ಗೂಡ್ಸ್ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ವಾಹನದಲ್ಲಿದ್ದ ಬಾಯ್ಲರ್ ಗೆ ಹಾಕುವ ಬ್ರಾಕೆಟ್ ಸರಕು ಮತ್ತು ವಾಹನ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಧಾರವಾಡ ಬೈಪಾಸ್ ನಲ್ಲಿ ಸಂಭವಿಸಿದೆ.
ಈ ಕುರಿತು ಈದಿನ.ಕಾಮ್ ಗೆ ಮಾಹಿತಿ ನೀಡಿದ ಧಾರವಾಡ ಗ್ರಾಮೀಣ ಪೋಲಿಸ್ ಅಧಿಕಾರಿ, ಗಂಗಾವತಿಯಿಂದ ಗೋವಾ ಕಡೆಗೆ ಬಾಯ್ಲರ್ ಗೆ ಉಪಯೋಗಿಸುವ ಬ್ರಾಕೆಟ್ ಎಂಬ ಸರಕು ಸಾಗಿಸುತ್ತಿದ್ದ ಗೂಡ್ಸ್ ಲಾರಿಯ ಇಂಜಿನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿದ್ದು, ಇದನ್ನರಿತ ಕ್ಲೀನರ್ ಮತ್ತು ಚಾಲಕ ಮುಂಜಾಗೃತೆಗಾಗಿ ವಾಹನದಿಂದ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.
ಇದನ್ನು ಓದಿದ್ದೀರಾ? ಧಾರವಾಡ | ದ್ವಿಚಕ್ರ ವಾಹನ ಡಿವೈಡರ್ ಗೆ ಡಿಕ್ಕಿ: ಸ್ಥಳದಲ್ಲೇ ವ್ಯಕ್ತಿಯ ಸಾವು
ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣಾ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸಲು ಮುಂದಾಗಿದ್ದು ವಾಹನ ಸಂಪೂರ್ಣ ಸುಟ್ಟಿದೆ ಎಂದು ತಿಳಿದುಬಂದಿದೆ.