ಧಾರವಾಡದ ಲಕಮನಹಳ್ಳಿಯ ಹತ್ತಿರ ಹಾಗೂ ಹಳೇಹುಬ್ಬಳ್ಳಿಯ ಕೌದಿಮಠ ಹತ್ತಿರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತೊಡಗಿದ್ದ ಗಾಂಜಾ ಮಾರಾಟಗಾರರ (ಪೆಡ್ಲರ್) ಮೇಲೆ ದಾಳಿ ನಡೆಸಿ ಧಾರವಾಡದ ಲಕಮನಹಳ್ಳಿಯಲ್ಲಿ 05 ಜನ ಆರೋಪಿಗಳನ್ನು, ಹಳೇಹುಬ್ಬಳ್ಳಿಯ ಕೌದಿಮಠದ ಹತ್ತಿರ 05 ಜನ ಆರೋಪಿಗಳನ್ನು ಹುಬ್ಬಳ್ಳಿ ಧಾರವಾಡ ನಗರ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ಕಲೆಹಾಕಿದ ಸಿಸಿಬಿ ಅಧಿಕಾರಿ ಹಾಗೂ ಸಿಬ್ಬಂದಿ ಜನರನ್ನು ಒಳಗೊಂಡ ತಂಡವು, ಹುಬ್ಬಳ್ಳಿ-ಧಾರವಾಡ ನಗರವನ್ನು ಡ್ರಗ್ಸ್ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ಮಾದಕ ವಸ್ತು (ಡ್ರಗ್ಸ್) ಮಾರಾಟಗಾರರು ಮತ್ತು ಸೇವನೆ ಮಾಡುವವರ ವಿರುದ್ಧ ನಿಗಾ ವಹಿಸಿ, 15,000/- ರೂ ಮೌಲ್ಯದ 760 ಗ್ರಾಂ ಗಾಂಜಾ, 4 ಮೊಬೈಲ್‌ಗಳು, 2 ಬೈಕ್‌ಗಳು ಹಾಗೂ 20,750/- ರೂ ಮೌಲ್ಯದ 415 ಗ್ರಾಂ ಗಾಂಜಾ, 1700 ರೂ ನಗದು, 5 ಮೊಬೈಲ್‌ಗಳು, ಹೀಗೆ ಒಟ್ಟು ಎರಡು ಪ್ರಕರಣಗಳಲ್ಲಿ ಒಟ್ಟು 10 ಜನ ಆರೋಪಿತರನ್ನು ಬಂಧಿಸಿದ್ದು, ಒಟ್ಟು 68,450/- ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿದ್ಯಾಗಿರಿ ಪೊಲೀಸ್ ರಾಣೆ ಹಾಗೂ ಕಸಬಾಪೇಟೆ ಪೊಲೀಸ್ ಠಾಣೆ ಸೇರಿ ಮೊಹಮ್ಮದ ಇಸಾಕ್, ಶ್ರೀಕಾಂತ ಅವರಂಗೆ, ಹನುಮಂತ ಹಾವೇರಿ, ಅಭಿಷೇಕ ದಾಸರ, ಆಸೀಫ್ ಹುಡೇದ, ಈರಣ್ಣ ಹಿರೇಮಠ, ಮಂಜುನಾಥ ಡಮರಿಕೊಪ್ಪ, ವಿಶಾಲ ನರಗುಂದಿ, ಅನಿಲ ನೆಲವಡಿ, ವಿಜಯ ಶೆಟ್ಟರ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿಗಳೆಂದು ಗುರುತಿಸಲಾಗಿದೆ.
ಈ ಬಗ್ಗೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ಮತ್ತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ಇನ್ನು ಈ ಬಗ್ಗೆ ಸಿಸಿಬಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.