ಚಿತ್ರದುರ್ಗ | ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ, ಮರು ಎಣಿಕೆಗೆ ಆಗ್ರಹ.

Date:

ಯೂತ್ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ ಪಾರದರ್ಶಕವಾಗಿ ನೆಡೆದಿಲ್ಲ. ಚಿಕ್ಕ ಚಿಕ್ಕ ನೆಪ, ಕಾರಣಗಳನ್ನು ಮುಂದೆಮಾಡಿ ಮತಗಳನ್ನು ತಡೆಹಿಡಿಯಲಾಗಿದೆ ಹಾಗೂ ತಿರಸ್ಕರಿಸಲಾಗಿದೆ. ಅಂತಹ ಮತಗಳು ಸೇರಿಸಿ ಮರು ಎಣಿಕೆ ಮಾಡುವಂತೆ ಚಿತ್ರದುರ್ಗ ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿದ್ದ ಅರ್ಜುನ್ ಟಿಕೆ ಒತ್ತಾಯಿಸಿದರು.

- Advertisement -

ಚಿತ್ರದುರ್ಗದಲ್ಲಿ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿ, ಫೋಟೋ ಹೊಂದಿಕೆಯಾಗಿಲ್ಲ, ವೀಡಿಯೋದಲ್ಲಿ ಲೋಪವಿದೆ ಎನ್ನುವಂತಹ ನಾನಾ ಕಾರಣ ಕೊಟ್ಟು ನೈಜ ಮತದಾರರನ್ನು ತಿರಸ್ಕರಿಸಲಾಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 6 ರಿಂದ 7 ಸಾವಿರ ಮತದಾರರನ್ನು ನೊಂದಾಯಿಸಿದ್ದೇನೆ. ಆದರೆ ನನಗೆ 3800 ಮತಗಳು ಮಾತ್ರ ಬಂದಿವೆ. ಉಳಿದ ಮತಗಳು ಎಲ್ಲಿ? ಏನಾದವು? ಚುನಾವಣೆ ಪದ್ದತಿಯಲ್ಲಿ ಮತಗಟ್ಟೆಗೆ ಬಂದು ಮತದಾನ ಚಲಾಯಿಸುವ ಪದ್ಧತಿ ಬರಬೇಕು. ಚಿಕ್ಕ ಚಿಕ್ಕ ಕಾರಣಗಳಿಗಾಗಿ ಮತಗಳನ್ನು ತಡೆ ಹಿಡಿದು ತಿರಸ್ಕರಿಸಿರುವುದರಿಂದ ಹಿನ್ನಡೆಯಾಗಿದೆ. ಹಾಗಾಗಿ ಮರು ಎಣಿಕೆ ಮಾಡಬೇಕು” ಎಂದು ಅಭ್ಯರ್ಥಿ ಅರ್ಜುನ್ ಟಿ.ಕೆ. ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಈ ಸುದ್ದಿ ಓದಿದ್ದೀರಾ? .ಚಿತ್ರದುರ್ಗ | ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಬೆಸ್ಕಾಂ ಕಛೇರಿಗೆ ರೈತ ಸಂಘ ಮುತ್ತಿಗೆ.“ಯೂತ್‌ ಕಾಂಗ್ರೆಸ್‌ನಲ್ಲಿ ಪಕ್ಷದ ತತ್ವ ಸಿದ್ದಾಂತಗಳನ್ನಿಟ್ಟುಕೊಂಡು ಬೇರು ಮಟ್ಟದಿಂದ ಸಂಘಟಿಸಿದ್ದೇನೆ.‌ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ನಾನು ಗೆಲ್ಲಬೇಕಿತ್ತು. ಚುನಾವಣೆಯಲ್ಲಿ ಅಕ್ರಮ, ಮೋಸವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ” ಎಂದು ಆರೋಪಿಸಿದರು.

ಹಿರಿಯೂರು ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಕೇಶವ ಜೆ.ಜೆ.ಹಳ್ಳಿ ಮಾತನಾಡಿ, “ಹಿರಿಯೂರು ಯೂತ್ ಕಾಂಗ್ರೆಸ್ ಚುನಾವಣಾ ಫಲಿತಾಂಶದಲ್ಲಿ ಮೋಸವಾಗಿರುವ ಅನುಮಾನವಿದೆ.‌ 12200 ಮತಗಳು ಬಂದಿವೆ. 2390 ಮತಗಳು ತಿರಸ್ಕಾರವಾಗಿರುವುದು, ಚುನಾವಣೆಯ ಫಲಿತಾಂಶ ಪಾರದರ್ಶಕವಾಗಿಲ್ಲ‌ ಎಂದು ಕಂಡುಬರುತ್ತಿದೆ. ಮರು ಎಣಿಕೆಯಾಗಬೇಕು. ಅಕ್ರಮ ನಡೆದಿರುವ ಬಗ್ಗೆ ಅನುಮಾನವಿದೆ. ಈ ಸಂಬಂಧ ಪಕ್ಷದ ನಾಯಕರುಗಳ ಗಮನಕ್ಕೆ ತರಲಾಗುವುದು” ಎಂದು ಅಸಮಾಧಾನ ವ್ಯಕ್ತಪಡಿಸಿದರು.‌

ಪತ್ರಿಕಾಗೋಷ್ಠಿಯಲ್ಲಿ ಕರುಣ, ಅಜೀಜ್ ಹಾಜರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು...

ಚಿತ್ರದುರ್ಗ | ನಿವೃತ್ತಿಯಲ್ಲೂ ಆಡಳಿತ ತರಬೇತಿ ಸೇವೆ : ವಿ. ಮಲ್ಲೇಶಪ್ಪ ಅವರಿಗೆ ಸನ್ಮಾನ

 ನಿವೃತ್ತಿಯ ನಂತರವೂ ತಮ್ಮ ಜ್ಞಾನ ಮತ್ತು ಅನುಭವವನ್ನು ಸರ್ಕಾರಿ ಅಧಿಕಾರಿ ಹಾಗೂ...

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ...

ಶೃಂಗೇರಿ ಮತ ಎಣಿಕೆ ವಿಡಿಯೋ ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ

2023ರ ಚುನಾವಣೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯ ವೀಡಿಯೋ...