ದಾವಣಗೆರೆ | ನೂತನ ಬಸ್ ನಿಲ್ದಾಣಕ್ಕೆ ಪಂಪಾಪತಿ ಹೆಸರಿಟ್ಟು, ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಆಗ್ರಹ

Date:

Advertisements

ದಾವಣಗೆರೆ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂದೆ ಪಂಪಾಪತಿಯವರ ಕಂಚಿನ ಪ್ರತಿಮೆ ನಿರ್ಮಾಣ ಮಾಡಬೇಕು ಹಾಗೂ ನಿಲ್ದಾಣಕ್ಕೆ ಶ್ರಮಜೀವಿ ಕಾಂ.ಪಂಪಾಪತಿ ನಿಲ್ದಾಣವೆಂದು ನಾಮಕರಣ ಮಾಡಬೇಕೆಂದು‌ ಒತ್ತಾಯಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾ ಸಮಿತಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿತು.

ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡ ಎಚ್.ಜಿ. ಉಮೇಶ್ ಆವರಗೆರೆ, ಪಂಪಾಪತಿಯವರು ತಮ್ಮ ಜೀವಿತಾವಧಿಯಲ್ಲಿ ಶ್ರಮಿಕರ ಅಳಲನ್ನು ನಿವಾರಣೆ ಮಾಡುತ್ತಾ  ನೋವನ್ನು ಸಹಿಸಿಕೊಳ್ಳುತ್ತಾ, ಹಸಿವನ್ನು ನುಂಗಿಕೊಂಡು ತನ್ನ ಕುಟುಂಬ ವಾಸಿಸಲಿಕ್ಕೆ ಸರಿಯಾದ ಸೂರನ್ನೂ ನಿರ್ಮಿಸಿಕೊಳ್ಳದೇ 15X35 ಅಡಿ ಜಾಗದಲ್ಲಿ ಜೀವನ ನಡೆಸಿದ ಧೀಮಂತ ನಾಯಕ ಎಂದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ವಿಭಾಗೀಯ ಕಚೇರಿಯನ್ನು ದಾವಣಗೆರೆ ನಗರದಲ್ಲಿ ನಿರ್ಮಾಣವಾಗಲು ಕಾರಣೀಭೂತರಾದರು. ಆದ್ದರಿಂದ ಕಾಂ.ಪಂಪಾಪತಿಯವರ ಹೆಸರನ್ನು ದಾವಣಗೆರೆ ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣದ ಮುಂದೆ ಕಂಚಿನ ಪ್ರತಿಮೆ ಮತ್ತು ಶ್ರಮಜೀವಿ ಕಾಂ. ಪಂಪಾಪತಿ ಬಸ್ ನಿಲ್ದಾಣವೆಂದು ನಾಮಕರಣ ಮಾಡಬೇಕೆಂದು‌ ಆಗ್ರಹಿಸಿದರು.

Advertisements

ಇದಲ್ಲದೇ ನಗರದಲ್ಲಿರುವ ಆಶ್ರಯ ನಿರಾಶ್ರಿತರನ್ನು ಗುರುತಿಸಿ  ಸರ್ಕಾರ ಮತ್ತು ಜಿಲ್ಲಾಡಳಿತ ನಿವೇಶನ ಹಕ್ಕುಪತ್ರ ನೀಡಿ, ಮನೆ ನಿರ್ಮಾಣ ಮಾಡಿಕೊಡಬೇಕು. ದಾವಣಗೆರೆ ನಗರವು ದಿನೇ ದಿನೆ ಬೆಳೆಯುತ್ತಿದ್ದು, ಜನಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 1980ರ ದಶಕದಲ್ಲಿ  ಕಾಂ. ಪಂಪಾಪತಿಯವರ ನೇತೃತ್ವದಲ್ಲಿ 11 ಬಡಾವಣೆಗಳನ್ನು ನಿರ್ಮಾಣ ಮಾಡಿ 9 ಬಡಾವಣೆಗಳನ್ನು ಕೊಳಚೆ ಅಭಿವೃದ್ಧಿ ಮಂಡಳಿಗೆ ಸೇರ್ಪಡೆ ಮಾಡಿ ಸ್ವಚ್ಛ ಆಡಳಿತವನ್ನು ನೀಡಿದ್ದಾರೆ. ನಂತರ 2001 ಮತ್ತು 2005ರಲ್ಲಿ  ಎಸ್.ಎಸ್. ಮಲ್ಲಿಕಾರ್ಜುನ್‌ ಮುಂದಾಳತ್ವದಲ್ಲಿ ಸುಮಾರು 10ರಿಂದ 12 ಸಾವಿರ ಮನೆಗಳನ್ನು ನಿರ್ಮಾಣ ಮಾಡಿದ್ದನ್ನು ಬಿಟ್ಟರೆ ಅಲ್ಲಿಂದ ಇಲ್ಲಿಯವರೆಗೂ ಆಶ್ರಯ ನಿರಾಶ್ರಿತರ ಆಶಯಗಳನ್ನು ಯಾರೂ ಕೂಡ ಕೇಳುವವರು ಇಲ್ಲದಂತಾಗಿದೆ ಎಂದರು.

ದಾವಣಗೆರೆ ನಗರದ ಅವರಗೆರೆಯ ಗೋಮಾಳ ಸರ್ವೆ ನಂ.213 ಚಾಲ್ತಿ ಖಾತೆ ಸರ್ವೇ ನಂ.393ರಲ್ಲಿ ಸುಮಾರು 100 ಎಕರೆಗೂ ಅಧಿಕ ಜಮೀನು ಒತ್ತುವರಿಯಾಗಿದೆ. ದಾವಣಗೆರೆ ತಾಲೂಕಿನ ತೋಳಹುಣಸೆ ಸರ್ವೇ ನಂ.62ರಿಂದ 75ರವರೆಗೂ 133ಎಕರೆ ಜಮೀನು ಇದ್ದು ಜನರು ವಾಸಮಾಡಲು ಯೋಗ್ಯ ಪ್ರದೇಶವಾಗಿದೆ. ಅಲ್ಲದೇ ದಾವಣಗೆರೆ ನಗರದಿಂದ 10-15 ಕಿ.ಮೀ.ವ್ಯಾಪ್ತಿಯಲ್ಲಿ 150ರಿಂದ 200ಎಕರೆ ಜಮೀನನ್ನು ರೈತರಿಂದ ನೇರವಾಗಿ ಖರೀದಿ ಮಾಡಿ ಅಥವಾ ದಾವಣಗೆರೆ ತಾಲೂಕು ಹಾಲುವರ್ತಿ ಮತ್ತು ಕೊಡಗನೂರು ಗ್ರಾಮದ ಸುತ್ತಮುತ್ತಲಿನಲ್ಲಿರುವ ಸೇಂದಿ ವನಗಳು ಹಾಳು ಬಿದ್ದಿದ್ದು, ಈ ಸಂಬಂಧ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಆಶ್ರಯ ನಿರಾತ್ರಿತರನ್ನು ಗುರುತಿಸಿ ಮೂಲ ಸೌಕರ್ಯಗಳೊಂದಿಗೆ ಮನೆ ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಇದರೊಂದಿಗೆ ಆಶ್ರಯ ನಿರಾಶ್ರಿತರಿಗೆ ಅವಶ್ಯವಿರುವಷ್ಟು ಜಮೀನನ್ನು ಖರೀದಿ ಮಾಡಿ ಹಕ್ಕುಪತ್ರ ನೀಡಿ ಮನೆ ನಿರ್ಮಾಣ ಮಾಡಿ ಕೊಡಬೇಕು. ಅವರಗೆರೆ ಸರ್ವೆ ನಂ.321/1 ರಲ್ಲಿ 2 ಎಕರೆ ಜಮೀನಿನಲ್ಲಿ 2006-07ರಲ್ಲಿ ಸುಮಾರು ಜನರಿಗೆ ಆಶ್ರಯ ಸಮಿತಿಯಿಂದ ಹಕ್ಕುಪತ್ರ ನೀಡಿದ್ದು ಇಲ್ಲಿಯವರೆಗೂ ಮೂಲಭೂತ ಸೌಕರ್ಯವನ್ನು ತಲುಪಿಸಿರುವುದಿಲ್ಲ. ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಿ ನಿವೇಶನದ ಅಳತೆ ಕಲ್ಲುಗಳನ್ನು ಹಾಕಿ ಕೊಡಬೇಕು. ಗೋಶಾಲೆ ಹಳ್ಳದ ಮೇಲೆ ಮನೆ ಕಟ್ಟಿಕೊಂಡಿರುವ ಫಲಾನುಭವಿಗಳಿಗೆ ಹಳ್ಳದ ಹಿನ್ನೀರಿನಿಂದ ತೊಂದರೆಯಾಗದ ಹಾಗೆ ತಡೆಗೋಡೆ ಕಟ್ಟಿ ಹಕ್ಕುಪತ್ರ ನೀಡಬೇಕು.

ಸ್ಲಂ ಬೋರ್ಡ್‌ಗೆ ಒಳಪಟ್ಟಿರುವ ನೀಲಮ್ಮನ ತೋಟದಲ್ಲಿ ವಾಸಿಸುತ್ತಿರುವ ಪ್ರತಿ ಫಲಾನುಭವಿಗಳಿಗೆ  ಹಕ್ಕುಪತ್ರ ನೀಡಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಕಾಂಗ್ರೆಸ್‌ ರಾಜ್ಯ ಉಪಾಧ್ಯಕ್ಷ ಬಿ.ಅಮ್ಜದ್, ಎಚ್.ಎಂ. ಸಂತೋಷ್ ರಾಜ್ಯ ಯುವಜನ ಫೆಡ್ರೇಷನ್‌ ಕಾರ್ಯದರ್ಶಿ ವಿ. ಲಕ್ಷ್ಮಣ್, ಶಿವಕುಮಾರ್ ಡಿ.ಶೆಟ್ಟರ್, ಅವರಗೆರೆ ಚಂದ್ರು, ಆನಂದರಾಜ್, ದಾದಾಪೀರ್, ನರೇಗಾ ರಂಗನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X