ಧಾರವಾಡ | ಪೌರಕಾರ್ಮಿಕರಿಗೆ ‘ಭೀಮಾಶ್ರಯ’ ವಿಶ್ರಾಂತಿ ಕೊಠಡಿ ಆರಂಭ

Date:

Advertisements

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ಪೌರಕಾರ್ಮಿಕರಿಗಾಗಿ ‘ಭೀಮಾಶ್ರಯ’ ವಿಶ್ರಾಂತಿ ಕೊಠಡಿಗಳನ್ನು ಪ್ರಾರಂಭಿಸಿದ್ದು, ಪೌರಕಾರ್ಮಿಕರು ಕೆಲಸದ ಸಮಯದಲ್ಲಿ ಇದನ್ನು ಬಳಸಬಹುದು. ಈ ವಿಶ್ರಾಂತಿ ಕೊಠಡಿಗಳಲ್ಲಿ ಶೌಚಾಲಯಗಳು, ಕುಡಿಯುವ ನೀರು, ವಿಶ್ರಾಂತಿ ಕೇಂದ್ರಗಳು ಸೇರಿದಂತೆ ಇತರ ಸೌಲಭ್ಯಗಳನ್ನು ಅಳವಡಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೆಪ್ಟೆಂಬರ್ 23 ರಂದು ‘ಪೌರ ಕಾರ್ಮಿಕರ ದಿನಾಚರಣೆ’ ಆಚರಿಸಿದ ಸಂದರ್ಭದಲ್ಲಿ ವಿಶ್ರಾಂತಿ ಕೊಠಡಿಗಳಿಗೆ ಚಾಲನೆ ನೀಡಿದೆ.

ಪೌರ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿಗಳ ಕಲ್ಪನೆಯನ್ನು ಮೊದಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಪರಿಚಯಿಸಲಾಯಿತು. ಆ ಯೋಜನೆಯನ್ನು ಅನುಸರಿಸಿ, ಎಚ್‌ಡಿಎಂಸಿ ಈಗ ಇದನ್ನು ಪ್ರಾಯೋಗಿಕ ಯೋಜನೆಯಾಗಿ ಜಾರಿಗೆ ತಂದಿದೆ. ನಾಗರಿಕ ಸಂಸ್ಥೆಯ ವ್ಯಾಪ್ತಿಯಲ್ಲಿ 24 ಕಂಟೇನರ್ ಮಾದರಿಯ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಧಾರವಾಡ | ಅವಳಿ ನಗರಗಳಿಗೆ 5 ತಿಂಗಳಲ್ಲಿ 100 ಹೊಸ ಸಿಟಿ ಬಸ್‌ಗಳು ರಸ್ತೆಗಿಳಿಯಲಿವೆ: ಸಾರಿಗೆ ಸಚಿವ

ಪೌರಕಾರ್ಮಿಕರು ನೆಲದ ಮೇಲೆ ಅಥವಾ ಬಯಲಿನಲ್ಲಿ ಕುಳಿತು ಊಟ ಮಾಡುವುದು ನಗರಾದ್ಯಂತ ಸಾಮಾನ್ಯ ದೃಶ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ 10 ವರ್ಷಗಳಿಂದ ಶೌಚಾಲಯಕ್ಕೆ ಬೇಡಿಕೆ ಇಟ್ಟಿದ್ದರು. ಈಗ, ಕಾರ್ಮಿಕರು ಅಂತಿಮವಾಗಿ ಈ ವಿಶ್ರಾಂತಿ ಕೊಠಡಿಗಳಿಂದ ಅಪಾರ ಪ್ರಯೋಜನ ಪಡೆಯಬಹುದು ಎಂಬುದು ಸಾರ್ವಜನಿಕರ ಅಭಿಪ್ರವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಎಸ್‌ಐಟಿಯನ್ನು ಸರ್ಕಾರ ರಚಿಸಿದ್ದು ಸತ್ಯ ಹೊರತರಲು : ಗೃಹ ಸಚಿವ ಪರಮೇಶ್ವರ್

"ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂತಿದ್ದೇನೆ ಎಂದಿದ್ದ ವ್ಯಕ್ತಿಯನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ....

ಬೀದರ್‌ | ಈ ತಾಂಡಾಕ್ಕೆ ದಾರಿ ಯಾವುದಯ್ಯಾ?

ʼನಾವು ಹುಟ್ಟಿನಿಂದ ಅಲ್ಲ, ಈ ತಾಂಡಾ ಹುಟ್ಟಿನಿಂದಲೂ ರಸ್ತೆಯೇ ಕಂಡಿಲ್ಲ. ಸ್ವಲ್ಪ...

ಹಾಸನ | ಉತ್ತಮ ವಿದ್ಯಾಭ್ಯಾಸ ಇದ್ದರೆ ಆರ್ಥಿಕ ಸ್ವಾವಲಂಬನೆ ಸಾಧ್ಯ: ಡಿಸಿ ಲತಾ ಕುಮಾರಿ

ಪ್ರತಿಯೊಂದು ಮಗುವೂ ಉತ್ತಮ ವಿದ್ಯಾಭ್ಯಾಸ ಪಡೆದು ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ಮೂಲಕ...

ಬಾಗಲಕೋಟೆ | ಹಲವು ಬೇಡಿಕೆ ಈಡೇರಿಸುವಂತೆ ರೈತರ ಪ್ರತಿಭಟನೆ

ಬೆಳೆನಷ್ಟ ಪರಿಹಾರ ಒದಗಿಸುವುದು, ಬೆಳೆವಿಮೆ ಕಂತು ತುಂಬುವ ಅವಧಿಯನ್ನು ಮುಂದುವರೆಸಬೇಕು. ಬೆಳೆವಿಮೆ...

Download Eedina App Android / iOS

X