ಪ್ರತಿಯೊಬ್ಬರಿಗೂ ಅವಶ್ಯಕತೆ ಇರುವ ಕಾರಣಕ್ಕಾಗಿಯೇ ಮಾನವ ಹಕ್ಕುಗಳು ಬೇಕಾಗುತ್ತವೆ. ಅದಕ್ಕಾಗಿಯೇ ಮಾನವ ಹಕ್ಕುಗಳನ್ನು ರಚಿಸಲಾಗಿದ್ದು, ಸಂವಿಧಾನದ 21 ಪರಿಚ್ಛೇದದಲ್ಲಿ ಮಾನವ ಹಕ್ಕುಗಳು ಗುರುತಿಸಲ್ಪಡುತ್ತವೆ ಎಂದು ಮಾನವ ಹಕ್ಕುಗಳ ಪ್ರತಿಪಾದಕ ಡಾ. ಲೋಹಿತ್ ನಾಯ್ಕರ್ ತಿಳಿಸಿದರು.
ದಾವಣಗೆರೆ ನಗರದ ಆರ್ ಎಲ್ ಕಾನೂನು ಕಾಲೇಜಿನಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಪ್ರತಿಯೊಬ್ಬರೂ ಸಾಮಾಜಿಕ ಜೀವಿ. ಹಾಗಾಗಿ ಎಲ್ಲರೂ ಕೂಡಿರಬೇಕು. ಪರಸ್ಪರ ಅಪೇಕ್ಷೆಗಳಂತೆ ಇರಬೇಕು. ಅದಕ್ಕಾಗಿ ರಾಜಕೀಯ ವ್ಯವಸ್ಥೆ ಸಹ ಇರಬೇಕಾಗುತ್ತದೆ. ಸಾಮಾಜಿಕ, ಆರ್ಥಿಕ, ವೈಯಕ್ತಿಕ ಅವಶ್ಯಕತೆಗೆ ಅನುಗುಣವಾಗಿ ಮಾನವ ಹಕ್ಕುಗಳು ರೂಪಿತವಾಗಿವೆ” ಎಂದು ತಿಳಿಸಿದರು.
“ವೈಯಕ್ತಿಕ ಅಭಿಲಾಷೆ ಪೂರೈಸಲು ಹಕ್ಕುಗಳು ಇರಬೇಕು. ಅವಶ್ಯಕತೆಯಿಂದ ಹಕ್ಕುಗಳು ಉದ್ಭವವಾಗುತ್ತವೆ. ಅದಕ್ಕೆ ರೂಪುರೇಷೆ ನೀಡುವ ಜೊತೆಗೆ ಸಮಾನ ವಿತರಣೆಗೆ ನ್ಯಾಯಾಂಗ ಇರಬೇಕು. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ನ್ಯಾಯ ಇರುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಮಸೀದಿ ಬಳಿ ಕೇಸರಿ ಧ್ವಜ ಕಟ್ಟಲು ವಿರೋಧ; ಗಲಾಟೆ ಆರೋಪ
“ಬೆಳಗಾವಿ ಜಿಲ್ಲೆಯ ವಂಟಿಮುರಿ ಗ್ರಾಮದಲ್ಲಿ ಈಚೆಗೆ ನಡೆದಂತಹ ದುರ್ಘಟನೆಯನ್ನು ಗಮನಿಸಿದ ಉಚ್ಛ ನ್ಯಾಯಾಲಯದ ನ್ಯಾಯ ಮೂರ್ತಿಗಳು ಕಳವಳ ವ್ಯಕ್ತಪಡಿಸಿರುವುದನ್ನು ಎಲ್ಲರೂ ಗಮನಿಸಬೇಕು. ಪಗತಿಪರ ರಾಜ್ಯ, ಅಭಿವೃದ್ಧಿ ಹೊಂದಿದ ಬೆಳಗಾವಿ ಜಿಲ್ಲೆಯ ಘಟನೆ ನೋಡಿದರೆ ಎಲ್ಲೋ ಒಂದು ಕಡೆ ಸಾಮಾಜಿಕ ಹೇಡಿತನ ಕಂಡುಬರುತ್ತದೆ” ಎಂದು ವಿಷಾದಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಜಿ ಎಸ್ ಯತೀಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್ ಎಚ್ ಅರುಣ್ ಕುಮಾರ್ ಇದ್ದರು.