ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಸಮಸ್ಯೆಗಳ ಕಡೆಗೆ ಗಮನಹರಿಸದೆ ಬಿಜೆಪಿಯವರು ಒಂದು ವಾರ ಬರೀ ವಾಲ್ಮಿಕಿ ಹಗರಣ ವಿವಾರವಾಗಿ ಬರಿ ಗದ್ದಲ ಮಾಡಿದ್ದಾರೆ. ಜ್ವಲಂತ ಸಮಸ್ಯೆಗಳ ಬಗ್ಗೆ ಬಿಜೆಪಿಯವರು ಹೋರಾಟ ಮಾಡಲಿ ಎಂದು ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್.ಕೋನರೆಡ್ಡಿ ತಿಳಿಸಿದರು.
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, “ನಿರಂತರ ಹೋರಾಟದ ಕಿಚ್ಚನ್ನು ಹೊತ್ತಿಸಿದ ನಮ್ಮ ನಾಡಿನಲ್ಲಿ, ಕೇಂದ್ರ ಸರ್ಕಾರವು ಮಹದಾಯಿ ಯೋಜನೆ ಜಾರಿಮಾಡಲು ಕುಂಟು ನೆಪ ಹೇಳುತ್ತಿದೆ. ವನ್ಯಜೀವಿ ಮಂಡಳಿಯ ನೆಪ ಹೇಳುತ್ತ ಮಹದಾಯಿ ಯೋಜನೆಗೆ ಮೀನಮೇಷ ಮಾಡುತ್ತಿದೆ. ಮುಂದಿನ ಒಂದು ವರ್ಷದಲ್ಲಿ ಈ ಯೋಜನೆ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಈ ಹಿಂದೆ ದಿವಂಗತ ಅನಂತಕುಮಾರ ಅವರು ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರದಲ್ಲಿ ಒತ್ತಡ ಹಾಕುತ್ತಿದ್ದರು. ಈಗ ಆ ಜವಾಬ್ದಾರಿ ಪ್ರಹ್ಲಾದ ಜೋಶಿ ತೆಗೆದುಕೊಂಡು ಮಹದಾಯಿಗೆ ಕ್ಲಿಯರೆನ್ಸ್ ಕೊಡಿಸುವ ಕಾರ್ಯ ಮಾಡಬೇಕಿದೆ. ಕೇಂದ್ರ ಸರಕಾರ ಯೋಜನೆ ಜಾರಿ ಮಾಡಬೇಕು ಅಂತ ಮನಸ್ಸು ಮಾಡಿದ್ರೆ ಒಂದು ತಿಂಗಳಲ್ಲಿ ಕೆಲಸ ಮುಗಿಯುತ್ತದೆ. ಹಾಗೇಯೆ ರಾಜ್ಯದ ಎಲ್ಲ ಸಂಸದರಿಗೂ ಮನವಿ ಮಾಡಿಕೊಳ್ಳುತ್ತೇವೆ. ಈಗಲಾದರೂ ಯೋಜನೆ ಜಾರಿಮಾಡುವ ಕಾರ್ಯಕ್ಕೆ ಮುಂದಾಗಬೇಕೆಂದು ಹೇಳಿದರು.
ಇದನ್ನು ಓದಿದ್ದೀರಾ? ಶಿರೂರು ಗುಡ್ಡ ದುರಂತ | 8 ಮೀಟರ್ ಅಡಿಯಲ್ಲಿ ಲೋಹದ ಸಾಧನ ಪತ್ತೆ; ಲಾರಿಯಾಗಿರುವ ಶಂಕೆ?
ಮಳೆ ಬಹಳ ಆಗ್ತಾ ಇದೆ, ನಮಗೆ ಏನು ಪರಿಹಾರ ಕೊಡಬೇಕು ಎಂಬುದರ ಬಗ್ಗೆ ಸಲಹೆ ಕೊಡಬೇಕು ಎಂದ ಶಾಸಕ ಕೋನರೆಡ್ಡಿ, ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಮಹದಾಯಿ ಯೋಜನೆ ಜಾರಿಮಾಡಲು ಒಂದು ತಿಂಗಳು ಸಾಕಾಗುತ್ತದೆ. ಈ ಮುಂದಿನ ಒಂದು ವರ್ಷದಲ್ಲಿ ಮಹದಾಯಿ ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.