ಮೈಸೂರು | ಎಸ್‌ಸಿಪಿ/ಟಿಎಸ್‌ಪಿ ಹಣ ದುರ್ಬಳಕೆ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Date:

Advertisements

ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟಿರುವ ಎಸ್‌ಸಿಪಿ/ಟಿಎಸ್‌ಪಿ ಹಣ ದುರ್ಬಳಕೆ ಮಾಡುತ್ತಿರುವ ಆಧಿಕಾರಿಗಳ ವಿರುದ್ಧ ಕಲಂ 24 ಮತ್ತು 25ರಂತೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಹಕ್ಕೊತ್ತಾಯಗಳ ಬಗ್ಗೆ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಲು ಸಮಯ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು.

ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಚಿವ ಎಚ್‌ ಸಿ ಮಹದೇವಪ್ಪ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆಗೆ ಚರ್ಚಿಸುವ ಅವಕಾಶಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.

“ಪರಿಶಿಷ್ಟ ಜಾತಿಯವರ ಉಪಹಂಚಿಕೆ ಹಣವು ಬಡತನ ನಿವಾರಣೆಗಾಗಿ ಮೀಸಲಿಟ್ಟ ಹಣವಲ್ಲ. ಸಾಯುವವರೆಗೂ ಪ್ರತಿ ವರ್ಷ ಸಹಾಯಧನ, ಸೌಲಭ್ಯ ನೀಡಲು ರೂಪಿಸಿದ ಯೋಜನೆಯಲ್ಲ. ನಿಗದಿತ ಸಮಯದೊಳಗೆ(10 ವರ್ಷದೊಳಗೆ) ಪರಿಶಿಷ್ಟ ಜಾತಿಯವರ ಅಭಿವೃದ್ಧಿ ಮಾಡಬೇಕೆಂದು ರೂಪಿಸಿದ ಯೋಜನೆಯಾಗಿದ್ದು, ಕೂಡಲೇ ಇದರಂತೆ ನಡೆದುಕೊಳ್ಳಬೇಕು. 2011ರ ಜನಗಣತಿಯಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಒಟ್ಟು 1,04,74,992 ಮಂದಿ ಜನಸಂಖ್ಯೆಯಲ್ಲಿ(ಶೇ.17.15ರ) ಜಾತಿವಾರು ನಿಗಮಗಳಿಗೆ, ಜಾತಿಗಳ ಜನಸಂಖ್ಯೆಯಷ್ಟು ಹಣವನ್ನು ವಿಂಗಡಿಸಿ ಎಲ್ಲ ಹಣವನ್ನು ನಿಗಮಗಳಿಗೆ ಹಂಚಿಕೆ ಮಾಡಬೇಕು ಮತ್ತು ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.

Advertisements

“14,000 ಕೋಟಿ ರೂಪಾಯಿ ಅನುದಾನವನ್ನು 5 ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಿರುವ ಹಣವನ್ನು ಸಾಮಾನ್ಯ ಹಣದಲ್ಲಿ ಖರ್ಚು ಮಾಡಬೇಕು. ಪರಿಶಿಷ್ಟ ಜಾತಿ/ಪಂಗಡದವರ ಅಭಿವೃದ್ಧಿಗೆ ಮಾರಕವಾಗಿರುವ ಹಣ ದುರ್ಬಳಕೆಯಾಗಲು ಕಾರಣವಾಗುತ್ತಿರುವ ಕರ್ನಾಟಕ ಪರಿಶಿಷ್ಟ ಜಾತಿ/ಬುಡಕಟ್ಟುಗಳ ಉಪ ಹಂಚಿಕೆ ಕಾಯ್ದೆ 2013ರ ಕಲಂ 7(ಬಿ) ಮತ್ತು 7(ಸಿ)ಯನ್ನು ಕಾಯ್ದೆಯಿಂದ ತೆಗೆದು ಹಾಕಬೇಕು” ಎಂದು ಒತ್ತಾಯಿಸಿದರು.

“ಪರಿಶಿಷ್ಟ ಜಾತಿ/ಬುಡಕಟ್ಟುಗಳ ಉಪ ಹಂಚಿಕೆ ಕಾಯ್ದೆ 2013ರ ಕಾಯ್ದೆಗೆ ಎರಡು ಬಾರಿ ಸರ್ಕಾರಕ್ಕೆ ಇಷ್ಟಬಂದಾಗ ತಿದ್ದುಪಡಿ ಮಾಡಿದ್ದು, ಕೂಡಲೇ ಈ ಕಾಯ್ದೆಯಲ್ಲಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಅಭಿವೃದ್ಧಿ ವಿರೋಧಿ ಕಲಂಗಳನ್ನು ತೆಗೆಯಲು ಜನಾಂಗದವರಿಂದ ಮತ್ತು ಸಂಘ ಸಂಸ್ಥೆಗಳಿಂದ ಸಲಹೆಗಳನ್ನು ಪಡೆದು ಕೂಡಲೇ ತಿದ್ದುಪಡಿ ಮಾಡಬೇಕು” ಎಂದರು.

“2023-24ರಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿಗಳು ಇಲ್ಲದೇ 11,000 ಕೋಟಿ ರೂಗಳನ್ನು ಇತರೆ ಬಳಕೆಗೆ ಖರ್ಚು ಮಾಡಿದ್ದು, ಶಕ್ತಿ ಯೋಜನೆ, ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಅನುಷ್ಠಾನ ಮಾಡುತ್ತಿರುವ ಇಲಾಖೆಗಳ ಅಧಿಕಾರಿಗಳ ಮೇಲೆ ಕಾಯ್ದೆ ಕಲಂ 24 ಮತ್ತು 25ರಂತೆ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

“ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಉಪಹಂಚಿಕೆ ಕಾಯ್ದೆ 2013ರ ಕಲಂ 2(ಬಿ)ಯಲ್ಲಿ ಆಡಳಿತಾತ್ಮಕ ವೆಚ್ಚಗಳನ್ನು ಹೊರತುಪಡಿಸಿ ಎಂದು ತಿಳಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಮತ್ತು ಅದರ ಅಂಗ ಸಂಸ್ಥೆಗಳು ಆಡಳಿತ ವೆಚ್ಚಕ್ಕೆ ಖರ್ಚು ಮಾಡಿರುವ ಮತ್ತು ಮಾಡುತ್ತಿರುವ ಹಣವನ್ನು ಪರಿಶಿಷ್ಟ ಜಾತಿ/ಪಂಗಡಗಳ ಉಪಹಂಚಿಕೆ ಹಣದಲ್ಲಿ ಖರ್ಚು ಮಾಡುತ್ತಿದ್ದು, ಕೂಡಲೇ ಆಡಳಿತತ್ಮಾಕ ಸಾಮಾನ್ಯ ಹಣದಲ್ಲಿ ಖರ್ಚು ಮಾಡಬೇಕು. ಹತ್ತು ವರ್ಷಗಳಿಂದ ಖರ್ಚು ಮಾಡಿದ ಇಲಾಖೆಯ ಸಂಬಂದಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಗ್ಯಾರಂಟಿ ಯೋಜನೆಗೆ ದಲಿತರ ಹಣ ಬಳಕೆ; ಕ್ರಮಕ್ಕೆ ದಸಂಸ ಆಗ್ರಹ

“ಕಾಯ್ದೆ ಜಾರಿಗೆ ಬಂದು 10 ವರ್ಷಗಳು ಕಳೆದಿದ್ದು(2014-15 ರಿಂದ 2023-24 ರವರೆಗೆ) ಕಾಯ್ದೆಯ 7(ಎ), 7(ಬಿ), 7(ಸಿ) ಮತ್ತು 7(ಡಿ)ಯಲ್ಲಿ ಯೋಜನೆಗಳಲ್ಲಿ ಖರ್ಚಾಗಿರುವ ಹಣದಲ್ಲಿ ಯಾವ ವ್ಯಕ್ತಿಗಳ ಕುಟುಂಬಗಳ ಮತ್ತು ಏರಿಯಾಗಳ ಅಭಿವೃದ್ಧಿಯಾಗಿದೆಯೆಂದು ಜಿಲ್ಲಾ, ತಾಲೂಕು, ಗ್ರಾಮಾವಾರು ಪ್ರಗತಿಯ ಅಭಿವೃದ್ಧಿಯ ವಿವರಗಳನ್ನು ಕೂಡಲೇ ಬಹಿರಂಗಪಡಿಸಬೇಕು” ಎಂದು ಎಚ್ಚರಿಕೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

ಮಂಗಳೂರು | ಆ. 23: ಅಲ್ ವಫಾ ಚಾರಿಟೇಬಲ್ ಟ್ರಸ್ಟ್‌ನಿಂದ 15 ಜೋಡಿಗಳ ಸರಳ ಸಾಮೂಹಿಕ ವಿವಾಹ

ಮಂಗಳೂರು ಭಾಗದಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅಲ್ ವಫಾ ಚಾರಿಟೆಬಲ್ ಟ್ರಸ್ಟ್...

ಗುಬ್ಬಿ | ಎಂ.ಎನ್.ಕೋಟೆ ಗ್ರಾಪಂ ಉಪಾಧ್ಯಕ್ಷರಾಗಿ ಸಿದ್ದಗಂಗಮ್ಮ ಅವಿರೋಧ ಆಯ್ಕೆ

ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ...

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

Download Eedina App Android / iOS

X