- ಒಟ್ಟು 17 ವಿಚಾರಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ
- ಹಿಂದಿನ ಸರ್ಕಾರ ಮಾಡಿರುವ ಪಠ್ಯಪುಸ್ತಕ ಪರಿಷ್ಕರಣೆ ರದ್ದು
ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳನ್ನು ರದ್ದು ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.
ಗುರುವಾರ ನಡೆದ ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಹಿಂದಿನ ಸರ್ಕಾರ ಮಾಡಿರುವ ಪಠ್ಯಪುಸ್ತಕ ಪರಿಷ್ಕರಣೆ ರದ್ದು ಮಾಡಿ, ಹಿಂದಿನ ಪಠ್ಯವನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಒಟ್ಟು 17 ವಿಚಾರಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಎಚ್ ಕೆ ಪಾಟೀಲ್ ವಿವರ ಒದಗಿಸಿದರು.
ಸಂಪುಟ ಸಭೆಯಲ್ಲಿ ಚರ್ಚಿತವಾದ ವಿಚಾರಗಳು
- ಕರ್ನಾಟಕ ಹೈ ಕೋರ್ಟ್‌ನ ಆಡಳಿತ ವೆಚ್ಚ ಮಿತಿ, ಹಣಕಾಸು ಅಧಿಕಾರ ಹೆಚ್ಚಳ ಮಾಡಲು ಮತ್ತು ಹೆಚ್ಚಿನ ಅಧಿಕಾರಿಗಳ ನಿಯೋಜನೆಗೆ ಒಪ್ಪಿಗೆ.
- ಕೆಪಿಎಸ್‌ಸಿಯಲ್ಲಿ ಖಾಲಿ ಇರುವ ಮೂರು ಸದಸ್ಯರ ಭರ್ತಿಗೆ ಸಿಎಂಗೆ ಅಧಿಕಾರ.
- ಕರ್ನಾಟಕ ಮಾಹಿತಿ ತಂತ್ರಜ್ಞಾನ ಬಯೋಟೆಕ್ನಾಲಜಿ, ವಿಜ್ಞಾನ, ತಂತ್ರಜ್ಞಾನ ಇಲಾಖೆಯು ಇಸಿಎಂಎ ಅವರಿಗೆ ಫ್ಲಾಗ್ ಶಿಪ್ ಕಾರ್ಯಕ್ರಮ ಟೆಕ್ ಸಮಿಟ್ (ಇನ್ ಬೆಂಗಳೂರು ಬಿಯಾಂಡ್ ಬೆಂಗಳೂರು) ಮಾಡುವ ಪ್ರಸ್ತಾವನೆಗೆ ಒಪ್ಪಿಗೆ.
- ಸಂಸದೀಯ ವ್ಯವಹಾರಗಳ ಇಲಾಖೆ ಡಿಸ್ ಕ್ವಾಲಿಫಿಕೇಶನ್ ಆಕ್ಟ್ ತಿದ್ದುಪಡಿ ಮಾಡಲು ಬಯಸಿದ್ದು, ಕಾನೂನು ಸಲಹೆಗಾರರನ್ನು ಹೊರಗಿಡಲಾಗಿದೆ.
- ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಇಲಾಖೆ ತಂದ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ.
- ಎಪಿಎಂಸಿ ಕಾನೂನನ್ನು ಪರಿಷ್ಕರಿಸಿ ಹಿಂದಿನ ಸರ್ಕಾರದವರು ಸತ್ವ ಕಳೆದಿದ್ದರು. ಆ ತಿದ್ದುಪಡಿಯನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ.
- ಸಮಾಜ ಕಲ್ಯಾಣ ಇಲಾಖೆಯು ತಂದ ಪ್ರಸ್ತಾವನೆಯಂತೆ, ಪ್ರತಿ ಕಾಲೇಜು, ಶಾಲೆಯಲ್ಲಿ ಸಂವಿಧಾನ ಪೀಠಿಕೆಯನ್ನು
ಓದಲು ತೀರ್ಮಾನ. - ಸಾರಿಗೆ ನಿಗಮಗಳಿಂದ ಮೋಟರ್ ಟ್ಯಾಕ್ಸ್ ಮತ್ತು ಅರಿಯರ್ಸ್ 79.85 ಕೋಟಿ ಬಾಕಿ ಇದೆ. ಅದನ್ನು ಎಕ್ಸಂಮ್ಟೆಡ್ ಮಾಡಲಾಗಿದೆ. ನಿಗಮಗಳ ಭಾರವನ್ನು ತಗ್ಗಿಸುವುದು ಉದ್ದೇಶ.
- ಸಾರಿಗೆ ನಿಗಮಗಳು ಡಬಲ್ ಡೆಕರ್, ಎಲೆಕ್ಟ್ರಿಕ್ ವಾಹನ 28 ಕೋಟಿ ಕೊಡಲು ಅನುಮತಿ.
- ಸಾರಿಗೆ ನಿಗಮಗಳ ಸಿಬ್ಬಂದಿಯ ವೇತನ ಶೇ. 15 ಹೆಚ್ಚಿಸಲು ಘಟನೋತ್ತರ ಅನುಮತಿ.
- ಗೃಹ ಲಕ್ಷ್ಮೀ ಯೋಜನೆಯ ಯಶಸ್ವಿ ಅನುಷ್ಠಾನವನ್ನು ಸಮಸ್ಯೆ ರಹಿತವಾಗಿ ಮಾಡಲು ಟೆಕ್ನಾಲಜಿ ಬಳಸಲು
ತೀರ್ಮಾನ. - ಡಾ.ಮೈತ್ರಿ ಕೆಎಎಸ್ ಜ್ಯೂ. ಹುದ್ದೆ ಪ್ರಸ್ತಾವನೆ ಬಗ್ಗೆ ಚರ್ಚೆಯಾಗಿದ್ದು, ತಡೆ ಹಿಡಿಯಲಾಗಿದೆ.
- 1081 ಕೋಟಿ ರೂ. ವೆಚ್ಚದಲ್ಲಿ 243 ಎಂಎಲ್ ಡಿ ವೃಷಭಾವತಿ ನದಿಯ ನೀರನ್ನು 70 ಕೆರೆ ತುಂಬಿಸುವ ಪರಿಷ್ಕೃತ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರದ ಕೆರೆ ಭರ್ತಿ ಯೋಜನೆ.
- ವಿಪತ್ತು ನಿರ್ವಹಣೆ ಸಂಬಂಧ ನಿರ್ದೇಶನ ನೀಡಲು ಸಂಪುಟ ಉಪ ಸಮಿತಿ ರಚಿಸಲು ಒಪ್ಪಿಗೆ.
ptcl
scst atrocities
ಜಾನುವಾರು ಹತ್ಯೆ ನಿಷೇಧ ಕಾಯ್ದೆ
ವಿದ್ಯಾರ್ಥಿಗಳ SCS T ) ಉನ್ನತ ಶಿಕ್ಷಣದ ವಿದ್ಯಾರ್ಥಿ ವೇತನ ಮುಂತಾದ ವಿಷಯಗಳು ಚರ್ಚೆಗೆ ಬಂದಲ್ಲಾ