ಎಲ್ಲ ಧರ್ಮೀಯರಲ್ಲಿ ರಾಷ್ಟ್ರೀಯ ಏಕೀಕರಣ ಮತ್ತು ಕೋಮು ಸೌಹಾರ್ದತೆ ಉತ್ತೇಜಿಸುವ ಉದ್ದೇಶದಿಂದ ರಾಜೀವ್ ಗಾಂಧಿ ಜನ್ಮದಿನ ಆಗಸ್ಟ್ 20ನ್ನು ‘ಸದ್ಭಾವನಾ ದಿವಸ್’ ಅಥವಾ ʼಸಾಮರಸ್ಯ ದಿನʼವೆಂದು ಆಚರಿಸಲಾಗುತ್ತದೆ ಎಂದು ಸಹಾಯಕ ಪ್ರಾದ್ಯಾಪಕ ಡಾ ಪೂಜಾರ್ ಹೇಳಿದರು.
ಧಾರವಾಡ ನಗರದ ಅಂಜುಮನ್ ಪದವಿ ಮಹಾವಿದ್ಯಾಲಯದಲ್ಲಿ ಇಎಲ್‌ಸಿ ಮತ್ತು ಎನ್ಎಸ್ಎಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಚಾರ್ಯ ಡಾ ಎನ್ ಎಂ ಮಕಾಂದಾರ ಮಾತನಾಡಿ, “ಜಾತಿ, ಪ್ರದೇಶ, ಧರ್ಮ ಅಥವಾ ಭಾಷೆಯನ್ನು ಲೆಕ್ಕಿಸದೆ ಭಾರತದ ಎಲ್ಲ ಜನರ ಭಾವನಾತ್ಮಕ ಏಕತೆ ಮತ್ತು ಸಾಮರಸ್ಯಕ್ಕಾಗಿ ನಾವೆಲ್ಲರೂ ದುಡಿಯಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಾಲಕಿ ಮೇಲೆ ಅತ್ಯಾಚಾರ; ಅಪ್ಪ, ಮಗನಿಗೆ ಜೈಲು ಶಿಕ್ಷೆ
ಎನ್ಎಸ್ಎಸ್ ಘಟಕದ ಅಧಿಕಾರಿ ಡಾ. ನಾಗರಾಜ್ ಗದಗನವರ ಮಾತನಾಡಿ, “ಆಗಸ್ಟ್ 20ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ʼಸದ್ಭಾವನಾ ದಿವಸ್ʼ ಎಂದು ಆಚರಿಸಲಾಗುತ್ತದೆ” ಎಂದು ತಿಳಿಸಿದರು.
ಇದೇ ವೇಳೆ ಡಾ. ಐ ಎ ಮುಲ್ಲಾ ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆ ಬೋಧಿಸಿದರು.