ಒಳಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪರಿಶಿಷ್ಟ ಜಾತಿ ಮತ್ತು ಪಂಗಡ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ವತಿಯಿಂದ ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ಏಳು ನ್ಯಾಯಾಧೀಶರ ಪೂರ್ಣ ಪೀಠವು ಎಸ್ ಸಿ ಮೀಸಲಾತಿಯಲ್ಲಿ ಒಳಮೀಸಲಾತಿ ಉಪ ವರ್ಗಿಕರಿಸಲು ಆಯಾ ರಾಜ್ಯ ಸರಕಾರಕ್ಕೆ ಸಂಪೂರ್ಣ ಹಕ್ಕಿದೆ ಎಂಬ ತೀರ್ಪು ನೀಡಿದೆ. ಈಗಾಗಿ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿ ಘೋಸಿಸಿದಂತೆ ಒಳಮೀಸಲಾತಿ ಜಾರಿಗೊಳಿಸಬೇಕಿದೆ.
ಒಳಮೀಸಲಾತಿ ಸಲುವಾಗಿ ಮೂರು ದಶಕಗಳಿಂದ ಹೋರಾಟಗಳು ನಡೆದಿವೆ. ಹಿಂದಿನ ಬಿಜೆಪಿ ಸರಕಾರವು ಎಸ್ ಸಿ ಮೀಸಲಾತಿಯ ಎಲ್ಲ ಫಲಾನುಭವಿ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಲವು ಸುತ್ತಿನ ಮಾತುಕತೆ ನಡೆಸಿ ಜನಸಂಖ್ಯೆಗೆ ಅನುಗುಣವಾಗಿಯೇ ವೈಜ್ಞಾನಿಕವಾದ ಒಳಮೀಸಲಾತಿಯ ಸೂತ್ರವನ್ನು ರೂಪಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸಿನ ಮಾನದಂಡವನ್ನು ರಾಜ್ಯ ಸರ್ಕಾರ ಅನುಸರಿಸಬೇಕು.
ಇದನ್ನು ಓದಿದ್ದೀರಾ? ಧಾರವಾಡ | ಭೀಕರ ಅಪಘಾತ: ಇಬ್ಬರ ದೇಹಗಳು ಛಿದ್ರ-ಛಿದ್ರ
ಪ್ರತಿಭನೆಯಲ್ಲಿ ಡಾ.ವಿಜಯ ಗುಂಟ್ರಾಳ, ಹನುಮಂತಪ್ಪ ಅಲ್ಕೋಡ್, ಬಸಪ್ಪ ಮಾದರ, ಮೋಹನ ಹಿರೇಮನಿ, ಅಶೋಕ ದೊಡ್ಡಮನಿ, ವೆಂಕಟೇಶ ಸಗಬಾಲ, ಶಿವು ಪೂಜಾರ, ಮರಿಯಪ್ಪ ರಾಮಯ್ಯನವರ, ರಾಜು ಪಾಮಡಿ, ವಿಜಯ ಮುಲಿಮಾನಿ, ಬಸವರಾಜ ಚಳಗೇರಿ, ರವೀಂದ್ರ ಇಟ್ಟಿಗಾರ, ಕಿರಣಕುಮಾರ್ ಸೋಮರಡ್ಡಿ, ಮಂಜುನಾಥ್ ಮಾದರ, ಬಸವರಾಜ ಮಾದರ, ಸಂಗಮೇಶ ಮಾದರ, ಮಹೇಶ ಹುಲ್ಲೆನವರ ಮುಂತಾದವರು ಭಾಗವಹಿಸಿದ್ದರು.