ಜನರ ಸಮಸ್ಯೆಗಳನ್ನು ಪರಿಹರಿಸುವುದು ಬಿಟ್ಟು ಪ್ರಧಾನಿ ಮೋದಿಯವರು ಸಮುದ್ರದಲ್ಲಿ ಸ್ನಾನ ಮಾಡುವುದರ ಮೂಲಕ ಡೋಂಗಿ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಸಿಪಿಐ ಹಿರಿಯ ಮುಖಂಡ ಆನಂದರಾಜ್ ಪ್ರಧಾನಿಯವರ ನಡೆಯನ್ನು ಖಂಡಿಸಿದರು.
ಸಿಪಿಐ ರಾಜ್ಯ ಮಂಡಳಿ ಕರೆಯ ಮೇರೆಗೆ ಸಿಪಿಐ ದಾವಣಗೆರೆ ಜಿಲ್ಲಾ ಮಂಡಳಿ ನೇತೃತ್ವದಲ್ಲಿ ನಗರದ ಜಯದೇವ ಸರ್ಕಲ್ನಲ್ಲಿ ‘ಭಾವನಾತ್ಮಕ ರಾಜಕಾರಣ ಸಾಕು. ಜನರ ಬದುಕು ಕಟ್ಟುವ ರಾಜಕಾರಣ ಬೇಕು’ ಎನ್ನುವ ಘೋಷಣೆಯೊಂದಿಗೆ ʼಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಂಡಿಸಲಿರುವ ಬಜೆಟ್ ಪೂರ್ವ ಜನರ ಹಕ್ಕೊತ್ತಾಯ ಚಳುವಳಿʼ ನಡೆಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ, ಕಾರ್ಮಿಕ ವಿರೋಧಿ, ಮಹಿಳಾ ವಿರೋಧಿ ವಿದ್ಯಾರ್ಥಿ ಯುವಜನರ ವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ. ದೇಶದ ಎಲ್ಲ ಜನರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಲೋಕಸಭಾ ಚುನಾವಣೆ; ಕಾಂಗ್ರೆಸ್ ಟಿಕೆಟ್ಗೆ ಪೈಪೋಟಿ
ಸಿಪಿಐ ಸಹಕಾರ್ಯದರ್ಶಿಗಳಾದ ಹೆಚ್ ಜಿ ಉಮೇಶ್, ಆವರಗೆರೆ ವಾಸು, ಎಂ ಬಿ ಶಾರದಮ್ಮ ಸೇರಿದಂತೆ ಸಿಪಿಐನ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.