ಕಾರುಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಧಾರವಾಡದ ಮಾಡರ್ನ್ ಸಭಾಂಗಣದ ಹತ್ತಿರ ನಡೆದಿದೆ.
ನಗರದ ಮಾಡರ್ನ್ ಹಾಲ್ ಎದುರಿಗಿರುವ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಕಾರುಗಳೆರಡು ಮುಖಾಮುಖಿಯಾದ ಪರಿಣಾಮ ಹತ್ತಿರದ ಕೆಲಗೇರಿ ನಿವಾಸಿ ಶಿವಾನಂದ ಮಾಳಗಿ (34) ಸ್ಥಳದಲ್ಲೇ ಮೃತಪಟ್ಟಿದ್ದು, ಕಾರು ಚಾಲಕ ಮಂಜುನಾಥ ಮಾಳಗಿ (28) ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇವರ ಕಾರು ಹುಬ್ಬಳ್ಳಿ ಕಡೆಯಿಂದ ಧಾರವಾಡಕ್ಕೆ ವಾಪಸ್ಸಾಗುತ್ತಿತ್ತು.
ಇದನ್ನು ಓದಿದ್ದೀರಾ? ಧಾರವಾಡ | ಕೆರೆಯಲ್ಲಿ ಮುಳುಗಿ ಯುವಕ ಸಾವು
ಧಾರವಾಡದಿಂದ ಗಗದ ಕಡೆಗೆ ಹಿರಟಿದ್ದ ಕಾರಿನಲ್ಲಿದ್ದ ಗದಗ ಮೂಲದ ಮನೀಶರೆಡ್ಡಿ ಹುಚ್ಚನ್ನವರ, ಮಂಜುನಾತರೆಡ್ಡಿ ಸಾಸಿವೆಹಳ್ಳಿ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.