ಧಾರವಾಡದ ನಿರ್ಮಲನಗರದ ನಿತ್ಯಸಹಾಯ ಮಾತೆಯ ದೇವಾಲಯದಲ್ಲಿ ಗುಡ್‌ಪ್ರೈಡೇ ನಿಮಿತ್ತ ಫಾದರ ಜೊಯ್ ಸನ್; ಎಸ್.ಜೆ. ವಿದ್ಯಾನಿಕೇತನ ನೇತೃತ್ವ ಮತ್ತು ಜೊಯ್ಸಕರ್ನಲ್ ಶಿಫಾ ಪೇರ್ನಾಂಡಿಸ್ ಸಹಕಾರದಲ್ಲಿ ಚರ್ಚಿನ ಯುವಕರ ಸಂಘದ ವತಿಯಿಂದ ಯೇಸುವಿನ ಮರಣದಂಡನೆಯ ಶಿಲುಬೆಯ ರೂಪಕ ಮಾಡಿದರು.
ಏ.18 ವಿಶ್ವದಾದ್ಯಂತ ಕ್ರೈಸ್ತ ಧರ್ಮದಲ್ಲಿ ಶುಭ ಶುಕ್ರವಾರ (ಗುಡ್ ಪ್ರೈಡೇ), ಯೇಸುವಿನ ಪಾಡು ಮರಣ ಮತ್ತು ಮರಣದಂಡನೆಯನ್ನು ಸ್ಮರೀಸುವ ದಿನವಾಗಿದೆ. ವಿಶ್ವದಲ್ಲಿ ಯೇಸುವಿನ, ತ್ಯಾಗ ಮರಣದ ಮೂಲಕ ಹೊಸ ಜೀವನ ಕಟ್ಟಿಕೊಳ್ಳಲು ಮಾದರಿ ಆಗಿದೆ ಎಂಬುದು ಈ ರೂಪಕದಲ್ಲಿ ತಿಳಿಸುವ ಉದ್ದೇಶವಾಗಿತ್ತು. ಸೈನಿಕರ ಪಾತ್ರದಲ್ಲಿ; ಸಾಮ್ಸನ್ ದಂಡಿನ, ಪ್ರವೀಣ ಬೊರಜಸ್ಸ, ಲೆಸ್ಟರ್ ಡಾಯಸ್ಸ ಇನ್ನಿತರ ಸದಸ್ಯರು ನಟಿಸಿದರು. ಯೇಸು ಪಾತ್ರದಲ್ಲಿ ರೂಡಾಲ್ಪ ಡಾಯಸ್ ಕಾಣಿಸಿಕೊಂಡರು. ಆಧ್ಯಾತ್ಮಿಕವಾಗಿ, ಇದು ಹೃದಯಸ್ಪರ್ಶಿ ಶಿಲುಬೆಯ ಹಾದಿ ಆಗಿತ್ತು ಎಂದು ಡಾ ಇಸಬೆಲಾ ಝೇವಿಯರ್ ತಿಳಿಸಿದ್ದಾರೆ.
ಚರ್ಚಿನ ಫಾದರ ಡೇನಿಸ್ ರೊಡ್ರಿಗಸ್, ಫಾದರ ಪ್ರತಾಪ ರೆಡ್ಡಿ, ಎಸ್.ಜೆ, ಫಾದರ ಜೊಯ್ ಸನ್ ಎಸ್ ಜೆ, ಫಾದರ ಪ್ರಾನ್ಸಿಸ್ ಅಲ್ಮೇಡಾ ಎಸ್ ಜೆ, ಚರ್ಚಿನ ಪಾಲನಾಸಭೆಯ ಸದಸ್ಯರಾದ ಬೊಸ್ಕೊ ಸಾಲೊಮನ್, ಡಾ. ಇಸಬೆಲಾ ಝೇವಿಯರ್, ವಿಲ್ಮ ಮಸ್ಕರಿನಸ್,ಎಲ್ವಿಸ್ ಪೇರ್ನಾಂಡಿಸ್, ವಿನ್ಸ್ಟನ್ ಡಿ ಕೊಸ್ಟಾ, ಸಿಸ್ಟರ ದಿವ್ಯಾ, ಸಿಸ್ಟರ ಸಾಲಿ, ರೋಜಿ ಕುಟಿನೋ, ವಲೇರಿಯನ್ ಭಾಗವಹಿಸಿದ್ದರು.