ದಾವಣಗೆರೆ | ದಿಢೀರ್ ಕುಸಿದ ಶಾಲೆಯ ಮೇಲ್ಛಾವಣಿ; ಸ್ವಲ್ಪದರಲ್ಲೇ ಪಾರಾದ ವಿದ್ಯಾರ್ಥಿಗಳು

Date:

Advertisements

ಶಾಲೆಯ ಮೇಲ್ಛಾವಣಿ ದಿಢೀರ್ ಕುಸಿದು ಬಿದ್ದಿದ್ದು, ಸ್ವಲ್ಪದರಲ್ಲೇ ಮಕ್ಕಳು ಪಾರಾಗಿರುವ ಘಟನೆ ದಾವಣಗೆರೆ ನಗರದ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕರೂರಿನಲ್ಲಿ ನಡೆದಿದೆ.

ಈ ಶಾಲೆ ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕೂಗಳತೆಯ ಹೊರವಲಯದ ಕರೂರು ಗ್ರಾಮದಲ್ಲಿದೆ. ಒಂದರಿಂದ ಐದನೇ ತರಗತಿವರೆಗೆ ಇರುವ ಕನ್ನಡ -ಉರ್ದು ಕಿರಿಯ ಪ್ರಾಥಮಿಕ ಶಾಲೆಯಾಗಿದ್ದು, ದಾವಣಗೆರೆಯ ಅತ್ಯಂತ ಹಳೆಯ ಶಾಲೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ.

ಇತ್ತೀಚಿಗೆ ನಿರಂತರವಾಗಿ ಸುರಿದ ಭಾರೀ ಮಳೆಗೆ ಸೋರುತ್ತಿರುವ ಹೆಂಚುಗಳ ಮಧ್ಯೆ ಇರುವ ಮರದ ತುಂಡುಗಳು ಬಹುತೇಕವಾಗಿ ಶಿಥಿಲಗೊಂಡಿದ್ದು, ಮಧ್ಯಾಹ್ನ 1.30ರ ಸಮಯಕ್ಕೆ ಏಕಾಏಕಿ ಛಾವಣಿ ಕುಸಿದು ಬಿದ್ದಿದ್ದು ಮಕ್ಕಳು ಮಧ್ಯಾಹ್ನದ ಸಮಯದಲ್ಲಿ ಹೊರಗಿದ್ದ ಕಾರಣ ಪ್ರಾಣಪಾಯದಿಂದ ಪಾರಾಗಿದ್ದಾರೆ.

Advertisements

WhatsApp Image 2024 07 26 at 1.41.38 PM

ಈ ಕೊಠಡಿಯನ್ನು ಕೆಲ ವರ್ಷಗಳಿಂದ ಮಕ್ಕಳ ಬೋಧನೆಗೆ ಬಳಸುತ್ತಿರಲಿಲ್ಲ ಎಂದು ಮಾಹಿತಿ ತಿಳಿದು ಬಂದಿದ್ದು, ಆದರೆ ಬೇರೆ ಕೊಠಡಿಗಳಿಗೆ ಹೊಂದಿಕೊಂಡಿದೆ. ಜೊತೆಗೆ ಅನ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದರು, ಹಾಗೂ ಅಲ್ಲಿಗೆ ಮಕ್ಕಳು ಕೂಡ ಓಡಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಸರ್ಕಾರಿ ಶಾಲೆಗಳ ದುರವಸ್ಥೆಗೆ ಇದೊಂದು ಕನ್ನಡಿ ಆಗಿದ್ದು. ಸರ್ಕಾರ ಶಾಲೆಗಳು ದುರಸ್ತಿ ಕಾಣದೆ ಅಭಿವೃದ್ಧಿ ಮರೀಚಿಕೆಯಾಗಿದೆ. ಶಾಲೆಯ ಜಾಗದ ವಿವಾದವು ಶಾಲೆಯಲ್ಲಿ ಮೂಲ ಸೌಕರ್ಯ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎನ್ನಲಾಗಿದೆ. ಈ ಶಾಲೆಯ ಜಾಗವನ್ನು ಯಶೋಧಮ್ಮ ಎಂಬುವವರು ಬೇರೊಬ್ಬರಿಂದ ಖರೀದಿಸಿದ್ದೇವೆ ಎಂದು ಶಾಲೆಯ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಜಾಗದ ವಿವಾದವನ್ನು ಬಗೆಹರಿಸಲು ಇದುವರೆಗೂ ಯಾರೊಬ್ಬರೂ ಆಸಕ್ತಿ ವಹಿಸಿಲ್ಲ ಎಂದು ಸ್ಥಳೀಯ ಪೋಷಕರು ಮಾಹಿತಿ ನೀಡಿದ್ದಾರೆ.

ಜಾಗ ಮಾರಾಟ ಮಾಡಿರುವವರು ಹೇಳುವಂತೆ ಅವರು ಶಾಲೆಯ ಜಾಗ ಬಿಟ್ಟು ಮಾರಾಟ ಮಾಡಿದ್ದು ಶಾಲೆಯ ಜಾಗಕ್ಕೂ ಅವರಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.‌ ಆದರೆ ಖರೀದಿಸಿದವರು ಇವರು ಸ್ಥಳೀಯ ರಾಜಕಾರಣಿಗಳ ಪ್ರಭಾವ ನನಗೆ ಇದೆ. ಶಾಲೆಯ ಜಾಗ ನಮ್ಮದು ಎಂದು ಶಾಲೆಯ ಜಾಗವನ್ನು ಅಭಿವೃದ್ದಿ ಪಡಿಸಲು ಬಿಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸರ್ಕಾರಿ ಶಾಲೆಯ ಈ ಪರಿಸ್ಥಿತಿಯ ಮಧ್ಯೆ ಮಕ್ಕಳು ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದು, ಮಕ್ಕಳು ಆಗಬಹುದಾಗಿದ್ದ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮುಂದಾದರೂ ತಕ್ಷಣ ಜಿಲ್ಲಾಡಳಿತ ಸ್ಥಳೀಯ ರಾಜಕಾರಣಿಗಳು ಮತ್ತು ಸಚಿವರು ಶಾಸಕರು ಈ ಬಗ್ಗೆ ಗಮನಹರಿಸಿ ಶಾಲೆಯ ಅಭಿವೃದ್ಧಿಯನ್ನು ಕೈಗೊಂಡು ಮಕ್ಕಳನ್ನು ಅನಾಹುತದಿಂದ ಪಾರು ಮಾಡಬೇಕು ಎಂದು ಪ್ರಜಾಪರಿವರ್ತನಾ ವೇದಿಕೆ ಮುಖಂಡ ಲಿಂಗರಾಜ್ ಮತ್ತು ಸ್ಥಳೀಯರು, ಮಕ್ಕಳ ಪೋಷಕರು ಒತ್ತಾಯಿಸಿದ್ದಾರೆ.

ವರದಿ: ವಿನಾಯಕ್ ದಾವಣಗೆರೆ

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ದಾವಣಗೆರೆ | ಕೆರೆ ನೀರು ಪೋಲು, ನೀರಾವರಿ ಇಲಾಖೆ ನಿರ್ಲಕ್ಷ್ಯ; ದುರಸ್ತಿಗೆ ರೈತಸಂಘದ ಮುಖಂಡರ ಆಗ್ರಹ

"ಜಗಳೂರು ತಾಲೂಕಿನ ಭರಮ ಸಮುದ್ರ ಕೆರೆಯಲ್ಲಿ ಟ್ಯೂಬ್ ಗಳಲ್ಲಿ ನೀರು ಪೋಲಾಗುತ್ತಿದೆ....

Download Eedina App Android / iOS

X