ವಿಜಯಪುರ | ʼವಚನ ದರ್ಶನʼ ಪುಸ್ತಕ ರದ್ದುಗೊಳಿಸಲು ಆಗ್ರಹ

Date:

Advertisements

ವಿಜಯಪುರ ನಗರದಲ್ಲಿ ಸೆ.5ರಂದು ʼವಚನ ದರ್ಶನʼ ಪುಸ್ತಕ ಬಿಡುಗಡೆ ಸಮಾರಂಭವನ್ನು ಶರಣ ಸಂಸ್ಕೃತಿ ರಕ್ಷಣಾ ವೇದಿಕೆ ವಿರೋಧಿಸಿ ಖಂಡಿಸಿದೆ.

ಶರಣ ಸಂಸ್ಕೃತಿಯನ್ನು ಮತ್ತು ಲಿಂಗಾಯತ ಧರ್ಮತತ್ವಗಳನ್ನು ನಾಶಪಡಿಸುವ ಉದ್ದೇಶದಿಂದ ವಚನ ದರ್ಶನ ಪುಸ್ತಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವುದು ಬಸವ ಭಕ್ತರು ಹಾಗು ಲಿಂಗಾಯತರಿಗೆ ನೋವು ತಂದಿದೆʼ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವಚನ ದರ್ಶನ ಪುಸ್ತಕವನ್ನು ಪ್ರತಿ ಜಿಲ್ಲೆಗಳಲ್ಲಿ 3 ರಿಂದ 5 ಲಕ್ಷ ರೂಪಾಯಿ ಖರ್ಚು ಮಾಡಿ ಬಿಡುಗಡೆ ಮಾಡುತ್ತಿರುವುದರ ಹಿಂದಿನ ಹುನ್ನಾರ ಬಯಲಾಗಬೇಕಿದೆ. ಈ ಪುಸ್ತಕ ಬಿಡುಗಡೆ ನಾಡಿನಾದ್ಯಂತ ಸಾಮಾಜಿಕ ಸ್ವಾಸ್ಥ್ಯ ಕದಡಲಿದೆ. ಹೀಗಾಗಿ ಈ ಪುಸ್ತಕ ಬಿಡುಗಡೆಯ ಸಮಾರಂಭವನ್ನು ನಾವು ಸಾತ್ವಿಕವಾಗಿ ವಿರೋಧಿಸುತ್ತೇವೆʼ ಎಂದು ತಿಳಿಸಿದರು.

Advertisements

ವಚನ ಚಳುವಳಿಯ ಆಶಯ, ಲಿಂಗಾಯತ ಸಂಸ್ಕೃತಿಯನ್ನು ನಾಶಗೊಳಿಸುವ ಪ್ರಯತ್ನ ಇಂದು ನಿನ್ನೆಯದಲ್ಲ. ಎಂ.ಆರ್. ಶ್ರೀನಿವಾಸಮೂರ್ತಿ, ಆರ್.ಆರ್.ದಿವಾಕರ, ಡಂಕಿನ್ ಝಳಕಿ, ರಾಜಾರಾಮ್ ಹೆಗಡೆ ಮುಂತಾದವರಿಂದ ಲಿಂಗಾಯತ ಧರ್ಮ ಹತ್ತಿಕ್ಕುವ ಪ್ರಯತ್ನ ನಡೆದಿದೆʼ ಎಂದರು.

ಶರಣರ ಕ್ರಾಂತಿಯ ಹಿನ್ನೆಲೆಯನ್ನು ನೋಡದೆ ಸನಾತನ ವೈದಿಕ ದರ್ಶನದ ಚೌಕಟ್ಟಿನಲ್ಲಿ ಸೇರಿಸಿ ಅದೊಂದು ಶುಷ್ಕ ಭಕ್ತಿ ಚಳುವಳಿ ಎಂಬಂತೆ ಬಿಂಬಿಸುವ ಪ್ರಯತ್ನದ ವಿರುದ್ದ ಬಸವಾನುಯಾಯಿಗಳು ಸಾತ್ವಿಕ ಹಾಗು ತಾತ್ವಿಕ ಆಕ್ರೋಶ ಹೊಂದಿದ್ದಾರೆʼ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಧಾರವಾಡ | ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಹತ್ಯೆ; ವಿವಿಧ ಸಂಘಟನೆಗಳ‌ ಪ್ರತಿಭಟನೆ

ಪತ್ರಿಕಾಗೋಷ್ಠಿಯಲ್ಲಿ ಶರಣ ಸಂಸ್ಕೃತಿ ಹಾಗೂ ಲಿಂಗಾಯತ ಧರ್ಮ ರಕ್ಷಣಾ ವೇದಿಕೆ ಸಂಚಾಲಕ ಡಾ.ಜೆ.ಎಸ್.ಪಾಟೀಲ, ಸೇರಿದಂತೆ ಪ್ರಮುಖರಾದ ಜಿ.ಬಿ.ಸಾಲಕ್ಕಿ, ಮನಗೂಳಿ ವಿರಕ್ತಮಠದ ವಿರತೀಶಾನಂದಸ್ವಾಮೀಜಿ, ಕಲಕೇರಿ ಶಿವಾಚಾರ್ಯಸ್ವಾಮೀಜಿ, ಜಂಬುನಾಥ ಕಂಚಾಣಿ, ಬಸವರಾಜ ಕೊಂಡಗುಳಿ, ಕಲ್ಲಪ್ಪ ಕಡೆಚೂರ, ಹನುಮಂತ ಚಿಂಚಲಿ, ಮಹಾದೇವಿ ಗೋಕಾಕ, ರಾಜೇಶ್ವರಿ ಅರನಾಳ ಇತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X