ಅಂಬೇಡ್ಕರ್ ಸಂವಿಧಾನ ಶಿಲ್ಪಿ ಮಾತ್ರವಲ್ಲದೇ ಎಲ್ಲರ ಏಳಿಗೆಗಾಗಿ ದುಡಿದ ಮಹಾ ಮಾನವತಾವಾದಿ ಆಗಿದ್ದಾರೆ ಎಂದು ಧಾರವಾಡದ ನಗರದ ಅಂಜುಮನ್ ಪದವಿ ಮಹಾವಿದ್ಯಾಲಯದಲ್ಲಿ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಹಣಾ ದಿನಾಚರಣೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನ್ಯಾಯವಾದಿ ನಾಗರಾಜ್ ಕನಕಣಿ ಹೇಳಿದರು.
ಡಾ. ಬಿ ಆರ್ ಅಂಬೇಡ್ಕರ್ ಭಾರತದ ಸಂವಿಧಾನ ಶಿಲ್ಪಿ ಮಾತ್ರವಲ್ಲದೇ ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಸಮಾಜ ಸುಧಾರಕ, ಮಹಿಳೆ, ದಲಿತ, ಅಲ್ಪಸಂಖ್ಯಾತರ ಏಳಿಗೆಗಾಗಿ ಹಗಳಿರರು ದುಡಿದ ಮಹಾ ಮಾನವತವಾದಿ ಆಗಿದ್ದಾರೆ. ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿದ ಮತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ವ್ಯಕ್ತಿ ಆಗಿದ್ದಾರೆ ಎಂದರು.
ಅಂಬೇಡ್ಕರ್ ಅನುಭವಿಸಿದ ನೋವು, ಯಾತನೆಗಳು ಮುಂದಿನ ಜನಾಂಗಕ್ಕೆ ಸಿಗಬಾರದು ಅನ್ನುವ ದೃಷ್ಟಿಯಿಂದ ಅವರು ನಿರಂತರ ಅಧ್ಯಯನ ಮಾಡಿ, ಜಗತ್ತು ಮೆಚ್ಚುವ ಶ್ರೇಷ್ಠ ಸಂವಿಧಾನ ಕೊಡಿಗೆಯಾಗಿ ಕೊಟ್ಟಿದ್ದಾರೆ ಎಂದು ಡಾ. ಅಸ್ಮಾನಾಜ. ಬಳ್ಳಾರಿ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಈ ವರದಿ ಓದಿದ್ದೀರಾ? ವಿಜಯಪುರ | ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಧ್ವನಿಯೆತ್ತುವ ಕೆಲಸವಾಗಲಿ: ವಿರಾತಿಶಾನಂದ ಸ್ವಾಮೀಜಿ
ಕಾರ್ಯಕ್ರಮದಲ್ಲಿ ಡಾ. ಏನ್. ಬಿ. ನಾಲತವಾಡ ಸ್ವಾಗತಿಸಿದರು. ಡಾ. ನಾಗರಾಜ್ ಗುದಗನವರ್ ವಂದನಾರ್ಪಣೆ ಮಾಡಿದರು. ಡಾ. ಸೌಭಾಗ್ಯ ಜಾದವ್ ನಿರೂಪಣೆ ಮಾಡಿದರು. ಡಾ. ಐ ಏ ಮುಲ್ಲಾ ಮತ್ತು ಡಾ.ಸಯ್ಯದ್ ತಾಜುಣ್ಣಿಸಾ ಉಪಸ್ಥಿತರಿದ್ದರು.