ಧಾರವಾಡ | ವಸತಿ ಯೋಜನೆಯಡಿ ಮನೆ ನೀಡುವಂತೆ ಪೌರಕಾರ್ಮಿಕರ ಒತ್ತಾಯ

Date:

Advertisements

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 2,165 ಮಂದಿ ಪೌರಕಾರ್ಮಿಕರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಹಾಗೂ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಉಚಿತ ಮನೆಗಳನ್ನು ನಿರ್ಮಿಸಿಕೊಡುವಂತೆ ಆಗ್ರಹಿಸಿ ಪೌರಕಾರ್ಮಿಕರು ಕೇಂದ್ರ ಸಚಿವ ಪ್ರಲ್ಹಾದ್‌ ಜೋಷಿಯವರಿಗೆ ಮನವಿ ಸಲ್ಲಿಸಿದರು.

“ಧಾರವಾಡ ನಗರದ ವಾರ್ಡ್ ನಂ.81ರಲ್ಲಿ ಬರುವ ಕರ್ಕಿಬಸವೇಶ್ವರ ನಗರದಿಂದ ಮಂಟೂರ ರಸ್ತೆಗೆ ಹೊಂದಿಕೊಂಡಿರುವ ಯಲ್ಲಾಪುರ ಗ್ರಾಮದಲ್ಲಿ ಪಾಲಿಕೆ ಒಡೆತನದ 2 ಎಕರೆ 17 ಗುಂಟೆ ಖುಲ್ಲಾ ಜಾಗವಿದ್ದು, ಸದರಿ ಜಮೀನು ಖಾಲಿ ಇದೆ” ಎಂದು‌ ಪೌರಕಾರ್ಮಿಕರು ತಿಳಿಸಿದರು.

“ಯಲ್ಲಾಪುರ ಗ್ರಾಮದ ಮಂಜುನಾಥ ಹನುಮಂತಪ್ಪ ಚನ್ನೋಜಿ ಮತ್ತು ರಮೇಶ ಹನುಮಂತಪ್ಪ ಚನ್ನೋಜಿ ಸದರಿ ಜಮೀನು 5 ಎಕರೆ 6 ಗುಂಟೆ ಇದ್ದು, ಸದರಿಯವರು ಪೌರಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶದಿಂದ ಸದರಿ ಜಮೀನನ್ನು ದಾನಪತ್ರ ಮೂಲಕ 2012ರಲ್ಲಿ ಧಾರವಾಡದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಉಪವಿಭಾಗಕ್ಕೆ ದಾನವಾಗಿ ನೀಡಿದ್ದಾರೆ” ಎಂದು ಮನವಿಯಲ್ಲಿ‌ ತಿಳಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಕೊಡಗು | ವಿದ್ಯಾಭ್ಯಾಸದ ಜತೆಗಿನ ಪೂರ್ವ ನಿಯೋಜಿತ ಗುರಿ, ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಹಕಾರಿ: ಶಾಸಕ ಎ ಎಸ್ ಪೊನ್ನಣ್ಣ

“12 ವರ್ಷಗಳು ಗತಿಸಿದರೂ ದಾನಿಗಳ ಉದ್ದೇಶ ಈಡೇರದೇ ಅರ್ಹ ಪೌರಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಪಾಲಿಕೆಯ ಪೌರಕಾರ್ಮಿಕರು ಅವಳಿನಗರದ ಸ್ವಚ್ಛತೆಗಾಗಿ ತಮ್ಮ ಜೀವದ ಹಂಗುತೊರೆದು ನಾಗರಿಕರ ಆರೋಗ್ಯ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಸದರಿ ಪೌರಕಾರ್ಮಿಕರು ಹಾಗೂ ವಸತಿಹೀನರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತ ಆರ್ಥಿಕನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಉಚಿತ ಮನೆಗಳನ್ನು ನಿರ್ಮಿಸಿ ಕೊಡಬೇಕು” ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಬಸಪ್ಪ ಮಾದರ, ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಸೋಮು ಮೊರಬದ, ಅನಿತಾ ಎನಗೊಂಡ, ನೀಲವ್ವ ಬೆಳವಟಗಿ, ಪಾರವ್ವ ಹೊಸಮನಿ, ಯಲ್ಲಪ್ಪ ಪಾಳೇದ, ರೇಣುಕಾ ನಾಗರಾಳ, ಲಕ್ಷ್ಮೀ ವಾಲಿ, ತಾಯಪ್ಪ ಕಣೇಕಲ್, ಗಂಗಾಧರ ದೊಡ್ಡಮನಿ, ಬಸವರಾಜ ಕುರಕುಂದಿ, ಪರಶುರಾಮ ಕಡಕೋಳ, ಮರೆಪ್ಪ ಬುಕನಟ್ಟಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

Download Eedina App Android / iOS

X