ದಾವಣಗೆರೆ ಜಿಲ್ಲೆಯ ರೈತರಿಗೆ ಭದ್ರಾ ಜಲಾಶಯದಿಂದ ಸಮರ್ಪಕವಾಗಿ ನೀರು ಹರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ವಹಿಸಿದ್ದಾರೆ. ಕೊನೆ ಭಾಗದ ರೈತರಿಗೆ ನೀರುಸಿಗದೆ ಅನ್ಯಾಯವಾಗಿದೆ ಆದರೆ ಸಚಿವರು ರೈತರ ಬಗ್ಗೆ ಯಾವುದೇ ಜವಾಬ್ದಾರಿ ವಹಿಸಿಲ್ಲ ಎಂದು ಶಾಸಕ ಬಿ.ಪಿ.ಹರೀಶ್ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾಜಲಾಶಯದ ನಾಲೆ ಹೊಂದಿರುವ ದಾವಣಗೆರೆ ಜಿಲ್ಲೆಗೆ ಸಚಿವರು ಭದ್ರ ಜಲಾಶಯದ ನೀರನ್ನು ಕೊನೆ ಭಾಗದ ಗ್ರಾಮಗಳಿಗೆ ನೀರು ಹರಿಸುವಲ್ಲಿ ಸಂಪೂರ್ಣವಾಗಿ ಎಡವಿದ್ದಾರೆ. ಭದ್ರಾ ಕಾಡಾ ಜವಾಬ್ದಾರಿಯನ್ನು ನೀರಾವರಿ ಸಚಿವರು ಶಿವಮೊಗ್ಗ ಜಿಲ್ಲೆಯ ಸಚಿವರಾದ ಮಧುಬಂಗಾರಪ್ಪ ಅವರಿಗೆ ನೀಡಿದ್ದಾರೆ. ಆದರೆ, ಸಚಿವ ಮಧು ಬಂಗಾರಪ್ಪ ಅವರು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಮಾತ್ರ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ದಾವಣಗೆರೆ ಜಿಲ್ಲೆಯ ರೈತ ಬಗ್ಗೆ ಕಾಳಜಿ ವಹಿಸಬೇಕಾಗಿದ್ದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜವಾಬ್ದಾರಿ ವಹಿಸಲಿಲ್ಲ ಹಾಗೂ ಯಾವುದೇ ಹೋರಾಟ ಮಾಡಲಿಲ್ಲ ಅವರಿಗೆ ಜಿಲ್ಲೆಯ ರೈತರ ಹಿತ ಬೇಕಾಗಿಲ್ಲ ಎಂದರು.
ಅಡಿಕೆ ತೋಟಕ್ಕೆ ಹತ್ತು ದಿನ ನೀರು ಬಿಟ್ಟು ನಿಲ್ಲಿಸಿದರೆ ಜಲಾಶಯದಲ್ಲಿ ನೀರು ಉಳಿಯುತ್ತದೆ ಎಂಬುದು ಮೇಲ್ಬಾಗದ ರೈತರದ್ದಾಗಿದೆ. ಕೇವಲ 12 ದಿನನೀರು ಬಿಟ್ಟರೆ ಕೊನೆ ಭಾಗಕ್ಕೆ ತಲುಪುವುದಿಲ್ಲ. ಮುಂದಿನ ದಿನದಲ್ಲಿ ಇನ್ನೊಂದು ವೇಳೆ ನೀರು ಹರಿಸಲಾಗುತ್ತದೆ. ಈ ವೇಳೆಯಾದರೂ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಭದ್ರಾ ಜಲಾಶಯದಿಂದ ನೀರು ಹರಿಸಲು ಕ್ರಮ ಕೈಗೊಳ್ಳಲಿ ಎಂದು ಒತ್ತಡ ಹಾಕಲಿ ಎಂದರು
ಸಚಿವರಿಗೆ ಬಡ ರೈತನಿಗಿಂತ ಕಾರ್ಖಾನೆ ಮುಖ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮಧು ಬಂಗಾರಪ್ಪಗೆ ಒತ್ತಡ ಹಾಕಲಿಲ್ಲ.ಸರ್ಕಾರ ಬಜೆಟ್ ಅಧಿವೇಶನ ನಡೆಸಿದ ವೇಳೆ ಬರಗಾಲದ ಬಗ್ಗೆ ಕುಡಿಯುವ ನೀರಿನ ವಿಚಾರವಾಗಿ ಮಾತನಾಡಲಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ದಾವಣಗೆರೆ ಜಿಲ್ಲೆಗೆ ಯಾವ ಕೊಡುಗೆ ನೀಡಿಲ್ಲ. ಈ ಭಾಗದ ಸಚಿವರು ಶಾಸಕರು ಸರ್ಕಾರಕ್ಕೆ ಒತ್ತಡ ಹಾಕಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಬಿ. ಎಂ. ಸತೀಶ್, ಹೆಚ್. ಪಿ. ವಿಶ್ವಾಸ್, ಕ್ರೋಟೇಶ್ ಗೌಡ ಹಾಜರಿದ್ದರು.