ದಾವಣಗೆರೆಯ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತೋದಯ ಹಸಿರು ಸೇನೆಯ ರಾಜ್ಯಾಧ್ಯಕ್ಷರ, ಜಿಲ್ಲೆಗಳ ಜಿಲ್ಲಾಧ್ಯಕ್ಷರ ಮತ್ತು ಮಹಿಳಾ ಜಿಲ್ಲಾಧ್ಯಕ್ಷರ, ರೈತ ಮುಖಂಡರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಆಗಸ್ಟ್ ತಿಂಗಳಲ್ಲಿ ಹಮ್ಮಿಕೊಂಡಿರುವ 1008 ಜೋಡಿಗಳ ಸಾಮೂಹಿಕ ಮದುವೆಯ ಪೂರ್ವಬಾವಿ ಸಭೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ನೇತೃತ್ವವಹಿಸಿ ಮಾತನಾಡಿದ ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯಾಧ್ಯಕ್ಷ ಚಂದ್ರಶೇಖರ ಬಿಟಿ “ದಾವಣಗೆರೆಯಲ್ಲಿ ನಡೆಯಲಿರುವ 18 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭಕ್ಕೆ ರಾಜ್ಯದ 224 ಕ್ಷೇತ್ರಗಳ ವಧುವರರು ಮತ್ತು ರೈತರು, ಜನತೆ ಆಗಮಿಸಲಿದ್ದು, ಎಲ್ಲರಿಗೂ ಅವರ ಸಂಸ್ಕೃತಿ ಸಂಪ್ರದಾಯದ ಅನುಸರಣೆಯಂತೆ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಈ ಸಾಮೂಹಿಕ ವಿವಾಹ ಸಮಾರಂಭಕ್ಕೆ ಕರ್ನಾಟಕದ ಮೂಲೆಮೂಲೆಗಳಿಂದ ಎಲ್ಲ ಜಾತಿ, ವರ್ಗದ, ಧರ್ಮದ ವಧು ವರರು ಆಗಮಿಸಲಿದ್ದಾರೆ. ಅವರಿಗೆ ರಿಜಿಸ್ಟರ್ ಮಾಡಿಸುವಂತದ್ದು, ಅಲ್ಲದೇ ಅವರವರ ಧಾರ್ಮಿಕ ವಿಧಿ ಪದ್ದತಿಯಂತೆ ವಿವಾಹ ಕಾರ್ಯಕ್ರಮ ನೆರವೇರಿಸಲು ಯೋಜಿಸಲಾಗಿದೆ. ಸರ್ಕಾರದ, ಉದ್ಯಮದಾರರ, ರಾಜಕಾರಣಿಗಳ, ಸಾಮಾಜಿಕ ಚಿಂತಕರ ಎಲ್ಲರ ಸಹಾಯದಿಂದ 1008 ಸಾಮೂಹಿಕ ವಿವಾಹ ನೆರವೇರಿಸಿ ದೇಶದ ಸಾಮಾಜಿಕ ಸಮಾನತೆಯನ್ನು ಸಾರುವ ಕೆಲಸ ರೈತೋದಯ ಹಸಿರು ಸೇನೆ ಮಾಡಲಿದೆ” ಎಂದು ತಿಳಿಸಿದರು.

“ರಾಜ್ಯದಲ್ಲಿ ಸಾಮಾಜಿಕ ಸಮಾನತೆ ಸಾರುವ ಸಾಮಾಜಿಕ ಕಳಕಳಿಯ ಬೃಹತ್ ಕಾರ್ಯಕ್ರಮ ಆಗುತ್ತಿರುವುದು ಇದೇ ಮೊದಲು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು ಪಕ್ಷಬೇಧ, ಜಾತಿಭೇದವಿಲ್ಲದೆ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ದಿಕ್ಸೂಚಿಗಳಾಗಿ ಕೆಲಸ ಮಾಡಲು ವಿನಂತಿಸುತ್ತೇವೆ. ಅಲ್ಲದೇ ಕಾರ್ಯಕ್ರಮದ ಮೂಲಕ ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ವಿಶೇಷ ಕಾಳಜಿ, ರೈತರಿಗೆ ಸಹಾಯ ನೀಡುವಂತೆ ಮನವಿ ನೀಡಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ| ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್ಓ ಸಹಿ ಸಂಗ್ರಹ ಅಭಿಯಾನ
ಪೂರ್ವಭಾವಿ ಸಭೆಯಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ನಾಗವೇಣಿ, ಜಿಲ್ಲಾಧ್ಯಕ್ಷ ಕೆ ಜಿ ರೇವಣಸಿದ್ದಪ್ಪ, ದಾವಣಗೆರೆ ಜಿಲ್ಲಾ ಸಂಚಾಲಕ ಸಿ ನಾಗರಾಜ್, ಬೆಂಗಳೂರು ನಗರ ಉಪಾಧ್ಯಕ್ಷೆ ಮಮತಾ, ಮಹಿಳಾ ರಾಜ್ಯ ಸಂಘಟನಾ ಕಾರ್ಯಾಧ್ಯಕ್ಷೆ ಸುವರ್ಣಮ್ಮ, ಚನ್ನಗಿರಿ ತಾಲೂಕು ಉಪಾಧ್ಯಕ್ಷ ಶಿವಮೂರ್ತಿ ನಾಯಕ್ ಜಿ, ಮಹಿಳಾ ಸಂಘಟನಾ ಕಾರ್ಯಾಧ್ಯಕ್ಷೆ ದಾವಣಗೆರೆ ಮಂಜಮ್ಮ, ದಾವಣಗೆರೆ ಜಿಲ್ಲಾ ಉಪಾಧ್ಯಕ್ಷೆ ಸುಜಾತಮ್ಮ, ವೀಣಾಮ್ಮ, ಸುಶೀಲಮ್ಮ, ರಾಜ್ಯ ವರಿಷ್ಠರಾದ ವೀರಭದ್ರಪ್ಪ, ಲಕ್ಷ್ಮಣ್, ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ್, ನಾಗಭೂಷಣ್, ಜಗಳೂರು ತಾಲೂಕು ಅಧ್ಯಕ್ಷ ದಯಾನಂದ, ಉಪಾಧ್ಯಕ್ಷ ಗಣೇಶ್, ನಿವೃತ್ತ ಮಾಜಿ ಸೈನಿಕರು ವನ್ನಳ್ಳಿ ವಾಸಪ್ಪ, ದಾವಣಗೆರೆ ಜಿಲ್ಲಾ ಉಪಾಧ್ಯಕ್ಷ ಹನುಮ ಗೌಡ್ರು ಸೇರಿದಂತೆ ಇತರ ಮುಖಂಡರು, ಸದಸ್ಯರು ಭಾಗವಹಿಸಿದ್ದರು.