ನಾನು ಮೂವತ್ತೇಳು ವರ್ಷ ಐದು ತಿಂಗಳು ಪ್ರಾಧ್ಯಾಪಕನಾಗಿ, ಪ್ರಾಚಾರ್ಯನಾಗಿ ಸೇವೆ ಸಲ್ಲಿಸಿ ಇವತ್ತು ವಯೋ ನಿವೃತ್ತಿಯಾಗುತ್ತಿದ್ದೇನೆ. ಇಲ್ಲಿಯವರೆಗೆ ಸಲ್ಲಿಸಿದ ಸೇವೆ ನನಗೆ ಅತಿವ ತೃಪ್ತಿ ತಂದಿದೆ ಎಂದು ಧಾರವಾಡದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೊತ್ತರ ಅಧ್ಯಯನದ ಪ್ರಾಚಾರ್ಯ ಡಾ.ಎನ್.ಎಮ್.ಮಕಾಂದಾರ ತಮ್ಮ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನನ್ನನ್ನು ನಂಬಿ ಅಂಜುಮನ್ ಸಂಸ್ಥೆ ಸೇವೆ ಸಲ್ಲಿಸಲು ಒಂದು ಅವಕಾಶ ಮಾಡಿಕೊಟ್ಟಿತ್ತು. ಆ ಅವಕಾಶವನ್ನು ಪ್ರಾಮಾಣಿಕವಾಗಿ ಶ್ರದ್ದೆಯಿಂದ ನಿರ್ವಹಿಸಿದ್ದೇನೆ ಎಂಬ ತೃಪ್ತಿ ನನ್ನಲ್ಲಿದೆ. ನಾನು ಪ್ರಾಚಾರ್ಯನಾಗಿ ಸಾಕಷ್ಟು ಸಂಸ್ಥೆಗೆ ಅಭಿವೃದ್ದಿ ಪರವಾದ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟ ಅಂಜುಮನ್ ಸಂಸ್ಥೆಗೆ ಮತ್ತು ಆಡಳಿತ ಮಂಡಳಿಗೆ ಯಾವಾಗಲೂ ಚಿರೃಣಿಯಾಗಿದ್ದೇನೆ. ಏಕೆಂದರೆ ಇವತ್ತು ನಾನು ಡಾ. ಎನ್.ಎಮ್.ಮಕಾಂದಾರ ಎಂದು ಗುರುತಿಸಿಕೊಳ್ಳುವದಕ್ಕೆ ಅಂಜುಮನ್ ಸಂಸ್ಥೆಯೇ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಧ್ಯಾಪಕ ವೃಂದ, ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪ್ರಾಚಾರ್ಯ ಡಾ. ಎನ್.ಎಮ್.ಮಕಾಂದಾರರನ್ನು ವಾಹನದಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಬರಮಾಡಿಕೊಂಡರು. ಪ್ರಾಧ್ಯಾಪಕರು. ಸ್ನೇಹಿತರು, ವಿದ್ಯಾರ್ಥಿಗಳು, ಆಡಳಿತ ಮಂಡಳಿಯ ಸದಸ್ಯರು ಅವರು ಸಲ್ಲಿಸಿದ ಸೇವೆ ಕುರಿತು ಹೊಗಳಿದರು.

ಕಾರ್ಯಕ್ರಮದಲ್ಲಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಅಲ್ಬಾಜ್ ಬಶೀರ ಅಹಮ್ಮದ ಜಾಗೀರದಾರ ಅಧ್ಯಕ್ಷತೆಯ ನುಡಿಯನ್ನು ಆಡುತ್ತ ಡಾ.ಮಕಾಂದಾರ ಅವರ ಸೇವೆಯನ್ನು ಸಂಸ್ಥೆಯು ಎಂದು ಮರೆಯಲಿಕ್ಕೆ ಸಾದ್ಯವಿಲ್ಲ. ಅದೇ ರೀತಿ ಮುಂದಿನ ಪ್ರಾಚಾರ್ಯ ಡಾ.ಆಯ್.ಎ.ಮುಲ್ಲಾ ಮುಂದುವರೆಸಿಕೊಂಡು ಹೋಗಬೇಕು. ಸಂಸ್ಥೆಯು ಅವರ ಹಾಗೆ ನಿಮಗೂ ಕೂಡ ಒಳ್ಳೆಯ ಕಾರ್ಯಕ್ಕೆ ಬೆಂಬಲವಾಗಿರುತ್ತದೆ ಎಂದರು.
ಅಲ್ಬಾಜ್ ಸಯ್ಯದ ಖಾದೀರ ಸರಗೀರೊ, ಜನಾಬ. ಮೊಹಮ್ಮದ ಶಫೀ ಕಳ್ಳಿಮನಿ, ಅಲ್ಟಾಜ್ ಮೊಹಮ್ಮದ ರಫೀಕ್ ಶಿರಹಟ್ಟಿ, ಜನಾಬ.ಇನ್ಸಾಲ್ ಜಮಾದಾರ, ಆಯ್.ಎಮ್.ಜವಳಿ, ಡಾ. ಆಯ್.ಎ.ಮುಲ್ಲಾ, ಡಾ.ನಾಗರಾಜ ಗುದಗನವರ, ಡಾ. ಎ.ಎಸ್.ಬಳ್ಳಾರಿ, ಡಾ.ಎನ್.ಬಿ.ನಲತವಾಡ, ಡಾ.ಮೇಟಿ ರುದ್ರೇಶ ಈ ಕಾರ್ಯಮದಲ್ಲಿ ಬಾಗವಹಿಸಿದ್ದರು.
ಈ ವರದಿ ಓದಿದ್ದೀರಾ? ಧಾರವಾಡ | ಬೈಕ್ ಸವಾರನಿಗೆ ಖಾರದಪುಡಿ ಎರಚಿ 1 ಲಕ್ಷ 80 ಸಾವಿರ ಹಣ ದೋಚಿದ ದುಷ್ಕರ್ಮಿಗಳು
ಮುಬಾರಕ್ ಮುಲ್ಲಾ ಖುರಾನ್ ಪಟಿಸಿದರು. ಡಾ.ಎಸ್.ಕೆ.ಜಾಧವ್ ಶ್ಲೋಕ ಹೇಳಿದರು. ಡಾ.ಆಯ್.ಎ.ಮುಲ್ಲಾ ಸ್ವಾಗತಿಸಿದರು. ಡಾ.ಗೌರಿ ಗೌರಿಕೇರೆಮತ ಪರಿಚಯಿಸಿದರು. ಡಾ.ಸಯ್ಯದ ತಾಜುನ್ನಿಸಾ ವಂದಿಸಿದರು. ಡಾ.ಎನ್.ಬಿ.ನಲತವಾಡ ಕಾರ್ಯಕ್ರವನ್ನು ನಿರ್ವಹಿಸಿದರು.