ಹುಬ್ಬಳ್ಳಿ ನಗರದ ಕಲಘಟಗಿಯ ಕಬ್ಬಿನ ಗದ್ದಯೊಂದರಲ್ಲಿ ನವಜಾತ ಶಿಶು ಪತ್ತೆಯಾಗಿದ್ದು, ಮಗುವನ್ನು ಧಾರವಾಡದ ಜಿಲ್ಲಾ ಶಿಶುಪಾಲನಾ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ.
“ಕಲಘಟಗಿಯ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿರುವ ನವಜಾತ ಶಿಶುವನ್ನು ಇರುವೆಗಳು ಕಚ್ಚಿದ್ದು, ಮಗು ಅಳುತ್ತಿರುವುದು ಕೇಳಿಬಂದ ಹಿನ್ನೆಲೆಯಲ್ಲಿ ಪಕ್ಕದ ಹೊಲದ ಮಾಲೀಕರು ಮಗುವನ್ನು ನೋಡಿದ್ದಾರೆ. ಬಳಿಕ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಆ ಮಗುವನ್ನು ಜಿಲ್ಲಾ ಶಿಶುಪಾಲನಾ ಕೇಂದ್ರಕ್ಕೆ ಕಳುಹಿಸಲಾಯಿತು. ಮಗು ಸುಮಾರು 3 ಕೆಜಿ ತೂಕವಿತ್ತು” ಎಂದು ಕಲಘಟಗಿ ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 24 ವರ್ಷದ ಶಿಕ್ಷಕಿಯನ್ನು ಪ್ರೀತಿಸಿದ 17 ವರ್ಷದ ಬಾಲಕ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ನವಜಾತ ಶಿಶು ಪತ್ತೆಯಾಗಿರುವ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.