ಅಪರಿಚಿತ ವಾಹನವೊಂದು ಹಿಟ್ ಆ್ಯಂಡ್ ರನ್ ಮಾಡಿದ ಪರಿಣಾಮ ವ್ಯಕ್ತಿ ಓರ್ವನ ದೇಹವು ಎರಡು ತುಂಡಾಗಿರುವ ಘಟನೆ ಧಾರವಾಡದ ಕಾರವಾರ ರಸ್ತೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಸಚಿನ್ ಬೋಸ್ಲೆ ಎಂದು ಗುರುತಿಸಲಾಗಿದ್ದು, ನವಲೂರಿನ ನಿವಾಸಿ ಎಂದು ತಿಳಿದು ಬಂದಿದೆ. ಸಚಿನ್ ದ್ವಿಚಕ್ರ ವಾಹನ ಚಲಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಇದನ್ನು ಓದಿದ್ದೀರಾ? ಧಾರವಾಡ | ಇಪಿಎಸ್ ನಿವೃತ್ತರ ಪಿಂಚಣಿ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ
ಪೋಲಿಸರು ಪರಾರಿಯಾದ ವಾಹನದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Its not DWD it’s happened in Hubli Bypas near Tipu Nagar. He is one of my friend