ಸಮಾಜದಲ್ಲಿ ತುಳಿತಕ್ಕೆ, ಶೋಷಣೆಗೊಳಗಾದವರ ಸಮಸ್ಯೆಗಳಿಗೆ ಸ್ಪಂದಿಸಲು ಕಾರ್ಯಕರ್ತರು ಮುಂದಾಗಬೇಕೆಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ದಲಿತ ಹಕ್ಕುಗಳ ಆಂದೋಲನಕ್ಕೆ ಪೂರ್ವಭಾವಿಯಾಗಿ ನೆಡೆದ ಸಿದ್ಧತಾ ಸಭೆಯಲ್ಲಿ ಸಿಪಿಐ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಕರೆ ನೀಡಿದರು.
ದಾವಣಗೆರೆ ನಗರದ ಪಂಪಾಪತಿ ಭವನದಲ್ಲಿ ನಡೆದ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಜಿಲ್ಲಾ ಸಮ್ಮೇಳನದ ಸಿದ್ಧತಾ ಸಭೆ ಉದ್ದೇಶಿಸಿ ಮಾತನಾಡಿದ ಅವರು “ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲ್ಲದೆ ಹಿಂದುಳಿದ ವರ್ಗಗಳ ಮತ್ತು ಬಡವರ ಪರ ಧ್ವನಿಯೆತ್ತಿ ಅವರಿಗೆ ನ್ಯಾಯ ಕೊಡಿಸಲು ಮುಂದಾಗಬೇಕು” ಎಂದು ಸಲಹೆ ನೀಡಿದರು.

ಇದೇ ವೇಳೆ ಸಭೆಯಲ್ಲಿ ಚರ್ಚಿಸಿ 2025 ಜೂನ್ 8 ನೇ ಭಾನುವಾರದಂದು ಅಖಿಲ ಭಾರತ ದಲಿತ ಆಂದೋಲನದ ದಾವಣಗೆರೆ ಜಿಲ್ಲಾ ಸಮ್ಮೇಳನ ನಡೆಸಲು ದಿನಾಂಕ ನಿಗದಿ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಿತ್ತನೆ ಬೀಜ ದರ ಏರಿಕೆ, ರಸಗೊಬ್ಬರ ಅಭಾವ ಸೃಷ್ಟಿಗೆ ರೈತರ ಆತಂಕ; ಕ್ರಮಕ್ಕೆ ರೈತ ಸಂಘ ಆಗ್ರಹ.
ಸಭೆಯನ್ನು ಉದ್ದೇಶಿಸಿ ಎಐಡಿಆರ್ ಎಂ ದಲಿತ ಆಂದೋಲನದ ಮುಖಂಡರುಗಳಾದ ಸಿ ರಮೇಶ್ ದಾಸರ, ನರೇಗಾ ರಂಗನಾಥ್, ವಿ ಲಕ್ಷ್ಮಣ, ಎ ತಿಪ್ಪೇಶ್, ರಾಜು ಕೆರನಹಳ್ಳಿ, ನಾಗನೂರು ನಿಂಗಪ್ಪ, ಐರಣಿ ಚಂದ್ರು ,ಸರೋಜಾ, ನಾಗನೂರು ಅಂಜನಪ್ಪ, ಆವರಗೆರೆ ಮಂಜುನಾಥ, ಶೇಖರ ನಾಯಕ, ಮುಂತಾದವರು ಮಾತನಾಡಿದರು. ಜಿ ಎಲ್ಲಪ್ಪ, ಕೆ ಜಿ ಶಿವಮೂರ್ತಿ, ರಘು, ಮಲ್ಲೇಶ್, ಆನಂದಪ್ಪ ಕಾರಿಗನೂರು, ಹುನಸೆಕಟ್ಟೆ ಮಂಜುನಾಥ, ಸೇರಿದಂತೆ ಇತರರು ಭಾಗವಹಿಸಿದ್ದರು