ಹುಚ್ಚು ನಾಯಿಯೊಂದು ಕಚ್ಚಿ 30 ಮಂದಿಗೆ ಗಾಯಗೊಳಿಸಿರುವ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ನಡೆದಿದೆ. ಆ ಪೈಕಿ ಒಟ್ಟು 16 ಜನರು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂತ್ರಸ್ತರಿಗೆ ತೀವ್ರ ಗಾಯಗಳಾಗಿ ರಕ್ತಸ್ರಾವವಾಗಿದ್ದು, ಹುಚ್ಚು ಹಿಡಿದ ಸಾಕು ನಾಯಿ ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ದಾಳಿ ಮಾಡಿದ್ದು, 30ಕ್ಕೂ ಹೆಚ್ಚು ಜನರಿಗೆ ಕಚ್ಚಿದೆ. ಯುವಕರು, ಶಾಲಾ ಮಕ್ಕಳು, ಮಹಿಳೆಯರು, ಕಾರ್ಮಿಕರು ಮತ್ತು ವೃದ್ಧರು ನಾಯಿ ದಾಳಿಗೆ ಒಳಗಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿದ್ದೀರಾ? ಧಾರವಾಡ | ಒಳಮೀಸಲಾತಿ ವರ್ಗೀಕರಣ ಕೂಡಲೇ ಜಾರಿಗೆ ಪರಿಶಿಷ್ಟ ಜಾತಿ, ಪಂಗಡ ನೌಕರರ ಸಂಘದ ಒತ್ತಾಯ
ಈ ಕುರಿತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಅಧಿಕಾರಿಗಳ ನಿರ್ಲಕ್ಷ್ಷ ಆರೋಪದ ಮೇಲೆ, ಸ್ಥಳಿಯರು ಆಕ್ರೋಶಗೊಂಡಿದ್ದಾರೆ.