ದಾವಣಗೆರೆ | ತಳ ಸಮುದಾಯಗಳ ನಾಯಕರು ಅಸೂಯೆ, ದ್ವೇಷ ಬಿಡಬೇಕು: ಜಿ ಬಿ ವಿನಯ್ ಕುಮಾರ್

Date:

Advertisements

ಹಿಂದುಳಿದ, ತಳ ಸಮುದಾಯಗಳ ಮುಖಂಡರು, ನಾಯಕರು ಅಸೂಯೆ, ದ್ವೇಷಗಳನ್ನು ಬಿಡಬೇಕು. ಕೆಲವೊಮ್ಮೆ ನಮ್ಮವರೇ ನಮ್ಮನ್ನು ತುಳಿಯಲು ಪ್ರಯತ್ನ ಪಡುತ್ತಾರೆ. ನಾವೇ ಬೆಳೆಯಬೇಕು ಎನ್ನುವ ಧೋರಣೆಯನ್ನು ಬಿಟ್ಟು, ಬೇರೆಯವರನ್ನೂ ಕೂಡ ಪ್ರೋತ್ಸಾಹಿಸುವುದು ಬೆಳೆಸುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ಸ್ವಾಭಿಮಾನ ಬಳಗದ ಮುಖಂಡ ಜಿ ಬಿ ವಿನಯ್ ಕುಮಾರ್ ಅಭಿಪ್ರಾಯಪಟ್ಟರು.

ದಾವಣಗೆರೆಯ ಸರ್ಕಾರಿ ನೌಕರರ ಭವನದಲ್ಲಿ ಅಹಿಂದ ಮತ್ತು ಶೋಷಿತ ಸಮುದಾಯಗಳ ಒಕ್ಕೂಟದಿಂದ ಆಯೋಜಿಸಿದ್ದ ಅಹಿಂದ ಮತ್ತು ಶೋಷಿತ ಸಮುದಾಯಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

“ನಮ್ಮಲ್ಲಿ ನಾಯಕರು ಬೆಳೆದು ದೊಡ್ಡವರಾಗುತ್ತಾರೆ. ಆದರೆ ಕೆಳಹಂತದ ಕಿರಿಯ ನಾಯಕರನ್ನೂ ಬೆಳೆಸುವ ಮನೋಭಾವ ಹೊಂದಬೇಕು. ನಮ್ಮ ಅಹಿಂದ ವರ್ಗಗಳಲ್ಲಿ ಎಷ್ಟೋ ನಾಯಕರು ನಮಗೆ ಕುರ್ಚಿ ಸಿಕ್ಕರೆ ಸಾಕು ಎನ್ನುವ ಮನೋಭಾವ ಹೊಂದಿದ್ದಾರೆ. ಮೊದಲು ಈ ಮನೋಭಾವವನ್ನು ಬಿಡಬೇಕು” ಎಂದು ಸೂಚ್ಯವಾಗಿ ತಿಳಿಸಿದರು.

Advertisements

“ಸ್ವಾಭಿಮಾನ ಮತ್ತು ಉತ್ತಮ ವ್ಯಕ್ತಿತ್ವವನ್ನು ಎಲ್ಲ ಸಮುದಾಯದವರೂ ಬೆಳೆಸಿಕೊಳ್ಳಬೇಕು. ಹಣವಂತರ, ಅಧಿಕಾರವುಳ್ಳ ಜನರ ಮುಂದೆ ತಲೆಬಾಗುವ ಸಂಸ್ಕೃತಿ ಹೆಚ್ಚಾಗಿದೆ. ಸಣ್ಣಸಣ್ಣ ನಿರ್ಲಕ್ಷಿತ ಜಾತಿಗಳ ಮುಖಂಡರನ್ನು ಚುನಾವಣೆಗಾಗಿ ಆಹ್ವಾನಿಸಿ ಚೆನ್ನಾಗಿ ಮಾತನಾಡಿಸಿ, ಬಹಳ ನಯದಿಂದ ವರ್ತಿಸಿ ‘ಗೆಲ್ಲಿಸಿ’ ಎಂದು ಮನವಿ ಮಾಡುತ್ತಾರೆ. ಆದರೆ ಚುನಾವಣೆಯಲ್ಲಿ ಗೆದ್ದ ಬಳಿಕ ಅವರ ವರ್ತನೆಯೇ ಬದಲಾಗಿಹೋಗುತ್ತದೆ. ಇದು ಎಲ್ಲ ಸಮುದಾಯಗಳಿಗೂ ವಿಶೇಷವಾಗಿ ಹಿಂದುಳಿದ ಸಮುದಾಯಗಳ ಬೆಳವಣಿಗೆಗೆ ಮಾರಕವಾಗುತ್ತಿದೆ. ಅಹಿಂದ ವರ್ಗದವರು ಎಚ್ಚೆತ್ತುಕೊಂಡು ಸಶಕ್ತರಾಗಬೇಕಿದೆ” ಎಂದು ಕರೆ ನೀಡಿದರು.

WhatsApp Image 2025 01 13 at 11.49.55 PM

ಉಪನ್ಯಾಸಕ ಮಲ್ಲಿಕಾರ್ಜುನ ಹಲಸಂಗಿ ಮಾತನಾಡಿ, “ಕಾಂತರಾಜ್ ಆಯೋಗದ ವರದಿ ಬಂದು ಬಹಳಷ್ಟು ವರ್ಷಗಳೇ ಕಳೆದರೂ ಪ್ರಬಲ ಜಾತಿಗಳ ವಿರೋಧದಿಂದ ಬಿಡುಗಡೆ ಸಾದ್ಯವಾಗಿಲ್ಲ. ನಮ್ಮ ನಮ್ಮಲ್ಲೇ ಹಿಂದುಳಿದ ವರ್ಗಗಳ ನಡುವೆ ಇರುವ ಒಡಕಿನಿಂದಾಗಿ ಇದರ ಸಂಪೂರ್ಣ ಅಂಗೀಕಾರಕ್ಕೆ ಒತ್ತಡ ಹೇರಲು ಸಾಧ್ಯವಾಗಿಲ್ಲ. ಶೇ.99ರಷ್ಟು ಗ್ರಾಮೀಣ, ಶೇ.80ರಷ್ಟು ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಅಂಕಿ ಅಂಶಗಳನ್ನು ಸಂಗ್ರಹಿಸಿ ವಸ್ತು ನಿಷ್ಠವಾಗಿ ತಯಾರಾಗಿರುವ ಕಾಂತರಾಜ್‌ ವರದಿ‌ ಪರಿಶಿಷ್ಟ ಜಾತಿ ಮತ್ತು ಪಂಗಡದ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ದೊಡ್ಡ ಕೊಡುಗೆ. ಈ ವರದಿಯನ್ನು ಅಧ್ಯಯನ ಮಾಡಿ ಸಮಾಜಕ್ಕೆ ಅಂಟಿದ ಜಾತಿಯ ಕಳಂಕವನ್ನು ಹೋಗಲಾಡಿಸಲು ಶ್ರಮಿಸಬೇಕಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಅಕ್ರಮವಾಗಿ ಸ್ಮಶಾನದ ಮಣ್ಣು ಸಾಗಾಟ; ದಸಂಸ ಖಂಡನೆ

ಸಭೆಯಲ್ಲಿ ಎಂಎಲ್‌ಸಿ ಅಬ್ದುಲ್ ಜಬ್ಬಾರ್, ಹನುಮಂತಪ್ಪ, ನಿರಂಜನ್, ನಿವೃತ್ತ ಪೊಲೀಸ್ ಅಧಿಕಾರಿಗಳಾದ ರುದ್ರಮುನಿ, ರವಿ ನಾರಾಯಣ್, ನಿವೃತ ನ್ಯಾಯಾಧೀಶರಾದ ಬಾಬಾ ಸಾಹೇಬ್, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ, ವಕೀಲರಾದ ಅನಿಪ್ ಪಾಷ, ಹೊದಿಗೆರೆ ರಮೇಶ್, ಸಿದ್ದಲಿಂಗಪ್ಪ ಪರಮೇಶ್, ನಲ್ಕುಂದ ಹಾಲೇಶ್ ಸೇರಿದಂತೆ ಸಂವಿಧಾನದ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿಯ ಮುಖಂಡರು, ಅಹಿಂದ ಸಮುದಾಯದ ಹಲವಾರು ಮುಖಂಡರು, ಕಾರ್ಯಕರ್ತರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X