ಜನಜಾಗೃತಿ ಬೀದಿ ನಾಟಕಗಳ ಸಂಖ್ಯೆ ಹೆಚ್ಚಾಗಬೇಕು. ರಾಷ್ಟ್ರದ ಪ್ರಗತಿಯ ಪ್ರಥಮ ಹೆಜ್ಜೆ ಕುಟುಂಬ, ಈ ಕುಟುಂಬದಿಂದಲೇ ಪ್ರಗತಿದಾಯಕ ವಿಚಾರ ಬೆಳೆಯಬೇಕು ಎಂದು ಕಿಟಲ್ ಮಹಾವಿದ್ಯಾಲಯದ ಹಿಂದಿ ವಿಭಾಗದ ಪ್ರೊ. ಕವಿತಾ ಚಂದಗುಡಿ ಹೇಳಿದರು.
ಧಾರವಾಡದ ಅಂಜುಮನ್ ಅಧ್ಯಯನ ಕೇಂದ್ರದ ಹಿಂದಿ ವಿಭಾಗದ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ಮಾತನಾಡಿದರು. ಹಿಂದಿ ರಾಷ್ಟ್ರಭಾಷೆ ಆಗುವತ್ತ ಸಾಗುತ್ತಿದೆ. ಹಿಂದಿ ಭಾಷೆಯ ಅಧ್ಯಯನದಿಂದ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಗಳಿಸಬಹುದೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇಂಗಿಷ್ ವಿಭಾಗದ ಮುಖ್ಯಸ್ಥೆ ಡಾ. ಅಸ್ಮಾನಾಜ್ ಬಳ್ಳಾರಿ, ಪ್ರತಿಭೆ ಬೆಳೆಸಲು ಇದು ಉತ್ತಮ ಅವಕಾಶ. ಎಲ್ಲ ವಿದ್ಯಾರ್ಥಿಗಳು ಆಸಕ್ತಿಯಿಂದ ಇಂಥ ಕಾರ್ಯಕ್ರಮದಲ್ಲಿ ಇನ್ನು ಹೆಚ್ಚು ಹೆಚ್ಚಾಗಿ ಪಾಲಗೊಳ್ಳ ಬೇಕೆಂದು ಪ್ರೇರೇಪಿಸಿದರು. ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಇದು ಉತ್ತಮ ಮಾರ್ಗ ಎಂದರು.
ಐಕ್ಯೂಏಸಿ ಸಂಯೋಜಕರಾ ಡಾ. ಎನ್.ಬಿ. ನಲವತವಾಡ ʼಜೀವಜಲ ಉಳಿಸಿ ಮಿತವಾಗಿ ಬಳಸಿʼ ಎಂಬ ಸಂದೇಶವನ್ನು ಸಾರಿದರು.. ಮುಕಾಭಿನಯವನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರೊ. ಹಿನಾ ಕೌಸರ್ ವಂದನಾರ್ಪಣೆ ಕಾರ್ಯಕ್ರಮ ನೆರವೇರಿಸಿದರು. ಪ್ರೊ. ಶಮೀಮ ಕಲ್ಬುರ್ಗಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಫೈರೋಜಾ ಮೇಸ್ತ್ರಿ ಸ್ವಾಗತಿಸಿದರು. ಕು. ಸ್ಮಾಲೇಹಾ ಕಾರ್ಯಕ್ರಮ ನಿರೂಪಿಸಿದರು.