ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ರಾಜ್ಯದಿಂದ ವಿವಿಧ ಮಠಾಧೀಶರು ಹೊರಟಿದಿದ್ದಾರೆ.
ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದ ಸ್ವಾಮೀಜಿ, ಮಾದರ ಚನ್ನಯ್ಯ ಗುರುಪೀಠ ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗದ ಶಾಂತವೀರ ಸ್ವಾಮೀಜಿ, ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠ ಚಿತ್ರದುರ್ಗದ ಇಮ್ಮಡಿ ಸಿದ್ದರಾಮಯ್ಯ ಸ್ವಾಮೀಜಿ, ವಾಲ್ಮೀಕಿ ಗುರುಪೀಠ ರಾಜನಳ್ಳಿ ಹರಿಹರದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಪಂಚಮಸಾಲಿ ಗುರುಪೀಠ ಹರಿಹರದ ವಚನಾನಂದ ಸ್ವಾಮೀಜಿ ಹಾಗೂ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಮಠಾಧೀಶರು ಹೊರಟಿದ್ದಾರೆ.
ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಎಕ್ಸ್ ತಾಣದಲ್ಲಿ ಅಯೋಧ್ಯೆಗೆ ತೆರಳುತ್ತಿರುವ ಸ್ವಾಮೀಜಿಗಳ ಫೋಟೋ ಫೋಸ್ಟ್ ಮಾಡಿ, “ಕರ್ನಾಟಕದ ವಿವಿಧ ಸಂಪ್ರದಾಯ ಮಠಾಧೀಶರು ಅಯೋಧ್ಯೆಗೆ ತೆರಳುತ್ತಿದ್ದು, ಜ.22ರಂದು ನಡೆಯುವ ಐತಿಹಾಸಿಕ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಸಾಕ್ಷಿಯಾಗಲಿದ್ದಾರೆ” ಎಂದು ತಿಳಿಸಿದ್ದಾರೆ.
ಕುತೂಹಲಕರ ವಿಷಯವೆಂದರೆ, ಮೇಲಿನ ಅಷ್ಟೂ ಮಠಾಧೀಶರು ಅಬ್ರಾಹ್ಮಣರು, ಶೂದ್ರ ಸಮುದಾಯಕ್ಕೆ ಸೇರಿದ ಮಠಗಳ ಸ್ವಾಮೀಜಿಗಳು.
Poojya Swamijis of various Sampradayas from Karnataka on way to Ayodhya to witness historic Sri Ramlala Sircar Prana Prathisthapana on 22 Jan 2024 .
🙏🙏🙏 pic.twitter.com/iRTTxhrWQo— B L Santhosh (@blsanthosh) January 20, 2024