ಧಾರವಾಡ | ಎಲ್‌ಇಡಿ ಬೀದಿದೀಪ ಯೋಜನೆಗೆ ಎಚ್‌ಡಿಎಂಸಿ ಅನುಮೋದನೆ

Date:

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಬಹುನಿರೀಕ್ಷಿತ ಎಲ್‌ಇಡಿ ಬೀದಿದೀಪಗಳ ಯೋಜನೆಗೆ ಕೊನೆಗೂ ಅಧಿಕೃತ ಚಾಲನೆ ದೊರೆತಿದ್ದು, ನಗರಾಭಿವೃದ್ಧಿಯ ಕಡೆಗೆ ಒಂದು ಹೆಜ್ಚೆಯನ್ನಿಟ್ಟಿರುವ ಈ ಯೋಜನೆಯು ಆಗಸ್ಟ್‌ 18ರಂದು ಅನುಮೋದನೆಗೊಂಡಿದೆ.

- Advertisement -

ಬಹುನಿರೀಕ್ಷಿತ ಈ ಯೋಜನೆಯಡಿಯಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಈಗಾಗಲೇ ಅಸ್ಥಿತ್ವದಲ್ಲಿದ್ದ ಸಾಂಪ್ರದಾಯಿಕ ಬೀದಿದೀಪಗಳ ಬದಲಿಗೆ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತದೆ. ಹೆಚ್ಚುವರಿಯಾಗಿ ಈ ಯೋಜನೆಯು ಬೀದಿದೀಪಗಳ ನಿರ್ವಹಣೆ ಮತ್ತು ದಕ್ಷತೆಗೆ ಕೇಂದ್ರೀಕೃತ ನಿರ್ವಹಣೆ ಹಾಗೂ ಮೇಲ್ವಿಚಾರಣಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕ­-ಖಾಸಗಿ ಸಹಭಾಗಿತ್ವದ ಮಾದರಿಯೊಂದಿಗೆ ಏಳು ವರ್ಷಗಳ ರಿಯಾಯಿತಿ ಅವಧಿಯಲ್ಲಿ ಮಾದರಿ ರೂಪಿಸಲು ಯೋಜನೆ ತಯಾರಿಸಲಾಗಿದೆ. ಈ ಯೋಜನೆಗೆ ಒಟ್ಟು 93.6 ಕೋಟಿ ರೂಪಾಯಿ ಮಂಜೂರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಎಚ್‌ಡಿಎಂಸಿ ಆಯುಕ್ತರ ನೇತೃತ್ವದಲ್ಲಿ ನಡೆದ ವ್ಯಾಪಕ ಚರ್ಚೆ ಮತ್ತು ಸಮಾಲೋಚನೆಯ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಪುರಸಭೆ ಆಡಳಿತ ನಿರ್ದೇಶನಾಲಯದ ವತಿಯಿಂದ ಯೋಜನೆಗೆ ವ್ಯಾಪಕ ಬೆಂಬಲ ದೊರೆತಿದೆ. ಹಣಕಾಸಿನ ಸಂಪೂರ್ಣ ಮೌಲ್ಯಮಾಪನದ ಬಳಿಕ ತುಮಕೂರಿನ ಶ್ರೀ ಮಂಜು ಎಲೆಕ್ಟ್ರಿಕಲ್ಸ್‌ಗೆ ಗುತ್ತಿಗೆ ನೀಡಲಾಯಿತು. ಅನ್ವಯವಾಗುವ ಎಲ್ಲ ತೆರಿಗೆಗಳನ್ನು ಒಳಗೊಂಡಂತೆ 1.1 ಕೋಟಿ ರೂಪಾಯಿ ಮಾಸಿಕ ಕಂತನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಈ ಯೋಜನೆಯ ಮೂಲಕ ಬೀದಿದೀಪಗಳ ಇಂಧನಾ ವೆಚ್ಚ ಮತ್ತು ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ನಗರದ ಮೂಲ ಸೌಕರ್ಯಗಳಲ್ಲಿ ಮಹತ್ತರ ಬದಲಾವಣೆ ತರುವ ನಿರೀಕ್ಷೆಯಿದೆ. ಆಧುನಿಕ ತಂತ್ರಜ್ಞಾನದ ಎಲ್‌ಇಡಿ ಬೀದಿದೀಪಗಳು ಉತ್ತಮ ಗುಣಮಟ್ಟದೊಂದಿಗೆ ನಿವಾಸಿಗಳು ಮತ್ತು ಪ್ರಯಾಣಿಕರಿಗೆ ಸುರಕ್ಷಿತವಾಗಿರುತ್ತವೆ.

ಎಲ್‌ಇಡಿ ಅಳವಡಿಕೆ ಯೋಜನೆಯು ವಾಸ್ತವವಾಗಿ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್‌ ಸಿಟಿ ಅಡಿಯಲ್ಲಿ ಬರುವ ಯೋಜನೆಯಾಗಿದ್ದು, 58 ಸಾವಿರ ಬೀದಿದೀಪಗಳನ್ನು ಎಲ್‌ಇಡಿ ದೀಪಗಳನ್ನಾಗಿ ಪರಿವರ್ತಿಸುವ ಯೋಜನೆಯನ್ನು ರೂಪಿಸಿತ್ತು. 2018ರಿಂದ 2022ರವರೆಗೆ ಎಚ್‌ಡಿಎಸ್‌ಸಿಎಲ್‌ 7 ಬಾರಿ ಗುತ್ತಿಗೆ ಕರೆದಿತ್ತು. ಆದರೆ ಪಾಲುದಾರರು ಇಲ್ಲದಿರುವ ಕಾರಣಕ್ಕಾಗಿ ಈ ಯೋಜನೆಯನ್ನು ಎಚ್‌ಡಿಎಂಸಿಗೆ ವಹಿಸಲಾಗಿದೆ. ಮಹಾನಗರ ಪಾಲಿಕೆಯು 75 ಸಾವಿರ ಬೀದಿ ದೀಪಗಳನ್ನು ಪರಿವರ್ತಿಸುವ ಯೋಜನೆ ಹಾಕಿಕೊಂಡಿದೆ.

ಈ ಸುದ್ದಿ ಓದಿದ್ದೀರಾ? ಗ್ರಾಮೀಣ ಆರ್ಥಿಕತೆಯ ಶಕ್ತಿಯೇ ಕೃಷಿ ಕೂಲಿ ಕಾರ್ಮಿಕರು: ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸರ್ಕಾರ ಸ್ಪಂದಿಸುವುದೇ?

“ಈ ಯೋಜನೆಯನ್ನು ಇನ್ನೆರಡು ವಾರಗಳಲ್ಲೇ ಜಾರಿಗೊಳಿಸಲಿದ್ದು, ಗುತ್ತಿಗೆದಾರರೊಂದಿಗೆ ಎಲ್ಲ ಔಪಚಾರಿಕಗಳು ಶ್ರೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಈಗಾಗಲೇ ಎಚ್‌ಡಿಎಂಸಿಯು ತಿಂಗಳಿಗೆ 2 ಕೋಟಿ ರೂಪಾಯಿ ಇದ್ದ ಮಾಸಿಕ ಕಂತನ್ನು 1 ಕೋಟಿ ರೂಪಾಯಿಗಳಿಗೆ ಇಳಿಸಿದೆ. ಇದರ ಜತೆಗೆ ಬೀದಿ ದೀಪಗಳ ತಿಂಗಳ ನಿರ್ವಹಣಾ ವೆಚ್ಚವೂ ಕೂಡಾ ಉಳಿತಾಯವಾಗಲಿದೆ. ಈ ಯೋಜನೆಯು ಇಂಧನ ದಕ್ಷತೆ ಮತ್ತು ಸುಸ್ಥಿರತೆಯ ಬಹುದೊಡ್ಡ ಗುರಿಯನ್ನು ಹೊಂದಿದೆ” ಎಂದು ಎಚ್‌ಡಿಎಂಸಿ ಎಲೆಕ್ಟ್ರಿಕಲ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್‌ ಎಂ ಗಣಾಚಾರಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಅ.24ರಿಂದ ಬೃಹತ್ ಪಾದಯಾತ್ರೆ

ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ...

ಹಾವೇರಿ ವಿವಿಯಲ್ಲಿ ಆಯುಧಪೂಜೆ ಕಡ್ಡಾಯ; ಸಾಹಿತಿಗಳು, ಶಿಕ್ಷಣ ತಜ್ಞರು ಖಂಡನೆ

ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರು ಎಲ್ಲ ಅಧ್ಯಯನ ವಿಭಾಗಗಳ ಶಿಕ್ಷಕ/ ಶಿಕ್ಷಕೇತರ ಸಿಬ್ಬಂದಿ...

ಬಲೂನ್ ಮಾರುವ 9 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿ ಕಾರ್ತಿಕ್‌ಗೆ ಗಲ್ಲು ಶಿಕ್ಷೆ

ಕಳೆದ ವರ್ಷದ ದಸರಾ ಮಹೋತ್ಸವದ ಸಂದರ್ಭದಲ್ಲಿ ಕುಟುಂಬದೊಂದಿಗೆ ಟೆಂಟ್‌ನಲ್ಲಿ ಮಲಗಿದ್ದ 9...

ಬಾಗೇಪಲ್ಲಿ | ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಂತರ ಕಾಲೇಜು ವಿದ್ಯಾರ್ಥಿಗಳ ಗುಡ್ಡಗಾಡು ಓಟ ಸ್ಪರ್ಧೆ

ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಾರೀರಿಕ...