಘನತೆಯಿಂದ ಸಾಯುವ ಹಕ್ಕಿನ ಕರ್ನಾಟಕದ ಮೊದಲ ಫಲಾನುಭವಿ ನಾನೇ ಆಗಲು ಬಯಸುತ್ತೇನೆ ಎಂದು ನಿವೃತ್ತ ಶಿಕ್ಷಕಿ ಎಚ್‌ ಬಿ ಕರಿಬಸಮ್ಮ ಹೇಳಿದರು.

ದಾವಣಗೆರೆಯಲ್ಲಿ ಈ ಕುರಿತು ಸುದ್ದಿಗೋಷ್ಟಿ ನಡೆಸಿರುವ ಇವರು, ಹಲವು ವರ್ಷಗಳ ನಿರಂತರ ಹೋರಾಟದ ನಂತರ, “ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕನ್ನು ನೀಡಲು ರಾಜ್ಯ ಸರ್ಕಾರ ಜನವರಿ 30ರಂದು ಸುತ್ತೋಲೆ ಹೊರಡಿಸಿದ್ದು, ಈಗ ತನ್ನ ಆಸೆಯನ್ನು ನನಸಾಗಿಸಿಕೊಳ್ಳುವ ಔಪಚಾರಿಕತೆಗಳಿಗಾಗಿ ಕುತೂಹಲದಿಂದ ಕಾಯುತ್ತಿದ್ದೇನೆ” ಎಂದು ಹರ್ಷ ವ್ಯಕ್ತಪಡಿಸಿದರು.

“ತನ್ನ ಜೀವನದ ಹಾದಿ ಅಚಲ ದೃಢನಿಶ್ಚಯದಿಂದ ಕೂಡಿದ್ದು, ಮೂರು ದಶಕಗಳಿಗೂ ಹೆಚ್ಚು ಕಾಲ ಬೆನ್ನಿನ ನರ ದೌರ್ಬಲ್ಯ(ಸ್ಲಿಪ್ಡ್‌ ಡಿಸ್ಕ್‌)ದಿಂದ ನರಳುತ್ತಿದ್ದೇನೆ. ಅಲ್ಲದೆ ಕರುಳು ಕ್ಯಾನ್ಸರ್‌ ಇರುವುದೂ ಪತ್ತೆಯಾಗಿದೆ. ಆರೋಗ್ಯ ಹದಗೆಡುತ್ತಿದ್ದರೂ, ಕಳೆದ 24 ವರ್ಷಗಳಿಂದ ಭಾರತದಲ್ಲಿ ಘನತೆಯಿಂದ ಸಾಯುವ ಹಕ್ಕಿಗಾಗಿ ಹೋರಾಡುತ್ತಿದ್ದು, ಮುಖ್ಯಮಂತ್ರಿ, ಪ್ರಧಾನಿ, ರಾಷ್ಟ್ರಪತಿ ಮತ್ತು ಸುಪ್ರೀಂ ಕೋರ್ಟ್‌ಗೂ ಪತ್ರಗಳನ್ನು ಬರೆದಿದ್ದೇನೆ” ಎಂದು ತಿಳಿಸಿದರು.

Advertisements

“ದೇಶದಲ್ಲಿ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರ ಸಂಖ್ಯೆ ದೊಡ್ಡದಿದೆ. ನನ್ನಂತೆ, ಅವರು ಘನತೆಯಿಂದ ಸಾಯುವ ಅವಕಾಶವಿಲ್ಲದೆ ಬಳಲುತ್ತಿದ್ದಾರೆ. ಈ ಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ನಾನು ಹೋರಾಟವನ್ನು ಪ್ರಾರಂಭಿಸಿದಾಗ, ಎಲ್ಲರೂ ಆಘಾತಕ್ಕೊಳಗಾಗಿದ್ದರು. ನನ್ನ ಕುಟುಂಬ ಸದಸ್ಯರು ಮತ್ತು ಸಂಬಂಧಿಕರೂ ಕೂಡ ಕ್ರಮೇಣ ದೂರವಾದರು” ಎಂದು ಹೇಳಿಕೊಂಡಿದ್ದಾರೆ.

“ಅನೇಕರು ಘನತೆಯಿಂದ ಸಾಯುವ ಹಕ್ಕಿನ ಪಟ್ಟಿಯಲ್ಲಿದ್ದಾರೆ, ಈ ಹಕ್ಕನ್ನು ಪಡೆಯಲು ಕಾಯುತ್ತಿದ್ದಾರೆ. ಆದರೆ ನಾನು ಘನತೆಯಿಂದ ಸಾಯುವ ಹಕ್ಕನ್ನು ಪಡೆಯುವಲ್ಲಿ ಕರ್ನಾಟಕದಲ್ಲಿ ಮೊದಲಿಗಳಾಗಲು ಬಯಸುತ್ತೇನೆ” ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ 2018ರಲ್ಲಿ ನಿಷ್ಕ್ರಿಯ ದಯಾಮರಣವನ್ನು ಕಾನೂನುಬದ್ಧಗೊಳಿಸಿದ್ದರೂ, ಇದೀಗ ಘನತೆಯಿಂದ ಸಾಯುವ ಹಕ್ಕನ್ನು ಜಾರಿಗೆ ತರಲು ಕರ್ನಾಟಕ ನಿರ್ಧರಿಸಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಈ ಕುರಿತು ಸ್ಪಷ್ಟೀಕರಣ ನೀಡಿದ್ದು, “ಈ ನಿರ್ಧಾರವನ್ನು ದಯಾಮರಣವೆಂದು ಗೊಂದಲಗೊಳಿಸಬಾರದು. ಇನ್ನೊಬ್ಬರಿಗೆ ಅವಲಂಬಿತರಾಗಿರುವ ಮತ್ತು ಜೀವ ಉಳಿಸುವ ಚಿಕಿತ್ಸೆಗೆ ಸ್ಪಂದಿಸದವರಿಗೆ ಮಾತ್ರ ಘನತೆಯಿಂದ ಸಾಯುವ ಹಕ್ಕು ಅನ್ವಯಿಸುತ್ತದೆ” ಎಂದು ಹೇಳಿದ್ದಾರೆ.‌

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ, ಮರು ಎಣಿಕೆಗೆ ಆಗ್ರಹ.

ಮಕ್ಕಳಿಲ್ಲದ ಕರಿಬಸಮ್ಮ ಅವರು ಘನತೆಯಿಂದ ಸಾಯುವ ಹಕ್ಕಿಗಾಗಿ ನಡೆಸಿದ ಹೋರಾಟದಿಂದ ತನ್ನ ಸಂಬಂಧಿಕರನ್ನು ದೂರಮಾಡಿಕೊಂಡಿದ್ದಾರೆ. ಪ್ರಸ್ತುತ ದಾವಣಗೆರೆಯ ವೃದ್ಧಾಶ್ರಮದಲ್ಲಿ ಪತಿಯೊಂದಿಗೆ ವಾಸಿಸುತ್ತಿರುವ ಅವರು ಈ ಹಕ್ಕಿಗಾಗಿ ಹೋರಾಟ ನಡೆಸುಲ್ಲಿ ವೈಯಕ್ತಿಕವಾಗಿ ಬಹುತೇಕ ವೆಚ್ಚ ಮಾಡಿದ್ದು, ಅದರ ಅನ್ವೇಷಣೆಯಲ್ಲಿ ತನ್ನ ಆಸ್ತಿ, ಹಣಕಾಸು ಮತ್ತು ಸಂಬಂಧಗಳನ್ನು ಕಳೆದುಕೊಂಡಿದ್ದಾರೆ. ಆದರೆ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರು ಗೌರವಯುತ ಸಾವಿಗೆ ಅರ್ಹರು ಎಂಬ ನಂಬಿಕೆಯಲ್ಲಿ ದೃಢವಾಗಿದ್ದರು. ಕಳೆದ 16 ವರ್ಷಗಳಿಂದ ಆರೈಕೆ ಗೃಹದಲ್ಲಿ ವಾಸಿಸುತ್ತಿದ್ದು, ಕರಿಬಸಮ್ಮ(85) ಅವರು, ಎಲ್ಲ ಭೌತಿಕ ಸಂಪತ್ತಿನಿಂದ ದೂರವಿದ್ದು, ತಮ್ಮ ಕೊನೆಯ ಉಳಿತಾಯವಾದ ₹6 ಲಕ್ಷವನ್ನು ಗಡಿ ಭದ್ರತಾ ಪಡೆ(ಬಿಎಸ್ಎಫ್) ಸಿಬ್ಬಂದಿಯ ಕಲ್ಯಾಣಕ್ಕಾಗಿ ದಾನ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X