ಪರಿಶ್ರಮವಿಲ್ಲದೇ ಸಾಧನೆ ಮಾಡಲು ಸಾಧ್ಯವಿಲ್ಲ. ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ ಜೀವನದಲ್ಲಿ ಅಡೆತಡೆಗಳನ್ನು ಎದುರಿಸಿದಾಗ ಮಾತ್ರ ಜಯಶಾಲಿ ಆಗುತ್ತೇವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ನಗರದ ಅಂಜುಮನ ಪದವಿ ಮಹಾವಿದ್ಯಾಲಯದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮಾಡಿ ಮಾತನಾಡಿದರು.
ತಂದೆ-ತಾಯಿ, ಸಂಸ್ಥೆಗೆ ಮತ್ತು ಸಮಾಜಕ್ಕೆ ನಾವು ಋಣಿಯಾಗಿರಬೇಕು ಎಂದು ಹೇಳುತ್ತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಕೆ ಹಾಗೂ ಅವರ ವಿದ್ಯಾಭ್ಯಾಸದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಭೂಮಿಯ ಮೇಲೆ ಎಲ್ಲರೂ ಸಮಾನರು. ಅಧ್ಯಯನಕ್ಕೆ ಯಾವ ಕುಂಟುನೆಪ ಹೇಳಬೇಡಿ. ನಿಮ್ಮ ಹಿಂದೆ ಅಂಜುಮನ್ ಇಸ್ಲಾಂ ಸಂಸ್ಥೆ ಇದೆ. ಎಲ್ಲ ವಿದ್ಯಾರ್ಥಿಗಳು ಚೆನ್ನಾಗಿ ಅಧ್ಯಯನ ಮಾಡಿ ಸಂಸ್ಥೆಗೆ ಮತ್ತು ಸಮಾಜಕ್ಕೆ ಕೀರ್ತಿ ತರಬೇಕು ಎಂದು ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹೇಳಿದರು.
ಕು. ನಾಜನಿನ ತಮಟಗಾರ ಸಾಧನೆ ಗುರಿತಿಸಿ, ಮಹಾವಿದ್ಯಾಲಯದಿಂದ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಡಾ.ಎನ್. ಎಮ್. ಮಕಾನದಾರ ಸ್ವಾಗತಿಸಿದರು. ಡಾ. ರುದ್ರೇಶ ಮೇಟಿ ವಂದನಾರ್ಪಣೆ ಮಾಡಿದರು. ಪ್ರೋ.ಆಸ್ಕಾ ನದಾಫ ಮತ್ತು ಡಾ. ಸೈಯದ ತಾಜುನಿಸ್ಸಾ ನಿರೂಪಿಸಿದರು.
ಈ ವರದಿ ಓದಿದ್ದೀರಾ? ವಿಜಯಪುರ | ವಿಶೇಷಚೇತನರು ಕೀಳರಿಮೆ ತೊರೆದು ಮುಖ್ಯವಾಹಿನಿಗೆ ಬರಬೇಕು: ನ್ಯಾ. ಹರೀಶ್ ಜಾಧವ್
ಕಾರ್ಯಕ್ರಮದಲ್ಲಿ ಅಂಜುಮನ ಇಸ್ಲಾಂ ಸಂಸ್ಥೆ ಪಧಾದಿಕಾರಿಗಳಾದ ಬಶೀರ ಆಹ್ವದ ಜಾಗೀರದಾರ, ಡಾ. ಸರಗಿರೊ, ಮಹಮ್ಮದ ರಫೀಕ ಶಿರಹಟ್ಟಿ, ಕಲೀಲ್ ಅಹ್ಮದ ದಾಸನಕೊಪ್ಪ, ಕೈರುದ್ದಿನ ಶೇಖ, ರಿಯಾಜಅಹ್ಮದ ನನ್ನೆಸಾಬನವರ, ಡಾ.ಎನ್. ಬಿ.ನಾಲತವಾಡ ಉಪಸ್ಥಿತರಿದ್ದರು.