ತಾಯಿಯ ಪ್ರೀತಿ, ಮಮತೆ, ಕರುಣೆ, ವಾತ್ಸಲ್ಯ ಅಪಾರ. ಇದನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕಿ ಡಾ.ಸುರೇಖಾದೇವಿ ಹೇಳಿದರು.
ಧಾರವಾಡ ನಗರದ ಅಂಜುಮನ್ ಕಲಾ, ವಿಜ್ಞಾನ-ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಹಯೋಗದಲ್ಲಿ ನಡೆದ ತಾಯಂದಿರ ದಿನಾಚರಣೆಯಲ್ಲಿ ಮಾತನಾಡಿದರು.
“ನಿಸ್ವಾರ್ಥ ಜೀವನ ನಡೆಸುವ ತಾಯಿ ಮಕ್ಕಳ ಏಳಿಗೆ ಬಯಸುತ್ತಾಳೆ. ಎಲ್ಲ ಗೌರವಕ್ಕೆ ಅರ್ಹಳಾದ ತಾಯಿ ಯೋಗ್ಯ ರೀತಿ ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳ ಮೇಲಿದೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ ಎನ್ ಎಂ ಮಕಾನದಾರ ಮಾತನಾಡಿ, “ತಾಯಿಯ ಋಣ ತೀರಿಸುವುದು ಅಸಾಧ್ಯ” ಎಂದರಲ್ಲದೇ, ತಾಯಿ ಬಗ್ಗೆ ಕಾವ್ಯ ಪ್ರಸ್ತುತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ: ಮಾಜಿ ಸಂಸದ ಇಕ್ಬಾಲ್ ಅಹಮದ್ ಸರಡಗಿ ನಿಧನ
ವೇದಿಕೆಯಲ್ಲಿ ಪ್ರಾಧ್ಯಾಪಕ ಡಾ ರಾಹುತ್ ಉನ್ನಿಸಾ, ಡಾ ಎ ಎಸ್ ಬಳ್ಳಾರಿ, ಡಾ ಎನ್ ಬಿ ನಾಲತವಾಡ, ಪತ್ರಿಕೋದ್ಯಮ ಮುಖ್ಯಸ್ಥ ಡಾ ಎಸ್ ಎಸ್ ಅದೋನಿ ಪ್ರೊ ಶಮಿಮ್ ಕಲಬುರ್ಗಿ ಸೇರಿದಂತೆ ಬಹುತೇಕ ವಿದ್ಯಾರ್ಥಿಗಳು ಇದ್ದರು.ಧಾರವಾಡ