ಧಾರವಾಡ | ನಶಾ ಮುಕ್ತ ಹುಬ್ಬಳ್ಳಿ ಅಭಿಯಾನ: ವಿದ್ಯಾರ್ಥಿಗಳೊಂದಿಗೆ ಶೆಟ್ಟರ್ ಫೌಂಡೇಶನ್ ಸಂವಾದ

Date:

Advertisements

ಮಕ್ಕಳು ಓದಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರಲಿ ಎಂಂ ಬಯಕೆಯಿಂದ ಹೆತ್ತವರು ಕೂಲಿ‌ ಮಾಡಿ ಮಕ್ಕಳನ್ನು ಓದಿಸುತ್ತಾರೆ. ಆದರೆ ಯುವ ಸಮುದಾಯ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸದೆ ದುಶ್ಚಟಗಳಿಗೆ ಬಲಿ ಆಗುತ್ತಿರುವುದು ವಿಪರ್ಯಸವಾಗಿದೆ ಎಂದು ಹುಬ್ಬಳ್ಳಿಯ ಉಣಕಲ್’ನ ತರಳಬಾಳು ಶಿಕ್ಷಣ ಸಂಸ್ಥೆಯಲ್ಲಿ ನಡೆದ “ನಶಾ ಮುಕ್ತ ಹುಬ್ಬಳ್ಳಿ ಅಭಿಯಾನದ” ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ‌ ಎಸ್.ಎಸ್.ಫೌಂಡೇಶನ್’ನ ಅಧ್ಯಕ್ಷ‌ ಸಂಕಲ್ಪ ಶೆಟ್ಟರ್ ಹೇಳಿದರು.

ವಕೀಲೆ ಮಧು ಗೋಟುರೆ ಮಾತನಾಡಿ ಕಾನೂನು ಬಾಹಿರವಾಗಿ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ನಡೆದರೆ, ಅಂತಹ ಅಪರಾಧ ಕೃತ್ಯಗಳಿಗೆ ಶಿಕ್ಷೆಗಳು ತಪ್ಪುವುದಿಲ್ಲ. ತಪ್ಪು ಮಾಡುವ ಪ್ರತಿಯೊಬ್ಬರಿಗೂ ಕಾನೂನಿನ ಅರಿವಿರಬೇಕು. ಕಾನೂನಿಗೆ ಹೆದರಿಯಾದರೂ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟವನ್ನು‌ ನಿಲ್ಲಸಬೇಕು. ವಿದ್ಯಾರ್ಥಿಗಳು ದುಶ್ಚಟಗಳಿಂದ ಸದಾ ದೂರವಿರಬೇಕು ಎಂದು ತಿಳಿಸಿದರು.

ವೈದ್ಯ ಕಾಮೇಶ್ ಜಾಲಿಕಾರ್ ಮಾತನಾಡಿ, ದುಶ್ಚಟಗಳಿಂದ ಆರೋಗ್ಯದ ಮೇಲೆ ಅತ್ಯಂತ ದುಷ್ಪರಿಣಾಮಗಳು ಆಗುತ್ತಿವೆ. ಯುವಕರು ದುಶ್ಟಗಳ‌ ಕಡೆಗೆ ಹೆಚ್ಚಾಗಿ ಗಮನಹರಿಸುತ್ತಿರುವುದು ದುರಂತರ ಸಂಗತಿಯಾಗಿದೆ ಎಂದರು. ಆರಕ್ಷಕ ವಿ ಎಸ್ ರಾಯಪುರ್ ಮಾತನಾಡಿ, ಹುಬ್ಬಳ್ಳಿ ಧಾರವಾಡ ಕಮಿಷನರೇಟ್ ಮಾದಕ ವ್ಯಸನಗಳ ಸೇವನೆ ಹಾಗೂ ಮಾರಾಟ ಜಾಲಗಳ ವಿರುದ್ಧ ಸೂಕ್ತ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ. ಮಾದಕ ವಸ್ತುಗಳ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ ಎಂದರು.

Advertisements

ಈ ವರದಿ ಓದಿದ್ದೀರಾ? ಧಾರವಾಡ | ಕ್ಷುಲ್ಲಕ ಕಾರಣಕ್ಕೆ ರಸ್ತೆ ಮಧ್ಯೆಯೇ ಗುಂಡಿನ ಕಾಳಗ: ಬಿಜೆಪಿ ಮುಖಂಡನ ಪುತ್ರ ಭಾಗಿ?

ಈ ಸಂದರ್ಭದಲ್ಲಿ ಎಸ್ ಎಂ ಸೋಮನಗೌಡ್ರ, ಆರ್ ಎಸ್ ಹನ್ನಿ, ರಮೇಶ್ ಮಾದೇವಪ್ಪನವರ್, ಶಿವಾನಂದ ಹೆಬಸೂರ, ಬಸಣ್ಣ ಹೆಬ್ಬಳ್ಳಿ, ಶಿವಪ್ಪ ನಾಗೋಜಿ, ಮಲ್ಲಪ್ಪ ತಡಸದ, ಸೋಮು ಪಾಟೀಲ್, ಶಿವಣ್ಣ ಹಂಗರಕಿ, ನಿಂಗಪ್ಪ ಸವದತ್ತಿ, ಫೌಂಡೇಶನ್ ಸದಸ್ಯ ನಂದೀಶ್ ವಡ್ಡಟ್ಟಿ, ಮಹಾಂತೇಶ್ ತಾವರೆ, ವಿನೋದ್ ಬಂಕಾಪುರ್, ರುಸ್ತುಂ, ಮಹಾಂತೇಶ್ ನಾಶಿ, ಜಾವಿದ್ ಖಾನ್, ಸೋಮನಗೌಡ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X