ಎನ್ಎಸ್ಎಸ್ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುತ್ತದೆ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹುಬ್ಬಳ್ಳಿ ತಾಲೂಕು ಶರೇವಾಡ ಗ್ರಾಮದಲ್ಲಿ ಎಸ್‌ಜೆಎಮ್‌ವಿಎಸ್ ಮಹಿಳಾ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರವೊಂದರಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಸಿ ನೆಡುವ ಮೂಲಕ ‘ಆರೋಗ್ಯವೇ ಭಾಗ್ಯ’ ವಿಷಯದ ಕುರಿತು ಪ್ರೊ. ಎಸ್ ಎಚ್ ಹಿರೇಗೌಡರ ಮಾತನಾಡಿ, ಸಮತೋಲನ ಕಾಯ್ದುಕೊಳ್ಳದಿದ್ದಲ್ಲಿ ಆರೋಗ್ಯ ಕೆಡುತ್ತದೆ. ಉತ್ತಮ ಆರೋಗ್ಯವಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಎಲ್ಲರೂ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಒಳ್ಳೆಯ ಆಲೋಚನೆ ಹೊಂದಬೇಕು. ಮೊಬೈಲನ್ನು ಮಿತವಾಗಿ ಬಳಸಬೇಕು ಎಂದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ಡಾ. ಎಚ್ ವಿ ಬೆಳಗಲಿ, ಸಿದ್ದಪ್ಪ ಹನ್ನಿ, ವಿರೂಪಾಕ್ಷಪ್ಪ ಯಡವನ್ನವರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಡಾ. ಶಿವಲೀಲಾ ವೈಜಿನಾಥ ಸ್ವಾಗತಿಸಿದರು. ಡಾ. ತಾಯಣ್ಣ ಎಚ್, ಮಮ್ತಾಜ್ ಬೇಗಂ ತಹಸೀಲ್ದಾರ್ ವೇದಿಕೆ ಮೇಲಿದ್ದರು. ಸೌಂದರ್ಯ ನೂಲ್ವಿ ನಿರೂಪಿಸಿದರು. ಎನ್ಎಸ್ಎಸ್ ಸ್ವಯಂ ಸೇವಕಿಯರು ಎನ್ಎಸ್ಎಸ್ ಗೀತೆ ಪ್ರಸ್ತುತ ಪಡಿಸಿದರು. ಅನಿತಾ ಹಂಡೆನವರ್ ವಂದಿಸಿದರು.