ಬೆಳಗಾವಿ ರೈಲು ನಿಲ್ದಾಣದ ಬಳಿ ಆಟೋ ನಿಲ್ದಾಣ ನಿರ್ಮಿಸಲಾಗಿದೆ. ಆದರೆ, ಅಲ್ಲಿ ಆಟೋ ನಿಲ್ಲಿಸಲು ಇನ್ನೂ ಅನುಮತಿ ನೀಡಲಾಗಿಲ್ಲ. ಕೂಡಲೇ ಅನುಮತಿ ನೀಡಬೇಕು ಎಂದು ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘ ಒತ್ತಾಯಿಸಿದೆ.
ಬೆಳಗಾವಿ ರೈಲು ನಿಲ್ದಾಣದ ರೈಲು ನಿಲ್ಧಾಣದ ಬಳಿ ಪ್ರತಿಭಟನೆ ನಡೆಸಿದ ಆಟೊ ಚಾಲಕರು ರೈಲ್ವೇ ಅಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ರೈಲು ನಿಲ್ದಾಣದ ಬಳಿ ಆಟೋ ನಿಲ್ದಾಣವಿದ್ದರೂ, ಅದರ ಬಳಕೆಗೆ ಅನುಮತಿ ನೀಡಿಲ್ಲ. ಹೀಗಾಗಿ, ರಸ್ತೆಯಲ್ಲಿ ಆಟೋ ನಿಲ್ಲಿಸುವಂತಾಗಿದೆ. ಪೊಲೀಸರಿಂದ ದಂಡನೆಗೊಳಗಾಗುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಆಟೋಗಳನ್ನು ದೂರದಲ್ಲಿ ನಿಲ್ಲಿಸುವುದರಿಂದ ರೈಲು ಪ್ರಯಾಣಿಕರೂ ತಮ್ಮ ಲಗೇಜುಗಳನ್ನು ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ, ಕೂಡಲೇ ರೈಲ್ವೇ ನಿಲ್ದಾಣದಲ್ಲಿರುವ ಆಟೋ ನಿಲ್ದಾಣದಲ್ಲಿ ಆಟೋಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.