ಬೀದರ್‌ | ಕೃಷಿ ಭೂಮಿ ಕಸಿದುಕೊಳ್ಳಲು ಮುಂದಾದ ಅರಣ್ಯ ಇಲಾಖೆ; ತಾಂಡಾ ಜನರು ಕಂಗಾಲು

Date:

ಹುಲಸೂರ ತಾಲೂಕಿನ ಮಿರಕಲ್ ತಾಂಡಾ ಜನರು ಸಾಗುವಳಿ ಮಾಡಿಕೊಂಡು ಬರುತ್ತಿರುವ ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ಮಾಡುತ್ತಿರುವುದನ್ನು ಕೂಡಲೇ ತಡೆ ಹಿಡಿಯಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.

- Advertisement -

ಈ ಕುರಿತು ಹುಲಸೂರ್‌ ಪಟ್ಟಣದ ತಹಸೀಲ್‌ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ರೈತರು ಭಾರತೀಯ ದಲಿತ ಪ್ಯಾಂಥರ್‌ ನೇತ್ರತ್ವದಲ್ಲಿ ತಹಸೀಲ್ದಾರ್‌ ಶಿವಾನಂದ ಮೇತ್ರೆ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ʻಬಳ್ಳಾರಿ ಚಲೋʼ ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಪಾದಯಾತ್ರೆ; ಲಾಭ...

ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್‌ ಬಿಜೆಪಿ ಪಕ್ಷವನ್ನು ಸಂಪೂರ್ಣವಾಗಿ ಮಣಿಸಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು. ಇತ್ತೀಚೆಗೆ ನಡೆದ ಸಂಡೂರು ವಿಧಾನಸಭಾ ಕ್ಷೇತ್ರದ...

ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸಮರ: ಕಕ್ಷೆಯಲ್ಲಿ ಆಯುಧಗಳನ್ನು ಇರಿಸಿದ್ದನ್ನು ಒಪ್ಪಿಕೊಂಡ...

ಉಪಗ್ರಹವನ್ನು ಸ್ಫೋಟಿಸದಿದ್ದರೂ ಬಾಹ್ಯಾಕಾಶದಲ್ಲಿ ಜಾಮರ್‌ಗಳು ಸಹ ಅತ್ಯಂತ ಮಾರಕವಾಗಿ ಪರಿಣಮಿಸಬಹುದು. ಇಂದಿನ ದಿನಗಳಲ್ಲಿ ಸಂಪರ್ಕ, ಹವಾಮಾನ ಮುನ್ಸೂಚನೆ, ವಿಮಾನ ಮತ್ತು ಹಡಗುಗಳ ಜಿಪಿಎಸ್ (GPS), ತುರ್ತು ಸೇವೆಗಳು ಮತ್ತು ಆರ್ಥಿಕ ಜಾಲಗಳು ಸಂಪೂರ್ಣವಾಗಿ...

ಗಣೇಶೋತ್ಸವ ಕೋಮು ಸೌಹಾರ್ದದ ಸೇತುವಾಗಲಿ; ಮನುಜ ಸಂಬಂಧದ ತಂತು...

ಗಣೇಶೋತ್ಸವ ಸಂಭ್ರಮ, ಭಕ್ತಿಯಿಂದ ಜನರು ಒಂದೆಡೆ ಸೇರಿ ಆಚರಿಸುವ ಹಬ್ಬ. ಆದರೆ ಇದೇ ಹಬ್ಬದ ಸಂದರ್ಭದಲ್ಲಿ ಕೆಲವೆಡೆ ಕೋಮು ಸಂಘರ್ಷಗಳು ನಡೆಯುತ್ತಿರುವುದು ಮಾತ್ರ ವಿಷಾದನೀಯ. ಭಾರತದಂತಹ ವಿವಿಧ ಧರ್ಮ, ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ...

ʼಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಸಿ.ಫಾರಂ ಮಂಜೂರಾತಿಯ ಕೃಷಿ ಭೂಮಿಯನ್ನು ಏಕಾಏಕಿಯಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಅನಧಿಕೃತವಾಗಿ ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಕೆಲವು ದಿನಗಳಿಂದ ನಮ್ಮ ಭೂಮಿಯಲ್ಲಿ ಬೆಳೆದ ಬೆಳೆ ನಾಶಪಡಿಸಿ ಬೋಲ್ಡೊಜರ್‌ದಿಂದ ಗುಂಡಿ ಅಗೆಯುತ್ತಿದ್ದಾರೆ. ಇದರಿಂದ ನಮಗೆ ಭೂಮಿ ಕಳೆದುಕೊಳ್ಳುವ ಆತಂಕ ಶುರುವಾಗಿದೆʼ ಎಂದು ಗೋಳು ತೋಡಿಕೊಂಡರು.

ʼನಮ್ಮ ಬದುಕಿಗೆ ಆಧಾರ ಆಗಿರುವ ಉಳುಮೆ ಭೂಮಿ ಕಸಿದುಕೊಂಡರೆ ನಾವು ಜೀವನ ಸಾಗಿಸಲು ಸಾಧ್ಯವಿಲ್ಲ. ಯಾವುದೇ ಮಾಹಿತಿ ನೀಡದೇ ಭೂಮಿ ಕಸಿದುಕೊಂಡರೆ ನಾವು ಬೀದಿಪಾಲಾಗುತ್ತೇವೆ. ಹೀಗಾಗಿ ಕೂಡಲೇ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಭೂಮಿ ಒತ್ತುವರಿ ಕೂಡಲೇ ತಡೆಹಿಡಿಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಮನರೇಗಾ ಮಾನವ ದಿನ 200ಕ್ಕೆ ಹೆಚ್ಚಿಸಲು ಗ್ರಾಕೂಸ್‌ ಆಗ್ರಹ

ಈ ಸಂದರ್ಭದಲ್ಲಿ ಭಾರತೀಯ ದಲಿತ ಪ್ಯಾಂಥರ್‌ ತಾಲೂಕಾಧ್ಯಕ್ಷ ಅಶೋಕ ಸಿಂಧೆ, ಅಶೋಕ ಹಾಲಹಳ್ಳಿ, ದೇವಾನಂದ ಟೋಳೆ, ಸತಿಷ ಗಾಯಕವಾಡ, ದತ್ತಾ ಮೋರೆ, ಲೋಕೇಶ ಮೋರೆ, ಅಶೋಕ ಕಾಂಬಳೆ, ಸುಭಾಷ ರಾಠೋಡ್‌ ಸೇರಿದಂತೆ ಮಿರಕಲ್‌ ತಾಂಡಾದ ರೈತರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʻಬಳ್ಳಾರಿ ಚಲೋʼ ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಪಾದಯಾತ್ರೆ; ಲಾಭ ಯಾರಿಗೆ?

ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್‌...

ಮೈಸೂರು ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕದಡುವ ಪ್ರಯತ್ನ: ಪ್ರತಾಪ್ ಸಿಂಹ ಗಡಿಪಾರಿಗೆ ದಸಂಸ ಆಗ್ರಹ

ಮೈಸೂರು ಜಿಲ್ಲೆಯಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತಹ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ...

ಹಾವೇರಿ | ಕುಮಧ್ವತಿ ನದಿಯ ನೀರು ಸಂಗ್ರಹಿಸಲು ರೈತರು ಪ್ರತಿಭಟನೆ

"ಕುಮಧ್ವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್‌ಗಳಿಗೆ ಬರಗಾಲದ ಹಿನ್ನೆಲೆಯಲ್ಲಿ...

ಉತ್ತರ ಕನ್ನಡ | ಎಸ್‌ಐಆರ್‌: 65,248 ನೋಟಿಸ್‌; 18,904 ಪ್ರಕರಣಗಳ ವಿಚಾರಣೆ ಪೂರ್ಣ

ಉತ್ತರ ಕನ್ನಡ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026ರ ಭಾಗವಾಗಿ...