ನಗರದ ಟಿಸಿಡಬ್ಲ್ಯೂ ಸಹಕಾರದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಗೆ ಎ.ಎಮ್.ಪಿ ವತಿಯಿಂದ ಪ್ರೋತ್ಸಾಹ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಂಜುಮನ್ ಮಹಾವಿದ್ಯಾಲಯದ ಡಾ. ಎನ್.ಬಿ. ನಾಲತವಾಡ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಗುರಿ ಸಾಧಿಸುವುದಕ್ಕೆ ಯಾವುದೇ ಭಾಷೆಯು ಅಡಚಣೆವಾಗುವುದಿಲ್ಲ. ವಿದ್ಯಾರ್ಥಿಗಳು ನಿರಂತರವಾಗಿ ಶ್ರಮ ಪಟ್ಟರೆ; ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಇನ್ನೋರ್ವ ಅತಿಥಿ ಮುಹಮ್ಮದ್ ಅಫ್ಜಲ್ ಸವಣೂರ ಪ್ರಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪುಸ್ತಕಗಳ ರೂಪದಲ್ಲಿ ವಿಶೇಷ ಬಹುಮಾನಗಳನ್ನು ನೀಡಿದರು. ಹಾಗೂ ಎ.ಎಮ್.ಪಿ ಅದ್ಯಯನದ ಮುಖ್ಯಸ್ಥೆ ಮುಸದ್ದೀಕಾ ಮಾತನಾಡಿ, ವಿದ್ಯಾರ್ಥಿಗಳು ಯಾವ ರೀತಿ ಪರೀಕ್ಷಾ ಸಿದ್ಧತೆಯನ್ನು ನಡೆಸಬೇಕು ಎಂದು ತಿಳಿಸಿದರು. ಇನ್ನೋರ್ವ ಅತಿಥಿ ಇಸ್ಮಾಯಿಲ್ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಶಾಲೆಯ ಮುಖ್ಯಸ್ಥೆ ಅಮೀನಭಾವಿ ಅವರು ಸ್ವಾಗತಿಸಿದರು. ನಾಲತವಾಡ ಅವರು ಕವಿತೆಗಳನ್ನು ಹಾಡಿದರು. ಮುಹಮ್ಮದ್ ಅಫ್ಜಲ್ ಸವಣೂರ ಗುರಿ ಮತ್ತು ಉದ್ದೇಶಗಳನ್ನು ವಿವರಿಸಿದರು. ನಾತ್ ಶರೀಫ್ ಇರಾಂ ಧಾರವಾಡ, ಸಬಿಹಾ ಲೋಕಪುರಿ, ಶಿಕ್ಷಕಿ ರೇಷಮ್ ವಾಲೆ, ಶಿಕ್ಷಕ ಕಲೀಮ್, ಪರ್ವೀನ್ ಮುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು. ಆಲಿಯಾ ಖಾನಜಾಡೆ ಮತ್ತು ಅಸಾಫಿಯಾ ಖಂಡುನಾಯಕ್ ಇದ್ದರು.