ದಾವಣಗೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಲವಾರು ವರ್ಷಗಳಿಂದ ಬೇಡಿಕೆ ಇಡಲಾಗಿದೆ. ಸರ್ಕಾರ ಶ್ರೀಘ್ರವೇ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಆಗ್ರಹಿಸಿದ್ದಾರೆ.
ದಾವಣಗೆರೆಯ ಕೇಂದ್ರ ಭಾಗದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ಬಳಿ ದಲಿತ ಸಂಘಟನೆಗಳ ಒಕ್ಕೂಟವು ಅಂಬೇಡ್ಕರ್ ಜನ್ಮದಿನ ಅಚರಣೆ ಅಚರಿಸಿದೆ. ಬಳಿಕ, ಒಕ್ಕೂಟದ ಮುಖಂಡರು ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ನಗರದಲ್ಲಿ ಸೂಕ್ತ ಜಾಗದಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಿಸಬೇಕು. ಅದಕ್ಕಾಗಿ, ಕೂಡಲೇ ನೀಲನಕ್ಷೆ ಸಿದ್ದಪಡಿಸಿ, ಸ್ಥಳದ ಪಹಣಿ ರಚಿಸಿ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಈ ವೇಳೆ, ಒಕ್ಕೂಟದ ಮುಖಂಡ ಹೆಚ್.ಮಲ್ಲೇಶ್, ಕುಂದವಾಡ ಮಂಜುನಾಥ್, ಬಿ.ದುಗ್ಗಪ್ಪ, ಹೆಗ್ಗೆರೆ ರಂಗಪ್ಪ, ಸಿ.ಬಸವರಾಜ್, ರಾಘವೇಂದ್ರ ಕಡೇಮನಿ, ಹೆಚ್.ನಿಂಗಪ್ಪ, ಎಸ್.ಜಿ. ವೆಂಕಟೇಶ, ರವಿಕುಮಾರ್, ಕಾರ್, ಮಲ್ಲಿಕಾರ್ಜುನ ವಂದಾಲಿ, ಪರಮೇಶ್ ಪುರದಾಳ್ ಇತರ ಕಾರ್ಯಕರ್ತರು ಹಾಜರಿದ್ದರು.