ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯು ನಗರದ ನೈರ್ಮಲ್ಯ ಮತ್ತು ಪರಿಸರವನ್ನು ರಕ್ಷಿಸುವ ಉದ್ದೇಶದಿಂದ ನಗರದ ಹಲವು ಭಾಗಗಳಲ್ಲಿ ರಸ್ತೆ ಬದಿ ಸಸಿಗಳನ್ನು ನೆಟ್ಟು ರಕ್ಷಣೆಗೆ ಕಬ್ಬಿಣದ ರಕ್ಷಾ ಕವಚ ಅಳವಡಿಸಿದೆ. ಆದರೆ, ಗಿಡಗಳು ಬೆಳೆಯುತ್ತಿದ್ದು ಅವುಗಳ ರಕ್ಷಣೆಗೆ ಈ ರಕ್ಷಾ ಕವಚವೇ ಅಡ್ಡಿಯಾಗಿದೆ.
ಆ ಸಸಿಗಳು ಇಂದು ಮರವಾಗಿ ಬೆಳೆಯುತ್ತಿದ್ದು ಅವುಗಳ ರಕ್ಷಣೆಗೆಂದು ಅಳವಡಿಸಿದ್ದ ಕಬ್ಬಿಣದ ಕವಚಗಳು ಮರಗಳ ಮಧ್ಯೆ ಸಿಕ್ಕಿಕೊಂಡು ಮರಗಳು ಬೆಳೆಯಲು ತೊಂದರೆ ಉಂಟಾಗುತ್ತಿದೆ. ಆದ್ದರಿಂದ ತಕ್ಷಣವೇ ಗಿಡಗಳ ರಕ್ಷಣೆಗೆ ಪಾಲಿಕೆ ಮುಂದಾಗಿ ಸೂಕ್ತ ಕ್ರಮವಹಿಸಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಧಾರವಾಡ ಜಿಲ್ಲಾ ಘಟಕ ಹಾಗೂ ಪರಿಸರ ಸ್ನೇಹಿ ಬಳಗದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಿಗೆ ಮನವಿಮಾಡಿವೆ.
ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ಮತ್ತು ಪರಿಸರ ಸ್ನೇಹಿ ಬಳಗ ದವರಾದ ಹನುಮಂತ ದಾಸರ, ಅರುಣ ಮೂಡಿ, ಬಸವರಾಜ ಅರಾಣಿ, ಮಂಜುನಾಥ ಹಾಸಟ್ಟಿ, ನಾಗರಾಜ ಹಾಗೂ ಹುಸೇನ್ ಕುಂದಗೋಳ ಭಾಗಿಯಾಗಿದ್ದರು.