ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಕನ್ನಡಪರ ಹೋರಾಟಗಾರನೋರ್ವ ಹಾಗೂ ಮತ್ತವರ ಕುಟುಂಬದ ಮಹಿಳೆಯರ ಫೋಟೋ ಹಾಕಿ, ತೇಜೋವಧೆ ಮಾಡುತ್ತಿದ್ದ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಯ ಹಿಂಬಾಲಕ ಹಾಗೂ ಸಂಘಪರಿವಾರದ ಕಾರ್ಯಕರ್ತನಿಗೆ ಧರ್ಮದೇಟು ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ಭಾನುವಾರ ಸಂಜೆ ನಡೆದಿದೆ.
ಸಾರ್ವಜನಿಕರಿಂದ ಪೆಟ್ಟು ತಿಂದ ವ್ಯಕ್ತಿಯನ್ನು ಪದ್ದು ಮಹಾರಾಜ್ ಎಂದು ಗುರುತಿಸಲಾಗಿದೆ.
ಫೇಸ್‌ಬುಕ್‌ನಲ್ಲಿ ‘ತಪ್ಪು ಮಾಡುವವರ ಅಪ್ಪ ನಾನೆ’ ಎಂಬ ಐಡಿಯಲ್ಲಿ ಲೈವ್ ಮಾಡುತ್ತಾ, ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಿದ್ದುದ್ದಲ್ಲದೇ, ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದನು. ಇತ್ತೀಚೆಗೆ ಕನ್ನಡಪರ ಹೋರಾಟಗಾರ ನಟರಾಜ್ ಬೊಮ್ಮಸಂದ್ರ ಎಂಬುವವರ ಮನೆಯವರ ಫೋಟೋ ಹಾಕಿ, ಈ ಪೋಸ್ಟ್ ಡಿಲೀಟ್ ಮಾಡಬೇಕೆಂದರೆ 50 ಸಾವಿರ ನೀಡುವಂತೆ ಬಹಿರಂಗವಾಗಿ ಬೆದರಿಸಿದ್ದ. ಅಲ್ಲದೇ, ಚಾಕು ತೋರಿಸಿ, ಪಕ್ಕದಲ್ಲೇ ಇಟ್ಟಿರುತ್ತೇನೆ. ತಾಕತ್ತಿದ್ದರೆ ಬನ್ನಿ ಎಂದು ಸವಾಲೆಸೆದು, ಮನೆಯ ವಿಳಾಸವನ್ನೂ ನೀಡಿದ್ದನು. ಫೇಸ್‌ಬುಕ್ ಲೈವ್‌ನಲ್ಲೇ ಜೀವ ಬೆದರಿಕೆ ಹಾಕಿದ್ದ.
ಇಂದು ಸಂಜೆ ಈತನನ್ನು ಪತ್ತೆ ಹಚ್ಚಿದ ಅವಮಾನಕ್ಕೊಳಗಾದ ಮಹಿಳೆಯರು ಹಾಗೂ ಸಾರ್ವಜನಿಕರು, ಧರ್ಮದೇಟು ನೀಡಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಆ ಬಳಿಕ ಸ್ಥಳಕ್ಕೆ ಪದ್ದು ಮಹಾರಾಜ್‌ನ ತಾಯಿ ಹಾಗೂ ಸಹೋದರಿಯನ್ನು ಕರೆಸಿಕೊಂಡಿದ್ದಾರೆ.
ಈತ ಸಂಘಪರಿವಾರದ ಕಾರ್ಯಕರ್ತನಂತೆ ಫೋಸು ಕೊಟ್ಟು, ಪುನೀತ್ ಕೆರೆಹಳ್ಳಿಯ ಸಹವಾಸ ಕೂಡ ಮಾಡಿದ್ದ. ಸದ್ಯ ಈತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದು, ದೂರು ದಾಖಲಿಸಿದ್ದಾರೆ.
ಈತ ಈ ಹಿಂದೆ, ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣನವರಿಗೆ ಕರೆ ಮಾಡಿ ಬಾಯಿಗೆ ಬಂದಂತೆ ಬಯ್ದು ಹೆಣ್ಣುಮಗುವನ್ನು ರೇಪ್ ಮಾಡ್ತಿನಿ ಎಂದು ಬೆದರಿಕೆಯೂ ಹಾಕಿದ್ದ. ಕುಮಾರಸ್ವಾಮಿ ಲೇಔಟ್‌ನ ಪೊಲೀಸರು ಬಂಧಿಸಿ, ಫೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದರು.

ಪಾಪ ತಾಯಿ ಮತ್ತು ಸಹೋದರಿ ಗೆ ಎಷ್ಟು ಕಷ್ಟ ಕೊಟ್ಟಿರಬಹುದು ಅಲ್ವಾ?
ಮನೆಯಲ್ಲಿ ಈತರ ಗುಟ್ಕಾ ತಿಂದು ಬದುಕುತ್ತವೆ ಇವು