ವಿಜಯಪುರ | ಮಾಜಿ ದೇವದಾಸಿ ತಾಯಂದಿರ ಸಂಘಟನೆ ಹಾಗೂ ಕಾಯ್ದೆಗಳ ಮಾಹಿತಿ ಕುರಿತ ಕಾರ್ಯಗಾರ

Date:

ಕರ್ನಾಟಕದಲ್ಲಿ ಸುಮಾರು 14 ಜಿಲ್ಲೆಗಳಲ್ಲಿ 9,600 ಮಂದಿ ಮಾಜಿ ದೇವದಾಸಿ ತಾಯಂದಿರು ಇದ್ದು, 45,000 ಮಂದಿ ದೇವದಾಸಿ ತಾಯಂದಿರು ಸರ್ಕಾರದ ದೇವದಾಸಿ ಪುನರ್ವಸತಿ ನಿಗಮದಲ್ಲಿ ನೋಂದಣಿಯಾಗಿದ್ದಾರೆ. ಅವರಿಗೆ ಈವರೆಗೆ ನಾಲ್ಕು ಯೋಜನೆಗಳು ದೊರೆಯತ್ತಿದ್ದು, ಅವೂ ಕೂಡ ಸಮರ್ಪಕವಾಗಿ ಎಲ್ಲ ದೇವದಾಸಿ ತಾಯಂದಿರಿಗೆ ದೊರೆಯುತ್ತಿಲ್ಲ ಎಂದು ವಿಮುಕ್ತ ದೇವದಾಸಿ ತಾಯಂದಿರ ಒಕ್ಕೂಟ ಸಂಚಾಲಕ ಚಂದಲಿಂಗ ಕಲಾಲಬಂಡಿ ಹೇಳಿದರು.

ವಿಜಯಪುರ ನಗರದ ಸಂತ ಅನ್ನಮ್ಮನವರ ದೇವಾಲಯದ ಸಭಾಂಗಣದಲ್ಲಿ ಜೀವನ ಜ್ಯೋತಿ ಮಾಜಿ ದೇವದಾಸಿ ತಾಯಂದಿರ ಜಿಲ್ಲಾ ಒಕ್ಕೂಟ, ಸಾಮಾಜಿಕ ನ್ಯಾಯ ಪಡೆಯುವುದು ಮಾಜಿ ದೇವದಾಸಿ ತಾಯಂದಿರ ಹಕ್ಕು ಮತ್ತು ಅನೌಪಚಾರಿಕ ಶಿಕ್ಷಣ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾಜಿ ದೇವದಾಸಿ ತಾಯಂದಿರ ಜಿಲ್ಲಾ ಮಟ್ಟದಲ್ಲಿ ಸಂಘಟನೆ ಮತ್ತು ಹೊಸ ಕಾಯ್ದೆಗಳ ಮಾಹಿತಿ ಕುರಿತು ಒಂದು ದಿನದ ತರಬೇತಿ ಕಾರ್ಯಗಾರದಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

“40,000ದವರೆಗೂ ದೇವದಾಸಿ ತಾಯಂದಿರು ನೋಂದಣಿಯಿಂದ ಹೊರಗೆ ಉಳಿದಿದ್ದು, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೊಸದಾಗಿ ಸರ್ವೇ ಮಾಡಿ ಹೊರಗುಳಿದ ದೇವದಾಸಿ ತಾಯಂದಿರನ್ನು ನಿಗಮದಲ್ಲಿ ನೋಂದಣಿ ಮಾಡಿಕೊಳ್ಳಲು ಸಕಾರಕ್ಕೆ ಸಾಕಷ್ಟು ಬಾರಿ ವಿನಂತಿ ಮಾಡಿಕೊಂಡರೂ ಕೂಡ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಮಾಜಿ ದೇವದಾಸಿ ತಾಯಂದಿರು ಸಂಘಟನೆಯಾಗಬೇಕಾಗಿದೆ. ನಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ಮುಂದಾಗಬೇಕಿದೆ” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸಮಾಜದ ಕಟ್ಟ ಕಡೆಯ ಸಮುದಾಯಗಳಲ್ಲಿ ಅತಿ ಶೋಷಣೆಗೆ ಒಳಗಾಗಿರುವ ದೇವದಾಸಿ ತಾಯಂದಿರಿಗೆ ಕನಿಷ್ಟ ಸೌಲಭ್ಯಗಳೂ ಸಿಗದೆ ಜೀವನ ನಡೆಸುವಂತಾಗಿದೆ. ದೇವದಾಸಿ ತಾಯಂದಿರು ಮತ್ತು ಅವರ ಮಕ್ಕಳು ಸಂವಿಧಾನಾತ್ಮಕವಾಗಿ ಗೌರಯುತವಾಗಿ ಬದುಕುವ ಹಕ್ಕು ರಕ್ಷಣೆ ಮಾಡುವುದು ಸರ್ಕಾರಗಳ ಕರ್ತವ್ಯವಾಗಿದೆ. ದೇವದಾಸಿ ಮತ್ತು ಅವರ ಮಕ್ಕಳ ಹಕ್ಕುಗಳು, ಮಾನವ ಹಕ್ಕುಗಳನ್ನು ರಕ್ಷಿಸುವ ಹೊಣೆ ಸರ್ಕಾರದ ಕರ್ತವ್ಯ. ಆದ್ದರಿಂದ ದೇವದಾಸಿ ಪದ್ಧತಿ ನಿರ್ಮೂಲನೆ ಮತ್ತು ಪುನರ್ವವಸತಿಗಾಗಿ 2018ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿರುವ ಮಸೂದೆಯನ್ನು ಕಾಯ್ದೆಯಾಗಿ ಜಾರಿ ಮಾಡಲು ನಾವು ಸಂಘಟಿತರಾಗಬೇಕಾಗಿದೆ. ನಮ್ಮ ಕೂಗು ನಮ್ಮ ನೋವು ನಮಗಾದ ಅನ್ಯಾಯವು ಸರ್ಕಾರದ ಗಮನಕ್ಕೆ ಬರುವವರೆಗೂ ನಾವು ಹೋರಾಟ ಮಾಡಲೇಬೆಕಾದ ಅನಿವಾರ್ಯತೆ ಇದೆ” ಎಂದು ತಬೇತಿಯಲ್ಲಿ ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಒಂದು ದಿನದ ಕಾರ್ಯಗಾರ

ಕಾರ್ಯಕ್ರಮದಲ್ಲಿ ಹೋರಾಟಗಾರರು ಎಂ ಆರ್ ಬೇರಿ ರಾಯಚೂರು ಹಾಗೂ ವಿಮುಕ್ತ ದೇವದಾಸಿ ತಾಯಂದಿರ ಒಕ್ಕೂಟ ಅಧ್ಯಕ್ಷೆ ಪಡಿಯಮ್ಮ ಮಾತನಾಡಿ, “ನಾವು ಅಪ್ರಾಪ್ತ ವಯಸ್ಸಿನಲ್ಲಿ ಇದ್ದಾಗ ನಮ್ಮನ್ನು ಈ ಅನಿಷ್ಟ ಪದ್ಧತಿಗೆ ದೂಡಲಾಗಿದೆ. ನಾವು ಬಯಸಿ ದೇವದಾಸಿ ಪದ್ದತಿಗೆ ಬಂದಿಲ್ಲ. ಸಮಾಜ ನಮಗೆ ಅನ್ಯಾಯ ಮಾಡಿದೆ. ಆದ್ದರಿಂದ ನಮಗೆ ಸಮಾಜದಲ್ಲಿ ಗೌರಯತ ಬದುಕು ಕಟ್ಟಿಕೊಳ್ಳಲು ನಾವು ಮುಂದಾಗಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುನಿತಾ ಮೋರೆ, ಅಧ್ಯಕ್ಷೆ ರೇಣುಕಾ ಎಂಟಮಾನ, ಸಿಸ್ಟರ್ ಜಯಾ ಮೇರಿ, ಎಲ್ಲ ತಾಲೂಕು ಒಕ್ಕೂಟದ ಮುಖಂಡರು, ಪದಾಧಿಕಾರಿಗಳು ಸೇರಿದಂತೆ 200 ಜನ ಭಾಗಿಯಾಗಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಬಿಸಿಲಿನ ತಾಪ ಹೆಚ್ಚಳ; ಮೃಗಾಲಯ ತಂಪಾಗಿಡಲು ವಿಶೇಷ ವ್ಯವಸ್ಥೆ

ಪ್ರಸ್ತುತ ವರ್ಷ ಮೈಸೂರು ನಗರದಲ್ಲಿ ತಾಪಮಾನ ಗಣನೀಯವಾಗಿ ಏರಿಕೆಯಾಗಿರುವುದರಿಂದ ಮೃಗಾಲಯದ ಪ್ರಾಣಿಗಳು...

ತುಮಕೂರು | ಹಾಲಪ್ಪ ಯಾರು? ಮುದ್ದಹನುಮೇಗೌಡರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ: ಸಚಿವ ರಾಜಣ್ಣ

ಮಾಜಿ ಸಂಸದ ಮುದ್ದಹನುಮೇಗೌಡ ಅವರು ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದು,...

ಬೆಂಗಳೂರು | ಕನ್ನಡ ನಾಮಫಲಕ ಕಡ್ಡಾಯ; ತಪ್ಪಿದಲ್ಲಿ ‘ಕರ್ನಾಟಕ ಬಂದ್’: ವಾಟಾಳ್ ನಾಗರಾಜ್ ಎಚ್ಚರಿಕೆ

ಕನ್ನಡ ನಾಮಫಲಕ ಕಡ್ಡಾಯಕ್ಕೆ ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಗಡುವು ಮುಗಿಯುವುದರೊಳಗಾಗಿ...

ತುಮಕೂರು | ಲೋಕಸಭಾ ಚುನಾವಣೆಗೆ ಜೆಡಿಎಸ್‌ ಟಿಕೆಟ್‌ ಬೇಡಿಕೆಯಿಟ್ಟ ಕೆ.ಟಿ ಶಾಂತಕುಮಾರ್

ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್...