ದಾವಣಗೆರೆ | ವೀರಶೈವ ಸಮಾಜಕ್ಕೆ ಹೊರಗಿನವರಿಗಿಂತ ಒಳಗಿನ ಶತ್ರುಗಳೇ ಹೆಚ್ಚು: ಸಿರಿಗೆರೆ ತರಳಬಾಳು ಶ್ರೀಗಳು

Date:

Advertisements

ವೀರಶೈವ ಸಮಾಜವು ಇಂದು ಅಂಧಃಪತನದತ್ತ ಸಾಗಲು ವೀರಶೈವರೇ ಕಾರಣ ಎಂದು ಸಿರಿಗೆರೆ ತರಳಬಾಳು ಶ್ರೀಗಳು ನೋವಿನ ನುಡಿ ನುಡಿದರು.

ದಾವಣಗೆರೆ ನಗರದ ಎಂಬಿಎಂ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

“ವೀರಶೈವ ಸಮಾಜವದರು ಸ್ವಾರ್ಥವನ್ನು ಬದಿಗೆ ಸರಿಸಬೇಕು. ಎಲ್ಲರೂ ಒಂದೇ ಎಂಬ ಭಾವನೆ ಇಟ್ಟುಕೊಂಡು ಸಂಘಟನೆ ಮಾಡಬೇಕು. ನಮ್ಮವರೇ ಶತ್ರುಗಳಂತಾದರೆ, ಯಾವುದೇ ರೀತಿಯ ಸಹಾಯ ಮಾಡದಿದ್ದರೆ ಸಮಾಜ ಒಗ್ಗಟ್ಟಾಗುವುದಾದರೂ ಹೇಗೆ? ಅಭಿವೃದ್ಧಿ ಹೊಂದುವುದಾದರೂ ಹೇಗೆ” ಎಂದು ಪ್ರಶ್ನಿಸಿದರು.

Advertisements

“ಸಮುದಾಯದಲ್ಲಿ ಉಪಪಂಗಡಗಳಾಗಿ ಹೋದರೆ ಯಾವ ಸೌಲಭ್ಯವೂ ಸಿಗುವುದಿಲ್ಲ. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಗದು. ವೀರಶೈವ ಲಿಂಗಾಯತ ಸಮುದಾಯದವರಲ್ಲಿ ಸ್ವಾರ್ಥ ಕಡಿಮೆಯಾಗಬೇಕು. ಸಮಾಜದ ಸಂಘಟನೆಗಾಗಿ ಒಂದಾಗಬೇಕು” ಎಂದು ಶ್ರೀಗಳು ಕರೆ ನೀಡಿದರು.

“ಯಾವುದೇ ಉಪಪಂಗಡಗಳಾಗಲೀ, ವೀರಶೈವ ಲಿಂಗಾಯತರು ಒಂದೇ ಎಂಬ ಭಾವನೆ ಮೂಡುವಂತಾಗಬೇಕು. ತಮ್ಮಲ್ಲಿರುವ ಅಲ್ಪವಾದ ಒಳಭೇದವನ್ನು ತ್ಯಜಿಸಿ ಅನ್ಯೋನ್ಯ ಭಾವದಿಂದ ವರ್ತಿಸಿ ಸಮಾಜ ಒಂದಾಗಬೇಕು. ವೀರಶೈವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ನೂರು ಅಧಿವೇಶನದ ಹಿಂದೆ ಕರೆ ಕೊಡಲಾಗಿದೆ. ಆದರೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಕಾರ್ಯರೂಪಕ್ಕೆ ಬರುವ ಹಾಗೆ ಪ್ರಯತ್ನಿಸಿ ಸಮಾಜ ಸಂಘಟಿಸಿ, ಒಗ್ಗೂಡಿಸಲಿ” ಎಂದು ಸಲಹೆ ನೀಡಿದರು.

“ಇಲ್ಲಿ ದೀಪ ಹಚ್ಚಲಾಗಿದೆ. ಬೇರೆ ಕಡೆಗಳಲ್ಲಿ ದೀಪ ಕಾಣೆಯಾಗಿರಬಹುದು. ಸಮಾಜದ ಸಂಘಟನೆ ದೃಷ್ಟಿಯಿಂದ ದೀಪ ಹಚ್ಚುವ ಜವಾಬ್ದಾರಿ ಪ್ರತಿಯೊಬ್ಬರದ್ದು. ಅದರಲ್ಲಿಯೂ ಇಂದಿನ ಅಧಿವೇಶನದಲ್ಲಿ ಸನ್ಮಾನಿತರಾಗಿರುವವರ ಜವಾಬ್ದಾರಿ ಹೆಚ್ಚಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಮಾಡಿ” ಎಂದು ಸಿರಿಗೆರೆ ಶ್ರೀಗಳು ಕರೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಹಾಧಿವೇಶನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನಕ್ಕೆ ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು  ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ದಿವ್ಯ ಸಾನಿಧ್ಯವನ್ನು ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶೈಲ ಜಗದ್ಗುರುಗಳು, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಪಂಚಮಸಾಲಿ ಪೀಠದ ವಚನಾನಂದ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರಖಂಡ್ರೆ‌, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸೇರಿದಂತೆ ‌ಸಮಾಜ‌ದ ಬಾಂಧವರು ಹಾಗೂ‌ ಹಲವು ಮಠಾಧೀಶರು ಇದ್ದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನ; ಸಮಾಜದ ಕೆಲವರ ಆಕ್ಷೇಪ

ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಡಿ ಜಿ‌ ಶಾಂತನಗೌಡ, ಶಿವಗಂಗಾ ಬಸವರಾಜ್, ಬಿ ಪಿ‌ ಹರೀಶ್, ಬಿ ಕೆ ಸಂಗಮೇಶ್ವರ, ಅಥಣಿ ವೀರಣ್ಣ, ಮಾಜಿ ಸಚಿವ ಎಸ್ ಎ ರವೀಂದ್ರನಾಥ್, ಅಣಬೇರು ರಾಜಣ್ಣ, ಶಂಕರಬಿದರಿ, ಡಾ. ಎ ಎಚ್ ಶಿವಯೋಗಿ ಸ್ವಾಮಿ, ಎಸ್ ಎಸ್ ಗಣೇಶ್, ಸಚ್ಚಿದಾನಂದ ಮೂರ್ತಿ, ಬಿ ಸಿ ಉಮಾಪತಿ, ತಿಪ್ಪಣ್ಣ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಿಂದ ಆಗಮಿಸಿದ್ದ ಸಮಾಜದ ಬಾಂಧವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X