ದಾವಣಗೆರೆ | ವಾಣಿಜ್ಯ ಮಳಿಗೆಯ ಮರು ಹರಾಜು ಪ್ರಕ್ರಿಯೆಗೆ ಒತ್ತಾಯಿಸಿ ಪ್ರತಿಭಟನೆ

Date:

Advertisements

ಹರಿಹರ ತಾಲೂಕು ಕ್ರೀಡಾಂಗಣದ ವಾಣಿಜ್ಯ ಮಳಿಗೆಯ ಮರು ಹರಾಜು ಪ್ರಕ್ರಿಯೆ ಕೈಗೊಳ್ಳಲು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ದಾವಣಗೆರೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಅಂಬೇಡ್ಕರ್ ವೃತ್ತ ದಿಂದ ಯುವಜನ ಕ್ರೀಡಾ ಇಲಾಖೆ ಕಛೇರಿಯವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಪ್ರತಿಭಟಿಸಿದರು.

ಈ ವೇಳೆ ಸಂಘಟನೆಯ ಮುಖಂಡ ಎಸ್. ಗೋವಿಂದ್ ಮಾತನಾಡಿ, “ಹರಿಹರದ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಿರುವ 42ವಾಣಿಜ್ಯ ಮಳಿಗೆಗಳು 2019ನೇ ಸಾಲಿನ ಅವಧಿ ಮುಕ್ತಾಯಗೊಂಡಿದ್ದು, ಇಲ್ಲಿಯವರೆಗೂ ಮರು ಹರಾಜು ಮಾಡಿಲ್ಲ. ಸದರಿ ಮಳಿಗೆಗಳನ್ನು ಕಡಿಮೆ ಬಾಡಿಗೆಗೆ ಪಡೆದು, ಹೆಚ್ಚುವರಿ ಬಾಡಿಗೆಗೆ ಉಪಗುತ್ತಿಗೆ ನೀಡಿರುವ ಮೂಲ ಮಳಿಗೆ ಬಾಡಿಗೆದಾರರು ಸರ್ಕಾರಕ್ಕೆ ವಂಚನೆ ಮಾಡಿದ್ದು, ವಿದ್ಯಾವಂತ  ನಿರುದ್ಯೋಗಿಗಳಿಗೆ ಸ್ವಾವಲಂಭಿ ಉದ್ಯೋಗಕ್ಕೆ ಅವಕಾಶ” ಇಲ್ಲದಂತಾಗಿದೆ.

ಮಳಿಗೆಗಳು ಸಾರ್ವಜನಿಕರಿಗೆ ಅತ್ಯವಶ್ಯಕವಾಗಿರುವುದರಿಂದ ಮರು ಹರಾಜು ಮಾಡುವ ಮೂಲಕ ಸರ್ಕಾರದ ಆದಾಯದ ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿದಂತಾಗುತ್ತದೆ. ಈಗಾಗಲೇ ಮರು ಹರಾಜು ಪ್ರಕ್ರಿಯೆಯನ್ನು ಮಾಡಿ ಅರ್ಜಿಯನ್ನು ಸಹ ನೀಡಲಾಗಿರುತ್ತದೆ.

Advertisements

ಆದರೆ, ಹಾಲಿ ಇರುವ ಮಳಿಗೆಯ ಬಾಡಿಗೆದಾರರು ನ್ಯಾಯಾಲಯದ ದಾವೆ ಹಾಕಿದ ಕಾರಣ ಹರಾಜು ಪ್ರಕ್ರಿಯೆಯು ನಿಲ್ಲಿಸಲಾಗಿತ್ತು.  ಆದರೆ, ನ್ಯಾಯಾಲಯದ ಆದೇಶವಾಗಿ 8-10 ತಿಂಗಳು – ಕಳೆದರೂ ಹರಾಜು ಪ್ರಕ್ರಿಯೆ ಮುಂದುವರೆಸಲು  ಕ್ರೀಡಾಧಿಕಾರಿಗಳು ಆಸಕ್ತಿ ತೋರದ ಕಾರಣ ಹಲವು ಅನುಮಾನಗಳು ಮೂಡಿರುತ್ತವೆ ಎಂದರು.

ಈ ಬಗ್ಗೆ ಆದಷ್ಟು ಬೇಗನೆ ಸೂಕ್ತ ನಿರ್ಧಾರವನ್ನು ಕೈಗೊಂಡು ವಿದ್ಯಾವಂತ ನಿರುದ್ಯೋಗಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ನೂತನ ವಿದ್ಯಾರ್ಥಿನಿಲಯ ನಿರ್ಮಾಣ : ಸಚಿವರಿಂದ ಶಂಕುಸ್ಥಾಪನೆ

ತುಮಕೂರು ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಶ್ರೀ ಡಿ. ದೇವರಾಜ ಅರಸು...

ಗದಗ | ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ( ಕಭೀ) ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ...

ಉಡುಪಿ‌ | ಹುಡುಗಿಯ ವಿಚಾರಕ್ಕೆ ಜಗಳ, ಕೊಲೆಯಲ್ಲಿ ಅಂತ್ಯ, ಆರೋಪಿಯ ಬಂಧನ

ಉಡುಪಿ‌ ಜಿಲ್ಲೆಯ ಕಾರ್ಕಳದ ಕುಂಟಲ್ಪಾಡಿಯಲ್ಲಿ ಮದ್ಯರಾತ್ರಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ...

ವಿಜಯಪುರ ಬಿಸಿಎಂ ವಸತಿನಿಲಯಕ್ಕೆ ಅಧಿಕಾರಿಗಳ ಭೇಟಿ: ಸಮಸ್ಯೆ ಬಗೆಹರಿಸುವ ಭರವಸೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಬಿಸಿಎಂ ವಸತಿನಿಲಯಕ್ಕೆ ಉಪತಹಶೀಲ್ದಾರ್ ಎನ್...

Download Eedina App Android / iOS

X