ಕೊರಿಯಾದ ಯುವತಿ ಲೈವ್‌ನಲ್ಲಿರುವಾಗಲೇ ಲೈಂಗಿಕ ಕಿರುಕುಳ ನೀಡಿದ ಭಾರತೀಯ ವ್ಯಕ್ತಿ!

Date:

  • ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್
  • ಯುವಕನನ್ನು ಅಮಿತ್ ಎಂದು ಗುರುತಿಸಿದ ನೆಟ್ಟಿಗರು

ಕೊರಿಯಾದ ಯುವತಿಯೋರ್ವಳು ಲೈವ್‌ನಲ್ಲಿರುವಾಗಲೇ ಭಾರತೀಯ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಹಾಂಕಾಂಗ್‌ನಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

ಹಾಂಕಾಂಗ್ ಪ್ರವಾಸದಲ್ಲಿದ್ದ ಕೊರಿಯಾದ ಯುವತಿ, ‘ಟ್ವಿಚ್ಛ್(Twitch)’ ಎಂಬ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿರುವಾಗಲೇ ಹಿಂಬಾಲಿಸಿದ ಭಾರತೀಯ ವ್ಯಕ್ತಿಯೋರ್ವ, ‘ತನ್ನೊಂದಿಗೆ ಬಾ’ ಎಂದು ಬಲವಂತ ಮಾಡಿದ್ದಲ್ಲದೆ, ಅಸಭ್ಯವಾಗಿ ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ.

‘ಕಂಟೆಂಟ್ ಕ್ರಿಯೇಟರ್’ ಆಗಿರುವ ಮೂಲತಃ ದಕ್ಷಿಣ ಕೊರಿಯಾದ ಯುವತಿ, ಆಕೆ ತನ್ನ ಮನೆಗೆ ರಾತ್ರಿ ಹಿಂದಿರುಗುತ್ತಿದ್ದಾಗ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೆಟ್ರೋ ನಿಲ್ದಾಣದಲ್ಲಿ ಆಕೆಗೆ ಎದುರುಗೊಂಡ ಭಾರತೀಯ ಯುವಕ, ಆಕೆಯ ಬಳಿ ಸುಮಾರು 15 ನಿಮಿಷ ಮಾತನಾಡುತ್ತಾ ಮೆಟ್ರೋ ಬಗ್ಗೆ ಮಾಹಿತಿ ನೀಡುತ್ತಾ, ಹೆಗಲ ಮೇಲೆ ಕೈ ಹಾಕಿ ಸ್ನೇಹ ಬೆಳೆಸಲು ಹಿಂಬಾಲಿಸಿದ್ದಾನೆ. ಆ ಬಳಿಕ ಮೆಟ್ರೋ ನಿಲ್ದಾಣದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ತನ್ನೊಂದಿಗೆ ಬರುವಂತೆ ಬಲವಂತ ಮಾಡಿದ್ದು, ಅದನ್ನು ಆಕೆ ಒಪ್ಪದಿದ್ದಾಗ ಗೋಡೆಗೆ ಬಿಗಿಯಾಗಿ ದೂಡಿ, ಅಸಭ್ಯವಾಗಿ ಆಕೆಯ ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದು, ತನ್ನ ರಕ್ಷಣೆಗಾಗಿ ಆಕೆ ಬೊಬ್ಬೆ ಹೊಡೆದಿದ್ದಾಳೆ.

ಅದೃಷ್ಟವಶಾತ್ ಘಟನಾ ಸ್ಥಳದ ಸಮೀಪದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಅಲಾರಾಂ ಒತ್ತಿದ ಪರಿಣಾಮ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಎಲ್ಲ ದೃಶ್ಯವು ವಿಡಿಯೋದಲ್ಲಿ ದಾಖಲಾಗಿದ್ದು, ಲೈವ್‌ ನೋಡುತ್ತಿದ್ದ ಹಲವು ಮಂದಿ ವೀಕ್ಷಕರು, ಅಲ್ಲಿಂದ ಓಡು, ಪೊಲೀಸರಿಗೆ ದೂರು ಕೊಡು ಎಂದು ಸಲಹೆ ನೀಡುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.

ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲಿ ವೈರಲಾಗಿದ್ದು, ಯುವಕನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಯುವಕನನ್ನು ಅಮಿತ್ ಎಂದು ಗುರುತಿಸಿದ ನೆಟ್ಟಿಗರು
ಕೊರಿಯಾದ ಯುವತಿಗೆ ಕಿರುಕುಳ ನೀಡಿರುವ ಯುವಕನ ಮುಖವು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಇದನ್ನು ಅನುಸರಿಸಿ ಯುವಕನ ಗುರುತನ್ನು ಪತ್ತೆ ಹಚ್ಚಿರುವ ನೆಟ್ಟಿಗರು, ಕಿರುಕುಳ ನೀಡಿದಾತನನ್ನು ಅಮಿತ್ ಎಂದು ಗುರುತಿಸಿದ್ದಾರೆ.

ನೆಟ್ಟಿಗರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ವೀಡಿಯೊದಲ್ಲಿರುವ ವ್ಯಕ್ತಿಯನ್ನು ಅಮಿತ್, ಈತ ರಾಜಸ್ಥಾನ ರೈಫಲ್ಸ್ ಇಂಡಿಯನ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ಹಿಮಾಚಲ ಪ್ರದೇಶದವ ಎಂದು ತಿಳಿಸಿದ್ದಾರೆ.

ಆದರೆ, ಕಿರುಕುಳದಿಂದ ನೊಂದ ಯುವತಿಯು ದೂರು ನೀಡಿರುವ ಬಗ್ಗೆ ಎಲ್ಲೂ ವರದಿಯಾಗಿಲ್ಲ. ಆದರೆ ವಿಡಿಯೋ ವೈರಲಾಗಿರುವ ಹಿನ್ನೆಲೆಯಲ್ಲಿ ಆತನನ್ನು ಗುರುತಿಸಲಾಗಿದ್ದು, ಹಾಂಕಾಂಗ್ ಪೊಲೀಸರು 47 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ ಎಂದು ಹಾಂಕಾಂಗ್‌ನ ನಿವಾಸಿಯೊಬ್ಬರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

‘ನಮ್ಮ ಸಿಬ್ಬಂದಿಯಲ್ಲ’ ಎಂದ ಹೋಟೆಲ್

ಇನ್ನು ನೆಟ್ಟಿಗರು ಹಂಚಿಕೊಂಡ ಮಾಹಿತಿಯ ಬಗ್ಗೆ ಪ್ರತಿಕ್ರಿಯಿಸಿರುವ ರಾಜಸ್ಥಾನ ರೈಫಲ್ಸ್ ಇಂಡಿಯನ್ ರೆಸ್ಟೋರೆಂಟ್‌ನ ಮಾಲೀಕರು, ಸೆಂಟ್ರಲ್ ಎಂಟಿಆರ್ ಸ್ಟೇಷನ್‌ನಲ್ಲಿ ನಡೆದ ಘಟನೆಯ ಪರಿಸ್ಥಿತಿಯ ಬಗ್ಗೆ ನಮಗೆ ತಿಳಿದಿದೆ. ಈ ವ್ಯಕ್ತಿಯು ಕಳೆದ ಒಂದು ವರ್ಷದಿಂದ ರಾಜಸ್ಥಾನ ರೈಫಲ್ಸ್ ತಂಡ ಅಥವಾ ಬ್ಲ್ಯಾಕ್ ಶೀಪ್ ಕಂಪೆನಿಯ ಭಾಗವಾಗಿಲ್ಲ. ಈ ಘಟನೆಯನ್ನು ನಾವು ಖಂಡಿಸುತ್ತೇವೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.


ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕಾ| ಮತ್ತೊಬ್ಬ ವ್ಯಕ್ತಿಯಲ್ಲಿ ಹಕ್ಕಿ ಜ್ವರ ಪತ್ತೆ

ಹಕ್ಕಿ ಜ್ವರ ಆತಂಕ ಹೆಚ್ಚಾಗುತ್ತಿರುವ ನಡುವೆ ಅಮೆರಿಕಾದಲ್ಲಿ ಹಕ್ಕಿ ಜ್ವರದ ಎರಡನೇ...

8 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದನ ತುಂಡು ತುಂಡಾದ ದೇಹ ಕೋಲ್ಕತ್ತಾದಲ್ಲಿ ಪತ್ತೆ

ಭಾರತಕ್ಕೆ ಆಗಮಿಸಿ 8 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಂಗ್ಲಾದೇಶ ದ ಜೆನಾಯ್‌ದೇಹ್‌-4...

ಹೆಲಿಕಾಪ್ಟರ್ ಪತನ: ಇರಾನ್ ಅಧ್ಯಕ್ಷ, ವಿದೇಶಾಂಗ ಸಚಿವ ನಿಧನ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ...

ಇರಾನ್ ಅಧ್ಯಕ್ಷ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪರ್ವತದಲ್ಲಿ ಪತನ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ...