ಧರ್ಮ, ರಾಜಕೀಯ, ಜಾತಿ ಎಂಬಂತಹ ಯಾವುದೇ ಭೇದಭಾವವಿಲ್ಲದೇ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಇತರ ಹಿಂದುಳಿದ ಜಿಲ್ಲೆಗಳಲ್ಲಿ ತನ್ನದೇ ವೈಶಿಷ್ಟ್ಯಪೂರ್ಣ ಶೈಲಿಯಲ್ಲಿ ಸಾಮಾಜಿಕ ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಬಂದಿರುವ ಮಂಗಳೂರಿನ ಭಾರತ್ ಸೋಷಿಯಲ್ ಮತ್ತು ವೆಲ್ಫೇರ್ ಟ್ರಸ್ಟ್(BSWT) ವತಿಯಿಂದ 9ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಡಿ.30ರಂದು ಆಯೋಜಿಸಿದೆ.
2023 ನೇ ಸಾಲಿನ 9ನೇ ವರ್ಷದ ವಿದ್ಯಾರ್ಥಿ ವೇತನಾ ವಿತರಣಾ ಸಮಾರಂಭದಲ್ಲಿ ನಾಡಿನ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು (ವಿಜಯ ಟೈಮ್ಸ್ ಡಿಜಿಟಲ್ ಮೀಡಿಯಾ) ಅವರಿಗೆ ‘ಭಾರತ್ ಸೋಷಿಯಲ್ ಮತ್ತು ವೆಲ್ಪೇರ್ ಟ್ರಸ್ಟ್ ಇದರ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷರಾದ ನೂರುಲ್ ಅಮೀನ್ ತಿಳಿಸಿದ್ದಾರೆ.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.30ರ ಶನಿವಾರ ಸಂಜೆ 3ಕ್ಕೆ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಪ್ರಶಸ್ತಿ ಮತ್ತು ಫಲಕವನ್ನು ನೀಡಿ ಗೌರವಿಸಲಾಗುವುದು. ಮತ್ತು ಈ ಪ್ರಶಸ್ತಿಯೂ 25,000 ರುಪಾಯಿ ಗೌರವಧನ ಒಳಗೊಂಡಿರುತ್ತದೆ. ಆ ದಿನದಂದು 175 ಅರ್ಹ ವಿದ್ಯಾರ್ಥಿಗಳಿಗೆ ತಲಾ ನಾಲ್ಕು ಸಾವಿರ ರೂಪಾಯಿ ವಿದ್ಯಾರ್ಥಿ ವೇತನವನ್ನು ನೀಡಿ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯರಾಜ್ ಅಮೀನ್, ಮಂಗಳ ಗಂಗೋತ್ರಿಯ ಸೂಪರಿಡೆಂಟ್ ಹರೀಶ್ ಕುಮಾರ್ ಕುತ್ತಡ್ಕ, ಗೋಕರ್ಣನಾಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಆಶಾಲತ ಎಸ್ ಸುವರ್ಣ, ಮಿಲಾಗ್ರಿಸ್ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಮೆಲ್ವಿನ್ ವಾಸ್, ಖದೀಜಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಅಶ್ರಫ್ ಎಂ. ಸಿ, ಡಾ. ಅರುಣ್ ಉಳ್ಳಾಲ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ನಿಯಾಝ್ ಪೆರ್ಲ, ಅಶೀರುದ್ದೀನ್ ಮಾಸ್ಟರ್ ಸಾರ್ತಬೈಲ್, ಅಬ್ದುಲ್ಲಾ, ಅಡ್ವೊಕೇಟ್ ಕೆ. ಮುಹಮ್ಮದ್ ಝಮೀರ್, ಆಕಿಫ್ ಇಂಜಿನಿಯರ್ ಉಪಸ್ಥಿತರಿದ್ದರು.