ದಾವಣಗೆರೆ | ನಾಲೆಯ ಕೊನೆ ಭಾಗಕ್ಕೆ ನೀರು ಹರಿದಿಲ್ಲ; ಸಚಿವರು ರೈತರ ಹಿತ ಕಾಯುತ್ತಿಲ್ಲ: ಶಾಸಕ ಹರೀಶ್

Date:

ದಾವಣಗೆರೆ ಜಿಲ್ಲೆಯ ರೈತರಿಗೆ ಭದ್ರಾ ಜಲಾಶಯದಿಂದ ಸಮರ್ಪಕವಾಗಿ ನೀರು ಹರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ವಹಿಸಿದ್ದಾರೆ. ಕೊನೆ ಭಾಗದ ರೈತರಿಗೆ ನೀರುಸಿಗದೆ ಅನ್ಯಾಯವಾಗಿದೆ ಆದರೆ ಸಚಿವರು ರೈತರ ಬಗ್ಗೆ ಯಾವುದೇ ಜವಾಬ್ದಾರಿ ವಹಿಸಿಲ್ಲ ಎಂದು ಶಾಸಕ ಬಿ.ಪಿ.ಹರೀಶ್ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾಜಲಾಶಯದ ನಾಲೆ ಹೊಂದಿರುವ ದಾವಣಗೆರೆ ಜಿಲ್ಲೆಗೆ ಸಚಿವರು ಭದ್ರ ಜಲಾಶಯದ ನೀರನ್ನು ಕೊನೆ ಭಾಗದ ಗ್ರಾಮಗಳಿಗೆ ನೀರು ಹರಿಸುವಲ್ಲಿ ಸಂಪೂರ್ಣವಾಗಿ ಎಡವಿದ್ದಾರೆ. ಭದ್ರಾ ಕಾಡಾ ಜವಾಬ್ದಾರಿಯನ್ನು ನೀರಾವರಿ ಸಚಿವರು ಶಿವಮೊಗ್ಗ ಜಿಲ್ಲೆಯ ಸಚಿವರಾದ ಮಧುಬಂಗಾರಪ್ಪ ಅವರಿಗೆ ನೀಡಿದ್ದಾರೆ. ಆದರೆ, ಸಚಿವ ಮಧು ಬಂಗಾರಪ್ಪ ಅವರು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಮಾತ್ರ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ದಾವಣಗೆರೆ ಜಿಲ್ಲೆಯ ರೈತ ಬಗ್ಗೆ ಕಾಳಜಿ ವಹಿಸಬೇಕಾಗಿದ್ದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜವಾಬ್ದಾರಿ ವಹಿಸಲಿಲ್ಲ ಹಾಗೂ ಯಾವುದೇ ಹೋರಾಟ ಮಾಡಲಿಲ್ಲ ಅವರಿಗೆ ಜಿಲ್ಲೆಯ ರೈತರ ಹಿತ ಬೇಕಾಗಿಲ್ಲ ಎಂದರು.

ಅಡಿಕೆ ತೋಟಕ್ಕೆ ಹತ್ತು ದಿನ ನೀರು ಬಿಟ್ಟು ನಿಲ್ಲಿಸಿದರೆ ಜಲಾಶಯದಲ್ಲಿ ನೀರು ಉಳಿಯುತ್ತದೆ ಎಂಬುದು ಮೇಲ್ಬಾಗದ ರೈತರದ್ದಾಗಿದೆ. ಕೇವಲ 12 ದಿನನೀರು ಬಿಟ್ಟರೆ ಕೊನೆ ಭಾಗಕ್ಕೆ ತಲುಪುವುದಿಲ್ಲ. ಮುಂದಿನ ದಿನದಲ್ಲಿ ಇನ್ನೊಂದು ವೇಳೆ ನೀರು ಹರಿಸಲಾಗುತ್ತದೆ. ಈ ವೇಳೆಯಾದರೂ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಭದ್ರಾ ಜಲಾಶಯದಿಂದ ನೀರು ಹರಿಸಲು ಕ್ರಮ ಕೈಗೊಳ್ಳಲಿ ಎಂದು ಒತ್ತಡ ಹಾಕಲಿ ಎಂದರು

ಸಚಿವರಿಗೆ ಬಡ ರೈತನಿಗಿಂತ ಕಾರ್ಖಾನೆ ಮುಖ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮಧು ಬಂಗಾರಪ್ಪಗೆ ಒತ್ತಡ ಹಾಕಲಿಲ್ಲ.ಸರ್ಕಾರ ಬಜೆಟ್ ಅಧಿವೇಶನ ನಡೆಸಿದ ವೇಳೆ ಬರಗಾಲದ ಬಗ್ಗೆ ಕುಡಿಯುವ ನೀರಿನ ವಿಚಾರವಾಗಿ ಮಾತನಾಡಲಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ದಾವಣಗೆರೆ ಜಿಲ್ಲೆಗೆ ಯಾವ ಕೊಡುಗೆ ನೀಡಿಲ್ಲ. ಈ ಭಾಗದ ಸಚಿವರು ಶಾಸಕರು ಸರ್ಕಾರಕ್ಕೆ ಒತ್ತಡ ಹಾಕಿಲ್ಲ ಎಂದರು.   ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಬಿ. ಎಂ. ಸತೀಶ್‌, ಹೆಚ್. ಪಿ. ವಿಶ್ವಾಸ್, ಕ್ರೋಟೇಶ್ ಗೌಡ ಹಾಜರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಹುದ್ದೆಯಿಂದ ವಜಾಗೊಳಿಸಿ: ಬಸವರಾಜ ಎಸ್ ಆಗ್ರಹ

"ಪ್ರಜಾಪ್ರಭುತ್ವ ಭಾರತದಲ್ಲಿ ಜನರ ಅತ್ಯಂತ ಪವಿತ್ರವಾದದ್ದು. ಮತದಾನದ ಹಕ್ಕನ್ನೇ ಕಸಿದುಕೊಳ್ಳುತ್ತಿರುವ ಚುನಾವಣಾ...

ಚಿಕ್ಕಮಗಳೂರು | ಭೂಮಿಯ ರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ; ಸಿ.ಟಿ ರವಿ 

ಚಿಕ್ಕಮಗಳೂರು ನಗರ ಘಟಕದ ವತಿಯಿಂದ ಬಾಳೇಹಳ್ಳಿಯ ಶ್ರೀ ಸಿದ್ದೇಶ್ವರ ಮತ್ತು ಶ್ರೀ...

ಅ.17ರಿಂದ ಮೂರು ದಿನಗಳ ಕಾಲ ಅದ್ದೂರಿ ಚಾಮರಾಜನಗರ ದಸರಾ

ಚಾಮರಾಜನಗರದಲ್ಲಿ ಅಕ್ಟೋಬರ್ 17, 18 ಮತ್ತು 19ರಂದು ಮೂರು ದಿನಗಳ ಕಾಲ...

ಧಾರವಾಡ | ಪಶ್ಚಿಮ ಪದವೀಧರರ ಕ್ಷೇತ್ರ ಕಣದಲ್ಲಿ 14 ಅಭ್ಯರ್ಥಿಗಳು; ಅ.23ರಂದು ಮತದಾನ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಅಕ್ಟೋಬರ್ 23ರಂದು...