ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಕೊಡಬೇಕಿದ್ದ ಪರಿಹಾರದ ಬಾಕಿ ಮೊತ್ತ ಉಳಿಸಿಕೊಂಡಿರುವ ಸಂಸ್ಥೆಯ ಚರಾಸ್ತಿ ಜಪ್ತಿಗೆ ದಾವಣಗೆರೆ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸೋಮವಾರ ಜಪ್ತಿ ಮಾಡಲಾಗಿದೆ.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹಾವೇರಿ ಡಿಪೋಗೆ ಸೇರಿದ ಎರಡು ಬಸ್‌ಗಳನ್ನು ನ್ಯಾಯಾಂಗ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿದರು. 2013ರಲ್ಲಿ ತುಮಕೂರು ಟೋಲ್ ಬಳಿ ಹಾವೇರಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಢಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿಗೆ ತೆರಳುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಸಂಜೀವ್ ಎಂ ಪಾಟೀಲ್ ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ₹2,82,42,885 ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು.
ಈ ಸುದ್ದಿ ಓದಿದ್ದೀರಾ? ಸಣ್ಣ ಸಮಸ್ಯೆಗೂ ಜನ ನನ್ನ ಬಳಿಗೆ ಬರುತ್ತಾರೆ ಎಂದರೆ ಡಿಸಿಗಳಿದ್ದು ಏನು ಪ್ರಯೋಜನ?: ಸಿದ್ದರಾಮಯ್ಯ ತರಾಟೆ
ಸಾರಿಗೆ ಸಂಸ್ಥೆ ಮೃತರ ಕುಟುಂಬಕ್ಕೆ ಈವರೆಗೆ 2.20 ಕೋಟಿ ಮಾತ್ರ ಪಾವತಿಸಿದ್ದು, 2016ರಿಂದ ಬಡ್ಡಿ ಮೊತ್ತ ಸೇರಿ 1 ಕೋಟಿಯಷ್ಟು ಹಣವನ್ನು ಕೆಎಸ್‌ಆರ್‌ಟಿಸಿ ನೀಡಬೇಕಿದೆ. 2016ರಿಂದ ಮೊತ್ತ ಪಾವತಿಸಲು ಸೂಚನೆ ನೀಡಿದರೂ ಈವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯ ಬಸ್‌ಗಳ ಜಪ್ತಿಗೆ ಆದೇಶಿಸಿದೆ.