ನಾವು ಚಿಕ್ಕವರಿದ್ದಾಗ ಶಾಲೆಗಳು ದೇವಸ್ಥಾನಗಳ ಪರಾಂಗಣ, ನೈಸರ್ಗಿಕ ವಾತಾವರಣ ಇರುವ ಗಿಡದ ಕೆಳಗೆ ಕುಳಿತು ಕಲಿಯಬೇಕಾದ ಪರಿಸ್ಥಿತಿ ಇತ್ತು. ಈಗ ಸರ್ಕಾರ ನಿಮಗೆ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದು ಅದರ ಸದುಪಯೋಗ ಮಾಡಿಕೊಳ್ಳಬೇಕು. ಮಾನವೀಯ ಗುಣ, ಸಮಯ ಪಾಲನೆ, ಶಿಸ್ತು ಹಾಗೂ ವಿದ್ಯಾರ್ಜನೆ ನೀಡಿದ ಗುರುಗಳಿಗೆ ಗೌರವ ನೀಡಿ ಯಶಸ್ವಿಯಾಗಿರಿ, ಮನೆಯಂತೆ ಶಾಲೆ ಸ್ವಚ್ಛವಾಗಿಡಿ ಎಂದು ರೋಟರಿ ಗವರ್ನರ್ ಶರದ್ ಪೈ ಹೇಳಿದರು.
ಅವರು ಧಾರವಾಡದ ಪೊಲೀಸ ಹೆಡ್ ಕ್ವಾಟ್ರಸ್‌ನಲ್ಲಿರುವ ಶಾಸಕರ ಸರ್ಕಾರಿ ಮಾದರಿ ಕೇಂದ್ರ ಪ್ರಾಥಮಿಕ ಶಾಲೆ ಪಿ.ಎಚ್. ಕ್ಯೂ ಶಾಲೆಗೆ, ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ ಆರ್. ಐ ವತಿಯಿಂದ ನೀಡಿದ ಒಂದು ಲಕ್ಷ ಹದಿನಾರು ಸಾವಿರ ರೂ. ಗಳ ಹಣದಲ್ಲಿ ಶಾಲೆಗೆ ಬಣ್ಣ ಹಚ್ಚುವ ಕೆಲಸ ಮಾಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ ಅಧ್ಯಕ್ಷ ಡಾ. ಭುವನೇಶ ಆರಾಧ್ಯ ಮಾತನಾಡಿ, ಶಾಲೆ ಅಂದವಾಗಿದ್ದರೆ ಮಕ್ಕಳು ಉತ್ಸಾಹದಿಂದ ಕಲಿಯಲು ಸಾಧ್ಯ. ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಅದ್ದರಿಂದ ಅತ್ಯುತ್ತಮ ರಾಷ್ಟ್ರ ನಿರ್ಮಿಸಲು ಸಾಧ್ಯ, ಒಳ್ಳೆಯ ಶಿಕ್ಷಣದಿಂದ ಉದ್ಯೋಗ ಪಡೆಯಬಹುದು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದ ಸೇವೆ ಮಾಡುವುದನ್ನು ರೂಢಿಸಿಕೊಳ್ಳಿ. ಪಾಲಕರನ್ನು ಗೌರವಿಸಿ. ಹಣ ಮುಖ್ಯವಲ್ಲ ಮಾನವೀಯ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಸತ್ಯಜಿತ್ ಮೂರೆ ಮಾತನಾಡಿ, ಮುಂಬರುವ ದಿನಗಳಲ್ಲಿ ನಿಮ್ಮ ಶಾಲೆಗೆ ವಾಲಿಬಾಲ್ ಮೈದಾನ ನಿರ್ಮಾಣ ಮಾಡಿ ಕೂಡುವ ಕೆಲಸಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.
ಶಿಕ್ಷಕ ಪ್ರಕಾಶ ಠಾಕೂರ ತಮ್ಮ ಅನಿಸಿಕೆ ಹಂಚಿಕೂಂಡು ಸಂತಸ ವ್ಯಕ್ತಪಡಿಸಿದರು. ಕಾರ್ಯದರ್ಶಿ ಡಾ. ವಿಶ್ವನಾಥ ಪಾಟೀಲ, ವಾಣಿ ಇರಕಲ್, ಪುಂಡಲೀಕ ಜಗದಾಳೆ, ಶಿವಾಜಿ ಸೂಯ೯ವಂಶಿ, ಪ್ರಾಂಶುಪಾಲರಾದ ವಾಯ್.ಆರ್. ಕುರೇರ್ ವೇದಿಕೆಯಲ್ಲಿದ್ದರು.
