ಧರ್ಮಸ್ಥಳ ಪ್ರಕರಣ | 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ಸಾಕ್ಷಿ ದೂರುದಾರ

Date:

Advertisements

ಧರ್ಮಸ್ಥಳ ಪ್ರದೇಶದ ಸುತ್ತಮುತ್ತಲಿನ ಹಲವು ಕಡೆಗಳಲ್ಲಿ ಅಕ್ರಮವಾಗಿ ಮೃತದೇಹ ಹೂತು ಹಾಕಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಶನಿವಾರ ಬಂಧಿಸಿದ್ದರು. ಆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಸದ್ಯ ಆತನನ್ನು ವಿಚಾರಣೆ ನಡೆಸಿದ ಬೆಳ್ತಂಗಡಿಯ ನ್ಯಾಯಾಲಯವು, ಹೆಚ್ಚಿನ ತನಿಖೆಗಾಗಿ 10 ದಿನಗಳ ಕಾಲ ಆತನನ್ನು ಎಸ್‌ಐಟಿ ವಶಕ್ಕೆ ನೀಡಿರುವುದಾಗಿ ವರದಿಯಾಗಿದೆ.

ನ್ಯಾಯಾಲಯಕ್ಕೆ ಹಾಜರುಪಡಿಸುವುದಕ್ಕೂ ಮುನ್ನ ದೂರುದಾರರನ್ನು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಎಸ್‌ಐಟಿ ಅಧಿಕಾರಿಗಳು, ವೈದ್ಯಕೀಯ ತಪಾಸಣೆ ನಡೆಸಿದ್ದರು.

Advertisements

ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಎಸ್‌ಐಟಿಯನ್ನು ಸರ್ಕಾರ ರಚಿಸಿದ್ದು ಸತ್ಯ ಹೊರತರಲು : ಗೃಹ ಸಚಿವ ಪರಮೇಶ್ವರ್

ಈವರೆಗೆ ಮಾಸ್ಕ್ ಧರಿಸಿಕೊಂಡಿದ್ದ ಸಾಕ್ಷಿ ದೂರುದಾರನ ಬಂಧನವಾಗುತ್ತಿದಂತೆಯೇ ಹೆಸರು, ಊರು, ವಿವರ ಸೇರಿದಂತೆ ಫೋಟೋ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ದೂರುದಾರ ಆಗಿದ್ದ ಆರೋಪಿ ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕಿನ ಚಿಕ್ಕಬೆಳ್ಳಿ ನಿವಾಸಿ. ಆತನ ಹೆಸರು ಸಿ.ಎನ್.ಚಿನ್ನಯ್ಯ ಯಾನೆ ಚೆನ್ನ ಎಂದು ಮಾಹಿತಿ ಸದ್ಯ ಹರಿದಾಡಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಅತಿಥಿ ಉಪನ್ಯಾಸಕರ ಕೊರತೆ: ತಿಂಗಳಾದರೂ ಆರಂಭವಾಗದ ತರಗತಿಗಳು 

"ರಾಜ್ಯದಲ್ಲಿ ಪದವಿ ಕಾಲೇಜಿನ ತರಗತಿಗಳು ಶುರುವಾಗಿ ತಿಂಗಳಾಗಿದೆ. ಎಲ್ಲ ಕಾಲೇಜಿನಲ್ಲೂ ಉಪನ್ಯಾಸಕರ...

ಚಿಕ್ಕಬಳ್ಳಾಪುರ | ಅಮ್ಮ ಎಜುಕೇಷನಲ್ ಅಂಡ್ ರೂರಲ್ ಡೆವಲಪ್‌ಮೆಂಟ್‌ ಟ್ರಸ್ಟ್‌ನ ವಾರ್ಷಿಕೋತ್ಸವ ಅಂಗವಾಗಿ ರಕ್ತದಾನ ಶಿಬಿರ

ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಆಗಸ್ಟ್ 22ರ ಶುಕ್ರವಾರದಂದು ಅಮ್ಮ ಎಜುಕೇಷನಲ್...

ತುಮಕೂರು | ಅಲೆಮಾರಿಗಳನ್ನು ಬೀದಿ ಪಾಲು ಮಾಡಿದ ಕಾಂಗ್ರೆಸ್ ಸರ್ಕಾರ : ಎ. ನರಸಿಂಹಮೂರ್ತಿ

ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಅಲೆಮಾರಿ ಜಾತಿ ಗುಂಪಿಗೆ ನೀಡಿದ್ದ ಶೇ....

ಉತ್ತರ ಕನ್ನಡ | ಕೇಣಿ ಬಂದರು ಅಹವಾಲು ಸ್ವೀಕಾರ ಸಭೆ: ಹಣದ ಆಮಿಷವೊಡ್ಡಿ ಬೆಂಬಲ ಪಡೆಯುತ್ತಿರುವ ಆರೋಪ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಉದ್ದೇಶಿತ ಖಾಸಗಿ ಬಂದರು...

Download Eedina App Android / iOS

X