ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾಗೂರ ಗ್ರಾಮದಲ್ಲಿ ಬೆಣ್ಣೆತೋರಾ ಅಣೆಕಟ್ಟಿನಿಂದ ಭೂಮಿ ಮತ್ತು ಮನೆ ಕಳೆದುಕೊಂಡ ಕುಟುಂಬಗಳಿಗೆ ವಸತಿಗಾಗಿ ನಿವೇಶನ ಹಂಚಿಕೆ ಮಾಡಿ ಹಕ್ಕು ಪತ್ರ ವಿತರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ನೇತ್ರತ್ವದಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, “ಬೆಣ್ಣೆತೋರಾ ಅಣೆಕಟ್ಟಿನಿಂದ ಭೂಮಿ ಮತ್ತು ಮನೆ ಕಳೆದುಕೊಂಡ ನಿರಾಶ್ರಿತ ಕುಟುಂಬಸ್ಥರಿಗೆ ಮನೆಯಿಲ್ಲದೆ ಪರದಾಡುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವರಿಗೆ ಹಕ್ಕು ಪತ್ರಗಳು ನೀಡಿದರೂ ಇನ್ನೂ ಕೆಲವರ ವಸತಿಗೆ ಭೂಮಿ ಇಲ್ಲ ಎಂದು ನೆಪ ಹೇಳುತ್ತಿದ್ದಾರೆ. ಕೂಡಲೇ ನಾಗೂರ ಗ್ರಾಮದ ಅಣೆಕಟ್ಟು ಮುಳುಗಡೆ ನಿರಾಶ್ರಿತ ಎಲ್ಲ ಕುಟುಂಬಗಳಿಗೆ ವಸತಿಗಾಗಿ ಖಾಲಿ ನಿವೇಶನ ಹಕ್ಕು ಪತ್ರ ವಿತರಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ದಿಲೀಪ್ ನಾಗೂರೆ, ಚಾಂದ್ ಪಾಶಾ ಕೆಳಗಿನಮನಿ, ಈಶ್ವರ ಅಡವಿಕರ್ ಸೇರಿದಂತೆ ಭೂಮಿ ಕಳೆದುಕೊಂಡ ನಿರಾಶ್ರಿತರು ಇದ್ದರು.
ಬೇಡಿಕೆಗಳು:
1. ಎಲ್ಲಾ ನಿರಾಶಿತ್ರರಿಗೆ ಹೆಚ್ಚಿನ ಭೂಮಿ ಖರೀದಿಸಿ ಹಕ್ಕು ಪತ್ರಗಳು ನೀಡಬೇಕು.
2. ಭೂಮಿ ಮತ್ತು ಮನೆ ಕಳೆದುಕೊಂಡ ಸಂತ್ರಸ್ತರಿಗೆ ತಲಾ 5 ಲಕ್ಷ ರೂ. ಹಾಗೂ ಮನೆ ಮಂಜೂರು ಮಾಡಬೇಕು
3. ಪುನರ್ವಸತಿಗಾಗಿ ನಿವೇಶನ ಹಕ್ಕು ಪತ್ರಗಳು ನೀಡಿದವರಿಗೆ ನಿವೇಶನ ಜಾಗ ಗುರುತಿಸಬೇಕು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅತಿಥಿ ಉಪನ್ಯಾಸಕರ ಸಮಸ್ಯೆಗಳ ಪರಿಹಾರಕ್ಕೆ ಎಐಡಿಎಸ್‌ಒ ಆಗ್ರಹ
4. ನಾಗೂರ ಗ್ರಾಮದಲ್ಲಿನ ಹಕ್ಕು ಪತ್ರ ಕುರಿಕೋಟ ಗ್ರಾಮಸ್ಥರಿಗೆ ಹಕ್ಕು ಪತ್ರಗಳು ಹಂಚುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.